176.93 ಕೋಟಿ ರೂ.ವ್ಯವಹಾರ, 72.15 ಲಕ್ಷ ರೂ.ನಿವ್ವಳ ಲಾಭ: ಶೇ.25 ಡಿವಿಡೆಂಡ್ ಘೋಷಣೆ
ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2022-23ನೇ ಸಾಲಿನ ಮಹಾಸಭೆಯು ಸೆ.2ರಂದು ಬೆಳಿಗ್ಗೆ ಆಲಂಕಾರಿನಲ್ಲಿರುವ ಸಂಘದ ಪ್ರಧಾನ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಮಾತನಾಡಿ, 32 ವರ್ಷದ ಹಿಂದೆ ಆರಂಭಗೊಡ ಸಂಘವು ಬ್ಯಾಂಕಿಂಗ್ ವ್ಯವಹಾರ ಆರಂಭಿಸಿ 17 ವರ್ಷ ಆಗಿದೆ. ಆಲಂಕಾರಿನಲ್ಲಿ ಸ್ವಂತ ನಿವೇಶನದಲ್ಲಿನ ಬೈದಶ್ರೀ ಸಹಕಾರ ಸೌಧದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಹಾಗೂ ಕೊಯಿಲದಲ್ಲಿ ಶಾಖೆ ಹೊಂದಿದೆ. ವರದಿ ವರ್ಷದಲ್ಲಿ ಸಂಘದಲ್ಲಿ ಗುರಿ ಮೀರಿದ ಸಾಧನೆಯಾಗಿದ್ದು ಪ್ರಧಾನ ಕಚೇರಿಯಲ್ಲಿ 74.16 ಕೋಟಿ ರೂ., ಕಡಬ ಶಾಖೆಯಲ್ಲಿ 37.42ಕೋಟಿ ರೂ., ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖೆಯಲ್ಲಿ 20.96 ಕೋಟಿ ರೂ., ನೆಟ್ಟಣ ಶಾಖೆಯಲ್ಲಿ 27.29 ಕೋಟಿ ರೂ., ಕೊಯಿಲ ಶಾಖೆಯಲ್ಲಿ 17.10 ಕೋಟಿ ರೂ.ವ್ಯವಹಾರ ಸೇರಿ ಒಟ್ಟು ವಾರ್ಷಿಕ 176.93ಕೋಟಿ ರೂ. ವ್ಯವಹಾರ ಆಗಿದೆ. ವ್ಯವಹಾರದಲ್ಲಿ ಕಳೆದ ವರ್ಷಕ್ಕಿಂತ 52 ಕೋಟಿ ರೂ.,ಹೆಚ್ಚಳ ಆಗಿದೆ. ಸಂಘವು 72,15,950 ರೂ.,ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು. ಇದೊಂದು ಜಿಲ್ಲೆಯಲ್ಲಿಯೇ ಆಗಿರುವ ವಿಶಿಷ್ಠ ಸಾಧನೆಯಾಗಿದ್ದು ಸಂಘದ ಸಿಬ್ಬಂದಿಗಳು ಮತ್ತು ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಇತರ ಸಮಾಜದವರೂ ಸಂಘದ ಜೊತೆಗೆ ಪ್ರೀತಿ, ವಿಶ್ವಾಸದಿಂದ ವ್ಯವಹಾರ ನಡೆಸುತ್ತಿದ್ದಾರೆ. ಮುಂದೆ 250 ಕೋಟಿ ರೂ.,ವ್ಯವಹಾರ ಆಗುವಲ್ಲಿ ಸಂಘದ ಸದಸ್ಯರು ಸಹಕಾರ ನೀಡಬೇಕು. ದತ್ತಿನಿಧಿಗೆ ಸಂಬAಧಿಸಿ ಮುಂದೆ ಟ್ರಸ್ಟ್ ರಚನೆ ಮಾಡಲಾಗುವುದು. ಟ್ರಸ್ಟ್ನ ಸದಸ್ಯರ ಅಭಿಪ್ರಾಯದಂತೆ ದತ್ತಿನಿಧಿ ಬಳಕೆ ಮಾಡಲಾಗುವುದು ಎಂದು ಮುತ್ತಪ್ಪ ಪೂಜಾರಿಯವರು ಹೇಳಿದರು.
ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಬಿ.ಸಿ.ರೋಡ್ ಇದರ ಅಧ್ಯಕ್ಷರಾದ ಕೆ.ಸಂಜೀವ ಪೂಜಾರಿಯವರು ಉದ್ಘಾಟಿಸಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 27 ಮೂರ್ತೆದಾರರ ಸಹಕಾರ ಸಂಘಗಳಿದ್ದು ಇದರಲ್ಲಿ ಆಲಂಕಾರು ಮೂರ್ತೆದಾರರ ಸಹಕಾರ ಸಂಘವು ನಂ.1 ಸ್ಥಾನದಲ್ಲಿದೆ. ಮಹಾಸಭೆಯಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ, ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಧನಸಹಾಯ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಯ ಮೂಲಕ ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘವು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಲ್ಲಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ ಅವರು, ಸಹಕಾರ ಸಂಘಗಳು ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಹೇಳಿದರು. ಪ್ರತಿಭಾ ಪುರಸ್ಕಾರ ನೆರವೇರಿಸಿದ ಸಂಘದ ಕಾನೂನು ಸಲಹೆಗಾರ ಮನೋಹರರವರು ಮಾತನಾಡಿ, ಆಲಂಕಾರು ಮೂರ್ತೆದಾರರ ಸಹಕಾರ ಸಂಘವು ಲಾಭದ ಹಿತದೃಷ್ಟಿ ಇಟ್ಟುಕೊಳ್ಳದೇ ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟೂ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿಭಾ ಪುರಸ್ಕಾರ:
ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ಮರ್ದಾಳ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಧನ್ಯ, ದ್ವಿತೀಯ ಸ್ಥಾನ ಪಡೆದ ಕಡಬ ಸರಕಾರಿ ಪ್ರೌಢಶಾಲೆಯ ಆಯಿಷತ್ ಮುಫಿದಾ, ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ದೀಕ್ಷಾ, ದ್ವಿತೀಯ ಸ್ಥಾನ ಪಡೆದ ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ರುಕ್ಸಾನ ಜಾಸ್ಮಿನ್, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಡಬ ಸ್ಯೆಂಟ್ ಜೋಕಿಮ್ಸ್ ಪ.ಪೂ.ವಿದ್ಯಾಲಯದ ಸಂಗೀತಾ, ದ್ವಿತೀಯ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸುಶಾಂತ್, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಹನಾ ಸಿ.ಎಸ್, ದ್ವಿತೀಯ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಂಧ್ಯಾ ಎ, ಮತ್ತು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಕಾಂ ನಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಬಿ, ದ್ವಿತೀಯ ಸ್ಥಾನ ಪಡೆದ ಗಣೇಶ, ಬಿ.ಎ.ಯಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಾ ಎಮ್.ಟಿ ಹಾಗೂ ದ್ವಿತೀಯ ಸ್ಥಾನ ಪಡೆದ ನಿಖೇಶ್ ಎನ್. ಶೆಟ್ಟಿರವರನ್ನು ಗೌರವಿಸಲಾಯಿತು.
