ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಲ್ಲಾ ರೀತಿಯ ಚರ್ಮ ರೋಗ ನಿವಾರಣಾ ಕೊಡಿಪಾಡಿ ತೀರ್ಥವು ಸೆ.೧೫ರಂದು ನಡೆಯಿತು.
ಮುಂಜಾನೆ ಗಂಗಾಪೂಜೆಯ ಬಳಿಕ ತೀರ್ಥ ಸ್ನಾನ ಆರಂಭಗೊಂಡಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಳಕಿಲ್ಲಾಯರವರು ವಿಧಿವಿಧಾನ ನೆರವೇರಿಸಿದರು. ತೀರ್ಥ ಸ್ನಾನದ ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಊರಪರವೂರ ಸಾವಿರಾರು ಭಕ್ತಾಧಿಗಳು ತೀರ್ಥ ಸ್ನಾನಗೈದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಇಲ್ಲಿನ ತೀರ್ಥಸ್ನಾನಕ್ಕೆ ವಿಶೇಷ ಹಿನ್ನೆಲೆಯಿದೆ
ಕ್ಷೇತ್ರದಲ್ಲಿ ತೀರ್ಥಸ್ನಾನ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಇಲ್ಲಿನ ತೀರ್ಥಸ್ನಾನಕ್ಕೆ ವಿಶೇಷ ಹಿನ್ನೆಲೆಯಿದೆ. ಯಾವುದೇ ತರಹದ ಚರ್ಮ ವ್ಯಾಧಿ ಇದ್ದರೆ ಕ್ಷೇತ್ರಕ್ಕೆ ಹರಕೆ ಹೇಳಿದಲ್ಲಿ ಅದು ಶಮನವಾಗುತ್ತದೆ. ಅದರಿಂದ ಪ್ರಯೋಜನ ಪಡೆದ ಊರಪರವೂರ ಸಾವಿರಾರು ಮಂದಿ ಕ್ಷೇತ್ರಕ್ಕೆ ಆಗಮಿಸಿ ಮೂಡೆ ಅಕ್ಕಿ ಸಮರ್ಪಿಸಿ ತೀರ್ಥ ಸ್ನಾನ ಗೈದಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳು ಹೆಚ್ಚು ಹೆಚ್ಚು ಸೇರುತ್ತಿದ್ದು, ಈ ಬಾರಿ ನಮ್ಮ ನಿರೀಕ್ಷೆಗೂ ಮೀರಿದ ಭಕ್ತಸಮೂಹ ಆಗಮಿಸಿ ತೀರ್ಥಸ್ನಾನಗೈದಿದ್ದಾರೆ.
ಜನಾರ್ದನ ಕೆ. ಎರ್ಕಡಿತ್ತಾಯ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು
ಶ್ರೀಜನಾರ್ದನ ದೇವಸ್ಥಾನ ಕೊಡಿಪಾಡಿ