ಪುತ್ತೂರು:ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನವಿಜ್ಞಾನ ಮೇಳವು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ – ಕಲಬುರುಗಿಯಲ್ಲಿ ಸೆ.1ರಿಂದ 3ವರೆಗೆ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜ್ಞಾನ ಮಾದರಿ ತಯಾರಿಯಲ್ಲಿ 8ನೇ ತರಗತಿಯ ಶಮನ್ ಎನ್ ಪ್ರಥಮ ಸ್ಥಾನ ಹಾಗೂ ಪ್ರೀತಿ.ಪಿ.ಪ್ರಭು(8ನೇ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ 8ನೇ ತರಗತಿಯ ನಿರೀಕ್ಷಿತ್ ಹೆಗ್ಡೆ, ಗೌತಮಕೃಷ್ಣ (8 ನೇ) ಮತ್ತು 7ನೇ ತರಗತಿಯ ಶುಭನ್ ಈ 3 ವಿದ್ಯಾರ್ಥಿಗಳ ತಂಡ – ತೃತಿಯ ಸ್ಥಾನ ಪಡೆದು ಪ್ರಾಂತೀಯ ಮಟ್ಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.