ದತ್ತಿನಿಧಿ ವಿದ್ಯಾರ್ಥಿ ವೇತನ:
ಸಂಘದ ಸದಸ್ಯರ ಮಕ್ಕಳ ಪ್ಯೆಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ದಿ. ನೆಯ್ಯಲ್ಗ ಗಿರಿಯಪ್ಪ ಪೂಜಾರಿ, ದಿ. ನೆಯ್ಯಲ್ಗ ದೇರಣ್ಣ ಪೂಜಾರಿ ಮತ್ತು ದಿ. ನೆಯ್ಯಲ್ಗ ಪದ್ಮಾವತಿ, ಕೇರ್ಪುಡೆ ದಿ. ಗುಡ್ಡಪ್ಪ ಪೂಜಾರಿ, ಬದಿಬಾಗಿಲು ದಿ. ಗುಡ್ಡಪ್ಪ ಪೂಜಾರಿ ಮತ್ತು ದಿ. ಶಾಂಭವಿ ಇವರ ಸ್ಮರಣಾರ್ಥ, ಮಾಜಿ ಅಧ್ಯಕ್ಷರಾದ ದಿ. ಚಂದ್ರಶೇಖರ ಆಲಂಕಾರು ಇವರ ಸ್ಮರಣಾರ್ಥ, ಇರಂತೊಟ್ಟು ದಿ.ಬಾಬು ಪೂಜಾರಿ ಸ್ಮರಣಾರ್ಥ, ಗೇರ್ತಿಲ ದಿ. ದೇವು ಪೂಜಾರಿ ಇವರ ಸ್ಮರಣಾರ್ಥ, ದಿ. ಜಿನ್ನಪ್ಪ ಪೂಜಾರಿ ದೋಳ ಇವರ ಸ್ಮರಣಾರ್ಥ, ದಿ. ಮತ್ರಾಡಿ ರಾಮಯ್ಯ ಅಮೀನ್ ಮತ್ತು ಸೀತಮ್ಮ ಸ್ಮರಣಾರ್ಥ ಸುಂದರ ಕರ್ಕೇರ ಮತ್ತು ಶ್ಯಾಮಲ, ದಿ.ವೆಳ್ಳಚ್ಚಿ ಕೃಷ್ಣನ್ ಇವರ ಸ್ಮರಣಾರ್ಥ ಅಶೋಕ್ ಗೋಕುಲನಗರ ಕೊಯಿಲ, ದಿ.ಶ್ರೀಮತಿ ಧನಲಕ್ಶ್ಮಿ ಆಲಂಕಾರು ಇವರ ಸ್ಮರಣಾರ್ಥ ಪವಿತ್ರ ಅಮರನಾಥ್, ಬಟ್ಲಡ್ಕ ದಿ. ಮೋನಪ್ಪ ಪೂಜಾರಿ ಮತ್ತು ದಿ. ಮುತ್ತಕ್ಕ ಅವರ ಸ್ಮರಣಾರ್ಥ ಸಂಜೀವ ಪೂಜಾರಿ ಮತ್ತು ಸುಗಂಧಿ ಇವರು ನೀಡುವ ದತ್ತಿನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಹಿರಿಯ ನಾಗರಿಕರಿಗೆ ಸನ್ಮಾನ:
ಸಂಘದ ಹಿರಿಯ ಮೂರ್ತೆದಾರರ ನೆಲೆಯಲ್ಲಿ ಅಣ್ಣಿ ಪೂಜಾರಿ ಪೆರಾಬೆ, ಚಂದಪ್ಪ ಪೂಜಾರಿ ಮಡ್ಯೊಟ್ಟು, ಶ್ರೀಧರ ಪೂಜಾರಿ ತುಂಬೆತ್ತಡ್ಕ ಇವರುಗಳನ್ನು ಮತ್ತು ಹಿರಿಯ ನಾಗರಿಕರ ನೆಲೆಯಲ್ಲಿ ಸೀತಮ್ಮ ನಡುಮನೆ ಮತ್ತು ಮುತ್ತಕ್ಕ ಸಾಯಿ ನಿಲಯ ಎಣ್ಣೆತ್ತೋಡಿ ಇವರುಗಳಿಗೆ ಶಾಲು, ಹಾರಾರ್ಪಣೆ, ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮೂರ್ತೆದಾರ ಸದಸ್ಯರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಶೇ.100 ಸಾಲವಸೂಲಾತಿಗೆ ಸನ್ಮಾನ:
ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿರುವ ನೆಟ್ಟಣ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್, ಶಾಖಾ ವ್ಯವಸ್ಥಾಪಕ ಸುಂದರ ಪಲ್ಲತ್ತಡ್ಕ ಹಾಗೂ ನೂಜಿಬಾಳ್ತಿಲ-ಕಲ್ಲುಗುಡ್ಡೆಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಕುಸುಮಾಧರ ಎನ್ಕಾಜೆ, ಶಾಖಾ ವ್ಯವಸ್ಥಾಪಕಿ ಶಿಲ್ಪಾ ಕೆ.ಎಸ್.ರವರನ್ನು ಸನ್ಮಾನಿಸಲಾಯಿತು. ಶಾಖೆಯ ಸಿಬ್ಬಂದಿಗಳು, ಸಲಹಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷ/ಉಪಾಧ್ಯಕ್ಷರಿಗೆ ಗೌರವಾರ್ಪಣೆ:
ಸಂಘದ ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ ಅಧ್ಯಕ್ಷ/ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿರುವ ಸಂಘದ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಕೊಯಿಲ ಗ್ರಾ.ಪಂ.ಉಪಾಧ್ಯಕ್ಷ ಯತೀಶ್‌ಕುಮಾರ್, ಐತ್ತೂರು ಗ್ರಾ.ಪಂ.ಅಧ್ಯಕ್ಷೆ ವತ್ಸಲಾ, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಕುಂಞಲಡ್ಡ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಕುಟ್ರುಪ್ಪಾಡಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಧಾಕರ ಪೂಜಾರಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರಿಶ್ಚಂದ್ರ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪದ್ಮಯ್ಯ ಪೂಜಾರಿ ಅವರಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಲಾಯಿತು.
