ವಳಾಲು ಹಾಲು ಉ.ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

4.13 ಲಕ್ಷ ರೂ.ನಿವ್ವಳ ಲಾಭ; ಶೇ.15 ಡಿವಿಡೆಂಡ್, ಪ್ರತೀ ಲೀ.ಹಾಲಿಗೆ 56 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ 2022-2023ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.12ರಂದು ಬೆಳಿಗ್ಗೆ ಸಂಘದ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ವಸಂತ ಗೌಡ ಪಿಜಕ್ಕಳ ಅವರು ಮಾತನಾಡಿ, ಸಂಘವು 31ನೇ ರ‍್ಷದಲ್ಲಿ ಮುನ್ನಡೆಯುತ್ತಿದ್ದು ಪ್ರಸ್ತುತ 276 ಸದಸ್ಯರಿದ್ದು 58,800 ಪಾಲು ಬಂಡವಾಳವಿದೆ. 2022-23ನೇ ಸಾಲಿನಲ್ಲಿ 1,11,18,859 ರೂ.ಮೌಲ್ಯದ ಹಾಲು ಸಂಗ್ರಹಣೆಯಾಗಿದೆ. ಪಶು ಆಹಾರ ಖರೀದಿಸಿ ಹಾಲು ಉತ್ಪಾದಕರಿಗೆ ವಿತರಣೆ ಮಾಡಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ’ಎ’ ಶ್ರೇಣಿ ಪಡೆದುಕೊಂಡಿದೆ. 4,13,667 ರೂ.ನಿವ್ವಳ ಲಾಭ ಬಂದಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 56 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.


ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್, ವಿಸ್ತರಣಾಧಿಕಾರಿ ಮಾಲತಿ ಅವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ವಿವಿಧ ರೀತಿಯ ಸವಲತ್ತು, ಜಾನುವಾರು ವಿಮೆ ಕುರಿತಂತೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸುಧಾಕರ ಯನ್.ನಿರ್ದೇಶಕರಾದ ಎಸ್.ಹೊನ್ನಪ್ಪ ಗೌಡ, ದಾಮೋದರ ಗೌಡ ಎಸ್., ಡಿ.ಕುಶಾಲಪ್ಪ ಗೌಡ, ಅಣ್ಣಿ ಪೂಜಾರಿ, ರಾಮಪ್ಪ ಪೂಜಾರಿ, ಸದಾನಂದ ಗೌಡ, ಪಿ.ಸುಲೋಚನಾ, ಸುಶೀಲ ಪಿ., ಕಮಲ, ಯಮುನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ವರದಿ ಮಂಡಿಸಿದರು. ಪಿ.ವಸಂತ ಗೌಡ ಸ್ವಾಗತಿಸಿ, ಸುಧಾಕರ ಎನ್.ವಂದಿಸಿದರು. ಹಾಲು ಪರೀಕ್ಷಕ ಶಬೀರ್, ಬಿ.ಎಂ.ನಿರ್ವಾಹಕ ಸಿದ್ದಾರ್ಥ್ ಟಿ.ಜೆ., ಸಹಾಯಕ ಯತೀಶ್ ಗೌಡ ಡಿ.ಎಸ್., ಕೃತಕ ಗರ್ಭಧಾರಣಾ ಕಾರ್ಯಕರ್ತ ಎ.ಕಿಶೋರ್ ಮಾಡ್ತಾ ಅವರು ಸಹಕರಿಸಿದರು.

ಬಹುಮಾನ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಅನಂತನಾಭ ಆರಾಲು(ಪ್ರಥಮ), ಸದಾನಂದ ಗೌಡ ಕೆಳಗಿನಮನೆ(ದ್ವಿತೀಯ) ಹಾಗೂ ತಿಮ್ಮಪ್ಪ ಗೌಡ ಪಟ್ಟೆ(ತೃತೀಯ)ಬಹುಮಾನ ಪಡೆದುಕೊಂಡರು. 500 ಲೀ.ಗಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here