ಪುತ್ತೂರು: ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್‌ನ ಅಧಿಕೃತ ಡೀಲರ್ ಎ.ಆರ್.ಎಂ ಮೋಟಾರ್ಸ್ ಇವರ ನೂತನ ಅತ್ಯಾಧುನಿಕ ಸರ್ವಿಸ್ ಸೆಂಟರ್ ಮಂಗಳೂರಿನ ಕಣ್ಣೂರಿನಲ್ಲಿ ಸೆ.6ರಂದು ಶುಭಾರಂಭಗೊಂಡಿತು.
ಕಿಯಾ ಮೋಟರ್ಸ್‌ನ ಡೀಲರ್ ಡೆವಲಪ್‌ಮೆಂಟ್ ಹೆಡ್ ಸ್ಯಾಮ್ ಲೀ ಮತ್ತು ರೀಜನಲ್ ಮ್ಯಾನೇಜರ್ ಜೋಂಗು ರೀವ್‌ರವರು ರಿಬ್ಬನ್ ಕಟ್ ಮಾಡುವ ಮೂಲಕ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೂತನ ಸರ್ವಿಸ್ ಸೆಂಟರಿನ ಅತ್ಯಾಧುನಿಕ ಸವಲತ್ತುಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.
ಕಿಯಾ ಮೋಟಾರ್ಸ್ ರೀಜನಲ್ ಸೇಲ್ಸ್ ಮ್ಯಾನೆಜರ್ ಸುಪ್ರೀತ್, ರೀಜನಲ್ ಸರ್ವೀಸ್ ಮ್ಯಾನೇಜರ್ ಯುವರಾಜ್, ಡೀಲರ್ ಡೆವಲಪ್‌ಮೆಂಟ್ ವಿಫುಲ್ ಕಥರ್, ಏರಿಯಾ ಮ್ಯಾನೆಜರ್ ನಿತಿನ್ ಪಾಟೀಲ್ ಮತ್ತು ಎ.ಆರ್.ರ್ಂ ಮೋಟಾರ್ಸ್‌ನ ಎಂ.ಡಿ ಆರೂರು ಗಣೇಶ್ ರಾವ್, ಡೈರೆಕ್ಟರ್ಸ್ ಆರೂರು ವರುಣ್ ರಾವ್ , ಆರೂರು ವಿಕ್ರಂ ರಾವ್, ಉಪಾಧ್ಯಕ್ಷ ವಿವನ್ ಸೋನ್ಸ್, ಜನರಲ್ ಮ್ಯಾನೆಜರ್ ಶಶಿಕುಮಾರ್ ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಹಕರ ಅನುಕೂಲಕ್ಕಾಗಿ ಎಲ್ಲಾ ಆದಿತ್ಯವಾರವೂ ಸರ್ವಿಸ್ ಸೆಂಟರ್ ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.