ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ K-SETನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುತ್ತಿದೆ,ಇದೀಗ ಸರಕಾರದ ಆದೇಶದಂತೆ ಅಧಿಸೂಚನೆಯನ್ನು ಹೊರಡಿಸಿದ್ದು K-SET ಪರೀಕ್ಷೆಯು 05-11- 2023ರಂದು ನಡೆಯಲಿದೆ. ಸೆಪ್ಟೆಂಬರ್ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು KEA ಇದೇ ಮೊದಲ ಬಾರಿಗೆ ಈ ಪರೀಕ್ಷೆಯನ್ನು ನಡೆಸುತ್ತಿದೆ.
ವಿದ್ಯಾಮಟ್ಟ ಅಕಾಡೆಮಿಯಲ್ಲಿ TET/CTET/HSTR/GPSTR ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಉತ್ತಮ ಫಲಿತಾಂಶ ಬಂದಿರುವುದನ್ನು ಗಮನಿಸಬಹುದು ಈ ನಿಟ್ಟಿನಲ್ಲಿ K-SET ಪರೀಕ್ಷೆ ಬರೆಯುವವರಿಗೆ ಆನ್ಲೈನ್ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದ್ದು, ದಿನನಿತ್ಯ ರಾತ್ರಿ 8 ರಿಂದ 9ರವರೆಗೆ(1ಗಂಟೆ) ತರಗತಿಗಳು ನಡೆಯುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು 9620 468869 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರವೇಶಾತಿಯನ್ನು ಪಡೆದುಕೊಳ್ಳಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು ಮತ್ತು ವಿಸ್ಕೃತ ವಿವರಗಳು
♦ಅಧಿಸೂಚನೆ ಹೊರಡಿಸುವ ದಿನಾಂಕ: 05-09-2023
♦ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ: 10-09 2023 ರಿಂದ 30-09-2023
♦ಪರೀಕ್ಷೆ ದಿನಾಂಕ: 05-11-2023
♦K-SET ಪರೀಕ್ಷೆ ಮಾದರಿ: ಈ ಪರೀಕ್ಷೆಯನ್ನು ಒಟ್ಟು 300 ಅಂಕಗಳಿಗೆ ನಡೆಸಲಾಗುತ್ತದೆ.
♦ಪತ್ರಿಕೆ-1 (ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಪತ್ರಿಕೆ): 100 ಅಂಕಗಳಿಗೆ ಇರುತ್ತದೆ.
♦ ಪತ್ರಿಕೆ-2 (ವಿಷಯ ಪತ್ರಿಕೆ) 200 ಅಂಕಗಳಿಗೆ ಇರುತ್ತದೆ.
♦ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು
- ಸಾಮಾನ್ಯ ವರ್ಗದ ಮತ್ತು ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳೊಂದಿಗೆ ಪಾಸ್ ಆಗಿರಬೇಕು.
•ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಎಸ್ಸಿ/ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು.
•ಸ್ನಾತಕೋತ್ತರ ಪದವಿಯಲ್ಲಿ ಮೊದಲ ವರ್ಷ, ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.