ಅ.19 ಮಂಗಳೂರಿನಲ್ಲಿ ಕಾಸ್ಮಿಕ್ ಶಕ್ತಿ ಪೂರಣ,ರಾಜಕ್ರಿಯಾ ರೇಕಿ ತರಬೇತಿ

0

ಪುತ್ತೂರು: ನಿತ್ಯಾನಂದ ಧ್ಯಾನ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ -ಕರಂಗಲ್ಪಾಡಿಯಲ್ಲಿರುವ ಮೆಡಿಕೇರ್ ಸೆಂಟರ್‌ನ ಮೊದಲ ಮಹಡಿಯಲ್ಲಿ ಕಾಸ್ಮಿಕ್ ಶಕ್ತಿ ಪೂರಣ ತರಬೇತಿ ಹಾಗೂ ರಾಜಕ್ರಿಯಾ ರೇಕಿ ತರಬೇತಿ ಶಿಬಿರ ಅ.19 ರಂದು ಬೆಳಿಗ್ಗ 11 ರಿಂದ ಸಾಯಂಕಾಲ 4ರವರೆಗೆ ನಡೆಯಲಿದೆ.


ಕಾಸ್ಮಿಕ್ ಶಕ್ತಿ ಪೂರಣ ತರಬೇತಿಯಲ್ಲಿ ಅತ್ಯುತ್ತಮ ಆರೋಗ್ಯದ ಜೊತೆ ನಮ್ಮ ಆಯಸ್ಸನ್ನು ಹಲವಾರು ವರ್ಷ ಜಾಸ್ತಿ ವಿಸ್ತರಿಸುವ ಉಸಿರಾಟದ ವಿಶಿಷ್ಟ ಪ್ರಕ್ರಿಯಾ ತರಬೇತಿ ನೀಡಲಾಗುವುದು. ರಾಜಕೀಯ ರೇಖಿ ತರಬೇತಿಯಲ್ಲಿ ಆರೋಗ್ಯ, ಆಧ್ಯಾತ್ಮಿಕತೆ, ಸಂಬಂಧಗಳ ಸುಧಾರಣೆ, ದುಷ್ಟತನಗಳಿಂದ ನಿವೃತ್ತಿ, ಆರ್ಥಿಕ ಅಭಿವೃದ್ದಿ ಇತ್ಯಾದಿ ಪ್ರಯೋಜನಗಳನ್ನು ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ 9744275999,9449639340 ಸಂಪರ್ಕಿಸಬಹುದೆಂದು ತರಬೇತುದಾರರಾದ ಡಾ.ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here