ಸ್ಪೆಲ್ ಬಿ ಸ್ಪರ್ಧೆ- ಸುದಾನ ಶಾಲೆಯ ವಿದ್ಯಾಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿ ಕೊಯಮತ್ತೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಹೀಗಿದೆ :
2ನೇ ಕೆಟಗರಿಯಲ್ಲಿ 3ನೇತರಗತಿಯ ಅದ್ವಿಕಾ ಎನ್ ಶೆಟ್ಟಿ (1 ರ‍್ಯಾಂಕ್), ಸಂಭ್ರಮ್ ಎನ್ ವಿ (19ನೇ ರ‍್ಯಾಂಕ್), ಪ್ರಥು ಕೆ (21ನೇ ರ‍್ಯಾಂಕ್) ನೇ ಕೆಟಗರಿಯಲ್ಲಿ 4ನೇ ತರಗತಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಮೈಝ್ ಎಂ. ಜಿ (13ನೇ ರ‍್ಯಾಂಕ್), ವೈಷ್ಣವಿ ಬಿ (18ನೇ ರ‍್ಯಾಂಕ್), 4ನೇ ಕೆಟಗರಿಯಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀರಾಮ ಪಿ. ಬಿ (25ನೇ ರ‍್ಯಾಂಕ್), ದತ್ತಚರಣ ಸಿ. ಎಸ್ (26ನೇ ರ‍್ಯಾಂಕ್), 5ನೇ ಕೆಟಗರಿಯಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಇಂಪನಾ ಸಿ. ಭಟ್(5ನೇ ರ‍್ಯಾಂಕ್) 6ನೇ ಕೆಟಗರಿಯಲ್ಲಿ 7ನೇ ತರಗತಿಯ ಸಾನ್ವಿತಾ ಎಂ ರೈ(23ನೇ ರ‍್ಯಾಂಕ್) ಮತ್ತು 7ನೇ ಕೆಟಗರಿಯಲ್ಲಿ 8ನೇ ತರಗತಿಯ ಸಮನ್ವಿತಾ ಶರ್ಮ (30ನೇ ರ‍್ಯಾಂಕ್) ವಿಜೇತರಾಗಿದ್ದಾರೆ. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ. ಇದನ್ನು ಶಾಲೆಯ ಲಹರಿ ಸಾಹಿತ್ಯ ಸಂಘವು ಆಯೋಜಿಸಿತ್ತು

LEAVE A REPLY

Please enter your comment!
Please enter your name here