ಬೀರ ಮಲೆ ಬೆಟ್ಟದಲ್ಲಿ ರಮಾನಾಥ ರೈ ರವರ 72ನೇ ಹುಟ್ಟುಹಬ್ಬ ಆಚರಣೆ- ಇಂಟರ್ಲಾಕ್ ಉದ್ಘಾಟನೆ, ಬಟ್ಟೆ ವಿತರಣೆ

0

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು ರವರ ನೇತೃತ್ವದಲ್ಲಿ ಮಾಜಿ ಸಚಿವ ರಮಾನಾಥ ರೈ ರವರ 72ನೇ ಹುಟ್ಟುಹಬ್ಬವನ್ನು ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞ ಆಶ್ರಮದ ವಿಕಲಚೇತನರೊಂದಿಗೆ ಆಚರಿಸಲಾಯಿತು. ವಿಕಲ ಚೇತನರೊಂದಿಗೆ ಊಟವನ್ನು ಸವಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾಜಿ ಸಚಿವ ರಮಾನಾಥ ರೈ ಅವರು ರೋಷನ್ ರೈ ಬನ್ನೂರುರವರು ಸುಮಾರು 50 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಇಂಟರ್ಲಾಕ್‌ನ ಉದ್ಘಾಟನೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪ್ರಜ್ಞಾ ಆಶ್ರಮದ ವಿಕಲಚೇತನರಿಗೆ ಬಟ್ಟೆಯನ್ನು ವಿತರಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ರೋಷನ್ ರೈ ಯವರು ರಮಾನಾಥ ರೈ ಗೆ ಕೇಕನ್ನು ತಿನಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು


ಸನ್ಮಾನ:
72ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ರಮಾನಾಥ ರೈರವರಿಗೆ ಸನ್ಮಾನಿಸಲಾಯಿತು. ಶಾಲು ಹೊದಿಸಿ ಫಲ ಪುಷ್ಪವನ್ನು ನೀಡಿ ಪೇಟ ಧರಿಸಿ ಸನ್ಮಾನಿಸಲಾಯಿತು.


ಸಾರ್ವಜನಿಕರ ಪ್ರೀತಿಗೆ ಬೆಲೆಕಟ್ಟಲು ಅಸಾಧ್ಯ ರಮನಾಥ ರೈ
ನನಗೆ ಸಾಮಾಜಿಕ ಬದುಕಿನಲ್ಲಿ ಅನೇಕ ವರ್ಷ ಸಮಾಜ ಸೇವೆ ಮಾಡುವ ಅವಕಾಶ ಜನತೆ ನನಗೆ ನೀಡಿದ್ದಾರೆ. ಜನರು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಅಸಾಧ್ಯವಾಗಿದೆ ಎಂದು ರಮನಾಥ ರೈ ಅವರು ಹೇಳಿದರು. ರಾಜಕೀಯದಲ್ಲಿ ಸೋಲು ಗೆಲುವು ಸ್ವಾಭಾವಿಕ. ನನಗೆ ಕಾಂಗ್ರೆಸ್ ಪಕ್ಷ ಒಂಬತ್ತು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. 9 ಬಾರಿ ಸ್ಪರ್ಧಿಸುವುದು ಅದು ಕಡಿಮೆ ಅವಕಾಶ ಅಲ್ಲ ಸಣ್ಣ ವಯಸ್ಸಿನಲ್ಲಿ ಬ್ಯಾಂಕಿನ ಅಧ್ಯಕ್ಷನಾಗಿ ರಾಜಕೀಯಕ್ಕೆ ಪ್ರವೇಶಿಸಿದ ನಾನು ಸಣ್ಣ ಪ್ರಾಯದಲ್ಲಿ ಶಾಸಕನಾಗಿ ಬಳಿಕ ಸಚಿವನಾಗಿ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುವ ಅವಕಾಶ ನನ್ನ ಪಾಲಿಗೆ ಬಂತು ಎಂದವರು ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವಾಗ ಎಷ್ಟೋ ಜನರ ಸಂಪರ್ಕ ಗಳಿಸಿದರೊಂದಿಗೆ ಅವರ ಹಿತ ಕಾಪಾಡುವ ಕೆಲಸ ಮಾಡಿದ್ದೇನೆ ಎಂದರು. ರಾಜಕೀಯವಾಗಿ ನನಗೆ ಹಲವಾರು ಅವಕಾಶ ಸಿಕ್ಕಿದರು ಯಾವುದೇ ತಪ್ಪು ಮಾಡದೆ ಸ್ವಚ್ಛ ಸೇವೆ ನೀಡಿದ್ದೇನೆ. ಇದರಿಂದ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಧರ್ಮ ಎಂಬುದಿದೆ. ಆದರೆ ನನಗೆ ಕಾಂಗ್ರೆಸ್ ಪಕ್ಷವೇ ನನ್ನ ಧರ್ಮ ಅದನ್ನು ಜೀವನದಲ್ಲಿ ಎಂದಿಗೂ ಬಿಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಎಂದು ಅವರು ಹೇಳಿದರು. ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟ ಕಾಂಗ್ರೆಸ್ಸಿನ ಒಬ್ಬ ನಿಷ್ಠಾವಂತ ಕಾರ್ಯಕರ್ತ ರೋಷನ್ ರೈ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘ ನೀಯ ಎಂದು ಹೇಳಿ ರೋಷನ್ ರೈವರಿಗೆ ಅಭಿನಂದಿಸಿದರು.


ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಮಾತನಾಡಿ ವೋಟಿನಲ್ಲಿ ರಮನಾಥ ರೈ ಸೋತಿರಬಹುದು ಆದರೆ ಜನಮಾನಸದಲ್ಲಿ ಅವರು ಸೋಲಲಿಲ್ಲ. ನಿಮ್ಮ ಮೇಲೆ ಜನರ ಪ್ರೀತಿ ಸದಾ ಇರಲಿ ನೀವು ನೂರು ವರ್ಷಗಳ ಕಾಲ ಜನರ ಪ್ರೀತಿ ವಿಶ್ವಾಸ ಗಳಿಸುತ್ತಾ ಸದಾ ಚಟುವಟಿಕೆಯಲ್ಲಿ ನಿರತರಾಗುವಂತಾಗಲು ದೇವರು ನಿಮಗೆ ಅನುಗ್ರಹಿಸಲಿ ಎಂದು ಹಾರೈಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ನಿಷ್ಠೆ ರಾಮನಾಥ ರೈ ಯವರ ಜೀವನಾಡಿಯಾಗಿದೆ. ಯಾವುದೇ ಒಂದು ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡಿಸಿ ಕೊಡುವ ಕಾರಣ ರಮನಾಥ ರೈ ಇವತ್ತು ಕೂಡ ಜನರ ಪ್ರೀತಿ ವಾತ್ಸಲ್ಯಕ್ಕೆ ಕಾರಣರಾಗಿದ್ದಾರೆ. ಅವರು ನೂರು ವರ್ಷಗಳ ಕಾಲ ಚೆನ್ನಾಗಿ ಬಾಳಿ ಬದುಕಲಿ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ರಾಜಾರಾಮ ಕೆ ವಿ ರವರು ಮಾತನಾಡಿ ನಮ್ಮ ಜಿಲ್ಲೆಯ ರಾಜ್ಯದ ಧೀಮಂತ ನಾಯಕ, ಓರ್ವ ಪ್ರಬುದ್ಧ ರಾಜಕಾರಣಿ, ಕಾಂಗ್ರೆಸ್ ಸಿದ್ಧಾಂತವನ್ನು ಜಾತ್ಯತೀತ ಸಿದ್ದಾಂತವನ್ನಾಗಿ ರಕ್ತಗತ ಮಾಡಿಕೊಂಡು ಅದನ್ನು ಅಕ್ಷರಸಃ ಪಾಲಿಸಿ ಬಡವರ ಸೇವೆ ಮಾಡುವಂತಹ ರಮಾನಾಥ ರೈರವರು ನೂರು ವರ್ಷಗಳ ಪ್ರೀತಿ ವಿಶ್ವಾಸ ಸಂತೋಷದಿಂದ ಬದುಕುವಂತಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂಎಸ್ ಮೊಹಮ್ಮದ್, ಕೆಪಿಸಿಸಿ ಸದಸ್ಯ ಡಾಕ್ಟರ್ ರಘು ಬೆಳ್ಳಿಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಕುರಿಯ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಿಲ್ಲಾ ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಮಲ್ಲಿಕಾ ಪಕಲ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ರೈ ಅಂಕೋತಿಮಾರ್, ಉಮೇಶ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಪಿವಿ, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾರದಾ ಅರಸು, ಪಿಪಿ ವರ್ಗೀಸ್, ಸಾಹೀರ ಬಾನು, ಅಬ್ದುಲ್ ರಹಮಾನ್ ಹಾಜಿ, ಸಂತೋಷ್ ಭಂಡಾರಿ ಚಿನ್ನುತ್ತಾರ, ಎಪಿಎಂಸಿ ಮಾಜಿ ನಿರ್ದೇಶಕ ಕಾರ್ತಿಕ್ ರೈ ಬೆಳ್ಳಿಪಾಡಿ, ಪರ್ವೀನ್ ಪಿಎಸ್ ನೆಲ್ಲಿಕಟ್ಟೆ, ಹಸೈನಾರ್ ಬನಾರಿ, ವಿಟ್ಲ ಕಾಂಗ್ರೆಸ್ಸಿನ ಮುಖಂಡರುಗಳಾದ ರಮನಾಥ ವಿಟ್ಲ, ವಿಕೆಎಂ ಆಶ್ರಫ್, ಶ್ರೀನಿವಾಸ ಶೆಟ್ಟಿ ಕೊಯ್ಲ, ರಿಯಾಜ್ ಬನ್ನೂರು, ಸಿದ್ದಿಕ್ ಸುಲ್ತಾನ್, ಹಬೀಭ್ ಕಣ್ಣೂರು, ಯುವ ಕಾಂಗ್ರೆಸ್ ನ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ, ಸಿಯಾನ್ ದರ್ಬೆ, ಹನೀಫ್ ಮಾಡಾವು, ಗುರುಪ್ರಸಾದ್ ರೈ, ದಾಮೋದರ ಭಂಡಾರ್ಕರ್, ಉಷಾ ಅಂಚನ್, ವಿಕ್ರಂ ಶೆಟ್ಟಿ, ಅಂತರ ಶಶಿಕಿರಣ ರೈ ನೂಜಿಬೈಲು, ಚಂದ್ರಶೇಖರ, ಸುದೇಶ್ ಕುಮಾರ್ ಬೋಲೋಡಿ, ಚಂದ್ರಹಾಸ ರೈ, ಪ್ರಕಾಶ ರೈ, ಜಯಂತ ನಗರ, ಪ್ರಹಲ್ಲಾದ್ ಬೆಳ್ಳಿಪಾಡಿ ಸಹಿತ ಹಲವಾರು ಮಂದಿ ಉಪಸಿತರಿದ್ದರು.

