ದೋಳ್ಪಾಡಿ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಗಿಡಗಳ ನಾಟಿ ಕಾರ್ಯಕ್ರಮ

0

ಕಾಣಿಯೂರು: ಪರಿಸರ ಮಾನವನ ಜೀವನದ ಅವಿಭಾಜ್ಶ ಅಂಗ. ಪರಿಸರ ಸಂರಕ್ಷಣೆ ಪ್ರತಿಯೊಂದು ಜೀವಿಯ ಅಧಿಕಾರ ಹಾಗೂ ಜವಾಬ್ದಾರಿ ಎಂದು ಸವಣೂರು ವಲಯದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಶ್. ಕೆ. ಸವಣೂರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸವಣೂರು ವಲಯದ ದೋಳ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಗಿಡಗಳ ನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರು ಗಿಡ ಮರಗಳಿಂದ ಮಾನವನಿಗೆ ಸಿಗುವ ಶುದ್ದವಾದ ಗಾಳಿಯನ್ನು ಕೃತಕ ಸಿಲಿಂಡರ್ ಮೂಲಕ ಪಡೆಯುವುದಾದರೆ ಮಾನವ ಜೀವಿತಾವಧಿಯಲ್ಲಿ ಕೊಟಿಗಿಂತಲೂ ಹೆಚ್ಚಿನ ಹಣವನ್ನು ವ್ಶಯ ಮಾಡಬೇಕಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಶಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಯಾನಂದರವರು ವಹಿಸಿದರು. ದೋಳ್ಪಾಡಿ ಒಕ್ಕೂಟದ ಅಧ್ಯಕ್ಷರಾದ ಸುಬ್ರಹ್ಮಣ್ಯ, ಶಾಲೆಯ ಮುಖ್ಯಶಿಕ್ಷಕ ಜಯಣ್ಣ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ಲೋಕಯ್ಯ ಪರವ ದೋಳ್ಪಾಡಿ, ತಾಲೂಕು ಕೃಷಿ ಮೇಲ್ವೀಚಾರಕ ಸೋಮೇಶ್ ಉಪಸ್ಥಿತರಿದ್ದರು. ವೇದವ್ಯಾಸ ರೈ ಅವರು ಸ್ವಾಗತಿಸಿದರು. ಶಾಲಾ ಶಿಕ್ಷಕಿಯಾದ ದೀಪಶ್ರೀ ಅವರು ವಂದಿಸಿದರು.ವಲಯ ಮೇಲ್ವೀಚಾರಕಿ ಹರ್ಷ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸಂಘದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here