ಪುತ್ತೂರು: ಜೇಸಿಐ ಸಪ್ತಾಹ ಅಂಗವಾಗಿ ಪುತ್ತೂರು ಜೆಸಿಐ ವತಿಯಿಂದ ಅಶಕ್ತ ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಜೇಸಿಐ ಅಡ್ಮಿನ್ ಆಫೀಸ್ ನಲ್ಲಿ ಜರುಗಿತು.ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪಿಪಿಪಿ ಮುರಳೀಶ್ಯಾಮ್ ಕಿಟ್ ವಿತರಣೆ ಮಾಡಿದರು .ಕಾರ್ಯಕ್ರಮವನ್ನು ಸಂಯೋಜಕ ಜೆಸಿ ಮೋಹನ್ ಕೆ ಸ್ವಾಗತಿಸಿ, ಕಾರ್ಯದರ್ಶಿ ಜೆಸಿ ಕಾರ್ತಿಕ್ ಬಿ ವಂದಿಸಿದರು.ಕಾರ್ಯಕ್ರಮದಲ್ಲಿ .ಅಧ್ಯಕ್ಷ ಸುಹಾಸ ಎ.ಪಿ.ಎಸ್, ಐಪಿಪಿ ಜೆಸಿ ಶಶಿರಾಜ್ ರೈ,ಸಂಯೋಜಕ ಜೆಸಿ ಚೇತನ್, ಜೇಸಿ ವಾಣಿ ಉಪಸ್ಥಿತರಿದ್ದರು.
