ಪುತ್ತೂರು: ಕುಂಬ್ರ ಪರಿಸರದಲ್ಲಿ ವಾರಗಳ ಹಿಂದೆ ನಡೆದ ಸರಕಾರಿ ಕಛೇರಿಗಳಲ್ಲಿ ಕಳ್ಳತನ ಹಾಗೂ ನೆರೆಯ ಗ್ರಾಮದಲ್ಲಿ ನಡೆದ ಮನೆ ದರೋಡೆ ಈ ಬಗ್ಗೆ ಗ್ರಾಮಸ್ಥರ ಜಾಗೃತಿಗಾಗಿ ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಸೆ.13ರಂದು ಅಪರಾಹ್ನ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಕುಂಬ್ರದಲ್ಲಿ ಪಂಚಾಯತ್ ಕಛೇರಿ, ಗ್ರಾಮ ಆಡಳಿತ ಅಧಿಕಾರಿ ಕಛೇರಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರ ಕಛೇರಿ, ಮುಖ್ಯಗುರುಗಳ ಕಛೇರಿಗೆ ಕಳ್ಳರು ನುಗ್ಗಿ ನಗದು ಕಳ್ಳತನ ನಡೆದಿದ್ದು ಇದಲ್ಲದೆ ಕಳೆದ ಹಲವು ವರ್ಷಗಳಿಂದ ಕುಂಬ್ರದ ಅಂಗಡಿಮುಂಗಟ್ಟುಗಳಲ್ಲಿ ಕಳ್ಳತನ ನಡೆಯುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಜಾಗೃತರಾಗಬೇಕಾದ ಅಗತ್ಯತೆ ಇದೆ. ಆದ್ದರಿಂದ ಈ ಸಭೆಗೆ ಗ್ರಾಮಸ್ಥರು, ವರ್ತಕರು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಕಾರ್ಯಾಧ್ಯಕ್ಷ ಎ.ರಕ್ಷಿತ್ ರೈ ಮುಗೇರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.