ಸೆ.16 ಸಂಘದ ವಾರ್ಷಿಕ ಮಹಾಸಭೆ- ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ರೂ.73.5 ಲಕ್ಷ ಲಾಭ: ಪ್ರಕಾಶ್ಚಂದ್ರ ರೈ ಕೈಕಾರ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು 2022-23 ನೇ ಅಡಿಟ್ ನಡೆದು ಸತತ 7 ವರ್ಷಗಳಿಂದ ಎ ತರಗತಿ ಅಡಿಟ್ ವರ್ಗೀಕರಣದೊಂದಿಗೆ ವರದಿ ವರ್ಷದಲ್ಲಿ ರೂ.252 ಕೋಟಿ 42 ಲಕ್ಷ ಒಟ್ಟು ವ್ಯವಹಾರ ನಡೆಸಿ ಶೇ.99 ಸಾಲ ವಸೂಲಾತಿಯೊಂದಿಗೆ ರೂ.73,50,574.92 ನಿವ್ವಳ ಲಾಭ ಗಳಿಸಿದೆ. ಸಂಘವು ಕಳೆದ 5 ವರ್ಷಗಳಿಂದ ಡಿಸಿಸಿ ಬ್ಯಾಂಕ್‌ನಿದ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡು ಬಂದಿದೆ. ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.16 ರಂದು ಬೆಳಿಗ್ಗೆ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ತಿಳಿಸಿದ್ದಾರೆ.


ಸಂಘದಲ್ಲಿ ವರ್ಷಾಂತ್ಯಕ್ಕೆ 3,881 ಮಂದಿ ಸದಸ್ಯರಿದ್ದು ರೂ.3,88,72,295.00 ಪಾಲು ಬಂಡವಾಳವಿರುತ್ತದೆ ಸರಕಾರದ ಯಾವುದೇ ಪಾಲು ಬಂಡವಾಳ ಇರುವುದಿಲ್ಲ. ವಿವಿಧ ಠೇವಣಿಗಳಾಗಿ ವರ್ಷಾಂತ್ಯಕ್ಕೆ ರೂ.23,35,87,543.24 ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್‌ನಿಂದ ಪಡೆದ ಸಾಲಗಳಲ್ಲಿ ವರ್ಷಾಂತ್ಯಕ್ಕೆ ರೂ.28,40,42,320.00 ಇದೆ. ಸದಸ್ಯ ಸಾಲಗಳಲ್ಲಿ ವರ್ಷಾಂತ್ಯಕ್ಕೆ ರೂ.34,67,26,424.00 ಸದಸ್ಯರ ಸಾಲ ಹೊರಬಾಕಿ ಇರುತ್ತದೆ. ಸಾಲ ವಸೂಲಾತಿಯಲ್ಲಿ ಶೇ.99 ಪ್ರಗತಿ ಸಾಧಿಸಲಾಗಿದೆ. ವ್ಯಾಪಾರ ವಹಿವಾಟುನಲ್ಲಿ ರೂ.3,06,892.22 ಲಾಭ ಗಳಿಸಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.


ಸೆ.16: ವಾರ್ಷಿಕ ಮಹಾಸಭೆ
ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.16 ರಂದು ಬೆಳಿಗ್ಗೆ ಸಂಘದ ಪ್ರಧಾನ ಕಛೇರಿಯ ನವೋದಯ ರೈತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಘದ ಸರ್ವ ಸದಸ್ಯರುಗಳು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ ಸಂಘವು ವರದಿ ವರ್ಷದಲ್ಲಿ ರೂ.252 ಕೋಟಿ 42 ಲಕ್ಷ ಒಟ್ಟು ವ್ಯವಹಾರ ನಡೆಸಿ ರೂ.73,50,574 ನಿವ್ವಳ ಲಾಭ ಗಳಿಸಿದೆ. ಸಂಘವು ಎ ತರಗತಿ ವರ್ಗೀಕರಣದೊಂದಿಗೆ ಉತ್ತಮ ವ್ಯವಹಾರ ನಡೆಸಲು ಕಾರಣೀಕರ್ತರಾದ ಸರ್ವರಿಗೂ ಕೃತಜ್ಞತೆಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸೆ.16 ರಂದು ನಡೆಯುವ ಮಹಾಸಭೆಗೆ ಸರ್ವ ಸದಸ್ಯರಿಗೆ ಆತ್ಮೀಯ ಆಮಂತ್ರಣ.”
ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಕುಂಬ್ರ ಪ್ರಾ.ಕೃ.ಪ.ಸ.ಸಂಘ

LEAVE A REPLY

Please enter your comment!
Please enter your name here