ಪಡುಮಲೆ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಬಡಗನ್ನೂರುಃ  ಶ್ರೀ ಕೃಷ್ಣ ಸಂದೇಶ ನಮ್ಮೆಲ್ಲರ ಬಾಳಿಗೆ ಆಶಾ ದಾಯಕವಾಗಲಿ ಎಂದು  ಕೋಟಿ ಚೆನ್ನಯ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ  ಮಹಮ್ಮದ್ ಬಡಗನ್ನೂರು ಹೇಳಿದರು.ಅವರು ಕೋಟಿ ಚೆನ್ನಯ ಯುವಕ ಮಂಡಲ ಪಡುಮಲೆ ಮತ್ತು ಶ್ರೀ ದೈಯಿ ಯುವತಿ ಮಂಡಲ ಪಡುಮಲೆ ಇವುಗಳ ಜಂಟಿ  ಆಶ್ರಯದಲ್ಲಿ ನಡೆಯುವ 22ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಒಂದು ಕಾಲ ಘಟದಲ್ಲಿ ಸಾಂಸ್ಕೃತಿಕ ಪರಂಪರೆ ಕಡಿಮೆಯಾಗುವ ಸಂದರ್ಭದಲ್ಲಿ ಕೋಟಿ ಚೆನ್ನಯ ಎಂಬ ನಾಮಕರಣ ಮಾಡಲಾಗಿತ್ತು. ಆ ಬಳಿಕ   ಅನೇಕ ಸಾಮಾಜಿಕ  ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಕೋಟಿ ಚೆನ್ನಯ ಯುವಕ ಮಂಡಲದ ಮೂಲಕ  ಪಡುಮಲೆ ಹೆಸರು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ನಾಂದಿಯಾಗಿದೆ.. ಪಡುಮಲೆ ಐತಿಹಾಸಿಕ ತಾನವಾಗಿದೆ ಕೋಟಿ ಚೆನ್ನಯರ ಹುಟ್ಟೂರು  ಪಡುಮಲೆ ಹೆಸರು ಜಾಗತಿಕ ಮಟ್ಟದಲ್ಲಿ ಪಸರಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಎಂದ ಅವರು ಪಡುಮಲೆ ಯುವಕ ಮಂಡಲ ಭಾವಕ್ಯತೆ ಸಂಕೇತ  ಜಾತಿ ಮತ್ತು ಧರ್ಮಗಳು ಪ್ರಮುಖವಾಗಿ ಕಂಡು ಬರುವ ಈ ವರ್ತಮಾನ ಕಾಲದಲ್ಲಿ  ಯಾವುದೇ ಜಾತಿ ಬೇಧವಿಲ್ಲದೆ ಸಮಾಜಮುಖಿ ಕಾರ್ಯ ಮಾಡುತ್ತ  ಬ್ರಹ್ಮಶ್ರೀ ನಾರಾಯಣ ಗುರು ಸಂದೇಶವನ್ನು ಇಟ್ಟು ಕೊಂಡು  ಕೆಲಸ ಮಾಡುತ್ತ ಯಾರು ಕಷ್ಟದಲ್ಲಿರುವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಮುಂದೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಅಭಿವೃದ್ಧಿ ಸಾಗಲಿ   ಶ್ರೀ ಕೃಷ್ಣ ಪರಮಾತ್ಮನ ಸಂದೇಶ  ನಮ್ಮಲ್ಲರ ಬಾಳಿಗೆ  ಮತ್ತು ಪಾಲಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಶ್ರೀ ಕೃಷ್ಣ ಲೀಲೆ ಬಗ್ಗೆ ಮಾತನಾಡಿ ಶುಭ ಹಾರೈಸಿದರು

ಬಡಗನ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ  ರವಿರಾಜ ರೈ ಸಜಂಕಾಡಿ ಮಾತನಾಡಿ ಸಂಘಟನೆ ಪ್ರೀತಿ ವಿಶ್ವಾಸ ಸಂಕೇತ  ಶ್ರೀ ಕೃಷ್ಣ ಜನ್ಮಾಷ್ಠಮಿ ನಮ್ಮೆಲ್ಲರಿಗೆ  ಆಶಾದಾಯಕವಾಗಲಿ ಎಂದು ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ ಈಶ್ವರಮಂಗಲ ಮಂಡಲ ಪಂಚಾಯತ್ ನ ಮಾಜಿ ಮಂಡಲ ಉಪಪ್ರಧಾನ ರಾದ ಬಾಲಕೃಷ್ಣ ರೈ ಕುದ್ದಾಡಿ ಮಾತನಾಡಿ ಕೋಟಿ ಚೆನ್ನಯ ಯುವಕ ಮಂಡಲ ಅನೇಕ ಸಮಾಜಮುಖಿ ಮತ್ತು ಸಾಂಸ್ಕೃತಿಕ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದೆ. ಪಡುಮಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರಕಾರ ಕಳೆದ ಅವದಿಯ ಬಜೆಟ್ ನಲ್ಲಿ 5 ಕೋಟಿ ಬಿಡುಗಡೆ ಮಾಡಿದ್ದು  ಆ ಹಣ ಹಾಗೆಯೇ ಇದೆ ಮುಂದಿನ ದಿನಗಳಲ್ಲಿ ಪಡುಮಲೆ ಅಭಿವೃದ್ಧಿ ಪಡಿಸುವ ಬಗ್ಗೆ  ಶಾಸಕರೋಂದಿಗೆ  ಮಾತನಾಡಲಾಗಿದೆ. ಮುಂದೆ ಒಂದು ದಿನ ಪಡುಮಲೆ ಐತಿಹಾಸಿಕ ಕೆಂದ್ರವಾಗಿ ಹೊರಹಮ್ಮಲಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಸ.ಹಿ ಪ್ರಾ ಶಾಲೆ ಕೊಯಿಲ ಬಡಗನ್ನೂರು  ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಾಕಾಶ್ ರೈ ಕೊಯಿಲ, ಬಡಗನ್ನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಮಾಜಿ ಅಧ್ಯಕ್ಷ ಮಹಾಲಿಂಗ ಪಾಟಾಳಿ, , ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷ ಹರೀಶ್ ಮೈಂದನಡ್ಕ ಉಪಸ್ಥಿತರಿದ್ದರು.

ಗೋಪಾಲ ದೊಡ್ಡಡ್ಕ, ಸತೀಶ್ ರೈ ಮೈಂದನಡ್ಕ, ,ಚಂದ್ರಶೇಖರ ಏರಾಜೆ, ವಸಂತ ಮೈಂದನಡ್ಕ ವಿಶ್ವನಾಥ ಪರವ, ಸಂಸುದ್ದೀನ್, ಅಬ್ದುಲ್ ರಹಮಾನ್ ಮೈಂದನಡ್ಕ,  ಆಸ್ಕರ್, ಮಣಿತ್ ರೈ ಕುದ್ದಾಡಿ  ಹೂ  ಮತ್ತು ಶಾಲು ನೀಡಿ ಗೌರವಿಸಿದರು.ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ದಾಡಿ ಸ್ವಾಗತಿಸಿದರು  ಕೋಟಿ ಚೆನ್ನಯ ಯುವಕ ಮಂಡಲದ ಕಾರ್ಯದರ್ಶಿ ಬಾಬು ಬಿ ವಂದಿಸಿದರು. ಮಾಜಿ ಅಧ್ಯಕ್ಷ ಸುರೇಶ್ ರೈ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ, ಶಾಲ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here