ಸ್ವಾಗತಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರ್‌ರವರು ದೇಶ ರಾಜ್ಯ ಕಂಡ ಅಪ್ರತಿಮ ರಾಜಕಾರಣಿ ರಮಾನಾಥ ರೈಯವರು ಕಾಂಗ್ರೆಸ್ಸಿನ ರಕ್ತದ ಕಣಕಣದಲ್ಲೂ ತನ್ನ ಬೆವರನ್ನು ರಕ್ತವನ್ನಾಗಿ ರೂಪಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರು 72ನೇ ವರ್ಷದ ಹುಟ್ಟುಹಬ್ಬ ಆಚರಿಸುವುದರೊಂದಿಗೆ ಮುಂದೆ ಶತ ವರ್ಷ ಪೂರೈಸಲಿ ಎಂದು ಹಾರೈಸಿದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ರವರು ವಂದಿಸಿ ಮಾತನಾಡಿ ರಮನಾಥ ರೈ ಅವರ ಸೇವೆ ಇಡೀ ದೇಶವೇ ಕಂಡಂತಾಗಿದೆ. ಅವರು ನೂರಾರು ವರ್ಷಗಳ ಕಾಲ ಜನರ ಸೇವೆ ಮಾಡುತ್ತಾ ಬರುವಂತಾಗಲಿ ಎಂದು ಹಾರೈಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here