ಮೌನ ಪ್ರಾರ್ಥನೆ:
ಮೇ 26ರಂದು ನಿಧನರಾದ ಸಂಘದ ಮಾಜಿ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು ಹಾಗೂ 2022-23ನೇ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯ ಆರಂಭದಲ್ಲಿ 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ನಿರ್ದೇಶಕರಾದ ಕೆ.ಜಯಕರ ಪೂಜಾರಿ ಕಲ್ಲೇರಿ, ಸೇಸಪ್ಪ ಪೂಜಾರಿ ಕಲ್ಲೇರಿ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಗಂಗಾರತ್ನ ವಸಂತ್ ಅಗತ್ತಾಡಿ, ಜಿನ್ನಪ್ಪ ಸಾಲಿಯಾನ್ ಕಡಬ, ಜಯಪ್ರಕಾಶ್ ದೋಳ, ಜಯಂತ ಪೂಜಾರಿ ನೆಕ್ಕಿಲಾಡಿ, ಸಂತೋಷ್ ಕುಮಾರ್ ಎಂ.ಮತ್ರಾಡಿ, ಮಂಜುಳಾ ಕಲ್ಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಎನ್. ಮುತ್ತಪ್ಪ ಪೂಜಾರಿ ನೈಯ್ಯಲ್ಗ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ವರದಿ ವಾಚಿಸಿದರು. ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ, ಶಾಖಾ ವ್ಯವಸ್ಥಾಪಕ ಸುಂದರ ಪಲ್ಲತಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಶಾಖಾ ವ್ಯವಸ್ಥಾಪಕಿಯರಾದ ರಂಜಿನಿ ಆರ್.ಕೆ., ಶಿಲ್ಪಾ ಕೆ.ಎಸ್., ಶಾಖಾ ವ್ಯವಸ್ಥಾಪಕ ರಕ್ಷಿತ್ ಎ., ಸಿಬ್ಬಂದಿಗಳಾದ ಸ್ವಾತಿ, ಚೈತನ್ಯ, ಶರ್ಮಿಳಾ, ಸಚಿನ್ ಎಸ್.ಸಿ., ಕೀರ್ತನ್ ಕುಮಾರ್ ಎ., ದೀಕ್ಷಿತ್ ಕೆ., ಗೀತೇಶ್, ಅನಿಲ್ ಕುಮಾರ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿ ಮತ್ತು ಚೈತನ್ಯ ಪ್ರಾರ್ಥಿಸಿದರು. ಸಂಘದ ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು. ಪ್ರಗತಿ ಠೇವಣಿ ಸಂಗ್ರಾಹಕರಾದ ಎಸ್.ರಾಮಚಂದ್ರ ನೈಯ್ಯಲ್ಗ, ಎಸ್.ಧನಂಜಯ ನೈಯ್ಯಲ್ಗ, ಶರತ್‌ಕುಮಾರ್ ಬಿ ಎಸ್.,ಶಶಿಧರ ಆರ್.ಕೆ., ಅಜಯ್‌ಕುಮಾರ್ ಕೆ.ಆರ್., ರೋಹಿಣಿ ಎಸ್ ವಾಲ್ತಾಜೆ, ತ್ರಿವೇಣಿ, ಚರಣ್ ವಿ.ಬಿ., ವಿನೀತಾ ಓ.ಡಿ., ಕೌಶಿಕ್ ಸಹಕರಿಸಿದರು.