ಕಡಬ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು ಇದರ ಕಡಬ ಶಾಖೆಯು 14 ವರ್ಷಗಳನ್ನು ಪೂರೈಸಿ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಸಂದರ್ಭದಲ್ಲಿ ಶಾಖೆಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಗಣಹೋಮ ಕಾರ್ಯಕ್ರಮ ಕೆ. ಪ್ರಸಾದ್ ಕೆದಿಲಾಯ ಇವರ ನೇತೃತ್ವದಲ್ಲಿ ಸೆ.3ರಂದು ನಡೆಯಿತು.
ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ, ಕಡಬ ಶಾಖೆಯು ಕಳೆದ ಆರ್ಥಿಕ ವರ್ಷದಲ್ಲಿ 17,79,46,875 ರೂ. ಸಾಲ ನೀಡಿದ್ದು 11,83,70,680 ಠೇವಣಿ ಹಣ ಸ್ವೀಕರಿಸಿ, 64,25,59,130 ವ್ಯವಹಾರ ನಡೆಸಿದೆ. ಹಾಗೂ ಶೇ. 99.38 ಸಾಲ ವಸೂಲಾತಿ ಹೊಂದಿ ಅತ್ಯುತ್ತಮ ಶಾಖೆ ಎಂದು ಗುರುತಿಸಲ್ಪಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕರಾದ ಚಂದ್ರಶೇಖರ ಗೌಡ ಬ್ರಂತೋಡು, ಸಾಂತಪ್ಪ ಗೌಡ ಪಿಜಕಳ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಸಲಹಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಗೌಡ ಕೊಂಬಾರು, ಪುರುಷೋತ್ತಮ ಗೌಡ ಕಳಿಗೆ, ಭಾಸ್ಕರ ಗೌಡ ಎಲುವಾಲೆ, ಕಡಬ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಎ. ಆಲಂಕಾರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಸುರುಳಿ, ಸಂಘದ ಕಾನೂನು ಸಲಹೆಗಾರ, ವಕೀಲ ಜಯಪ್ರಕಾಶ್ ಪಿ.ಟಿ. ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ ಕಣಜಾಲು, ಆಲಂಕಾರು ಶಾಖಾ ವ್ಯವಸ್ಥಾಪಕಿ ರೇವತಿ ಎಚ್., ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ದಿನೇಶ್ ಪಿ. ಕುಂಬ್ರ ಶಾಖಾ ವ್ಯವಸ್ಥಾಪಕ ಹರೀಶ್ ವೈ. ಆಲಂಕಾರು ಶಾಖಾ ಸಿಬ್ಬಂದಿ ವಿಜಯ ಕುಮಾರ್, ಹರೀಶ್ಚಂದ್ರ, ಕೇಂದ್ರ ಕಛೇರಿ ಸಿಬ್ಬಂದಿ ರಕ್ಷಿತ್, ಯಶ್ವಿತ್, ಅಕೌಂಟೆಂಟ್ ಅಶ್ವಿತಾ ಬಿ.ಸಿ., ಗುಮಾಸ್ತ ರಾಧಾಕೃಷ್ಣ ಪಿ, ಅಟೆಂಡರ್ ರಾಜೇಶ್, ಪಿಗ್ಮಿ ಸಂಗ್ರಹಕಾರರಾದ ಯಶೋಧರ, ಮೋನಪ್ಪ, ಪೂರ್ಣಿಮಾ, ಪ್ರಮುಖರಾದ ಸೋಮಪ್ಪ ನಾಯ್ಕ್, ಅಶೋಕ್ ರೈ, ಪೂವಪ್ಪ ಗೌಡ ಪಿಜಕಳ, ನಿತ್ಯಾನಂದ ಒಗ್ಗು ಮೊದಲಾದವರು ಉಪಸ್ಥಿತರಿದ್ದರು. ಸಲಹಾ ಸಮಿತಿಯ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ ಸ್ವಾಗತಿಸಿ, ನಿರ್ದೇಶಕ ಗಣೇಶ್ ಗೌಡ ಮೂಜೂರು ವಂದನಾರ್ಪನೆಗೈದರು.