ಅರಿಯಡ್ಕ: ಅರಿಯಡ್ಕ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುವ ಜನಸ್ನೇಹಿ ಪವರ್ ಮ್ಯಾನ್ ಪ್ರಕಾಶ್ ಪವಾರ್ ಬಾಗಲಕೋಟೆ ಗೆ ವರ್ಗಾವಣೆಗೊಂಡಿದ್ದು ಸೆ.13 ರಂದು ಅರಿಯಡ್ಕ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಬಾರಿ ಸುದ್ದಿ ಸಮೂಹ ಸಂಸ್ಥೆ ಏರ್ಪಡಿಸಿದ್ದ ಭ್ರಷ್ಟಾಚಾರ ರಹಿತ ಜನಸ್ನೇಹಿ ಪವರ್ ಮ್ಯಾನ್ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂಚಾಯತ್ ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ,ಎ.ಪಿ.ಎಂ.ಸಿ ಯ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಡಿ ಪಾಪೆಮಜಲು, ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಕುರಿಂಜ, ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರುತ್ತಾರು ಮಾತಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಮೀನಾಕ್ಷಿ ಪಾಪೆಮಜಲು ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಅಬ್ದುಲ್ ರಹಿಮಾನ್ ಕಾವು, ಸೌಮ್ಯಾ ಬಾಲಸುಬ್ರಹ್ಮಣ್ಯ, ಸಲ್ಮಾ ಕಾವು, ರಾಜೇಶ್ ತ್ಯಾಗರಾಜೆ, ಉಷಾರೇಖಾ ರೈ ಅಮೈ , ಸದಾನಂದ ಮಣಿಯಾಣಿ ಕೊಪ್ಪಳ, ಸಾವಿತ್ರಿ ಪೊನ್ನೆತ್ತಳ್ಕ, ಭಾರತಿ ವಸಂತ್ ಕೌಡಿಚ್ಚಾರು, ನಾರಾಯಣ ನಾಯ್ಕ ಚಾಕೋಟೆ, ಅನಿತಾ ಆಚಾರಿ ಮೂಲೆ, ಹೇಮಾವತಿ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ವಿನುತಾ ಬಳ್ಳಿಕಾನ, ಮತ್ತು ಪುಷ್ಪಲತಾ ಮರತ್ತಮೂಲೆ , ಕುಂಬ್ರ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ಅರಿಯಡ್ಕ ತಿಮ್ಮಪ್ಪ ರೈ ಪಾಪೆಮಜಲು, ಮಡ್ಯಂಗಳ ನಾರಾಯಣ ರೈ , ಸಚಿನ್ ಪಾಪೆಮಜಲು, ಅಮ್ಮಣ್ಣ ರೈ ಪಿ.ಬಿ ಪಾಪೆಮಜಲು,ನಹುಷ ಭಟ್ ಪಳನೀರು, ಬಾಲಚಂದ್ರ ಗೌಡ, ರಾಧಾ ಕೃಷ್ಣ ರೈ ಬಳ್ಳಿಕಾನ, ಹರಿಶ್ಚಂದ್ರ ಆಚಾರ್ಯ ಕೌಡಿಚ್ಚಾರು, ಮುಕುಂದ ಕುತ್ಯಾಡಿ, ವೇದಾವತಿ ಹೊಸಗದ್ದೆ, ಪಂಚಾಯತ್ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.ಪಂಚಾಯತ್ ಪಿ.ಡಿ.ಓ ಪದ್ಮಾ ಸ್ವಾಗತಿಸಿ ವಂದಿಸಿದರು.