ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

36.31 ಕೋಟಿ ರೂ. ವ್ಯವಹಾರ,
1.43 ಕೋಟಿ ರೂ. ತೆರಿಗೆ ಪಾವತಿ
28.78 ಲಕ್ಷ ರೂ.,ನಿವ್ವಳ ಲಾಭ


ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.16ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಮಾತನಾಡಿ, ಸಂಘವು ಹಿರಿಯ ಸಹಕಾರಿಗಳ ಮಾರ್ಗದರ್ಶನ ಮತ್ತು ಸದಸ್ಯರ ಸಹಕಾರದೊಂದಿಗೆ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಂಘವು 2022-23ನೇ ಸಾಲಿನಲ್ಲಿ 36.31 ಕೋಟಿ ರೂ.ವ್ಯಾಪಾರ ವಹಿವಾಟು ಮಾಡಿದ್ದು ಸರಕಾರಕ್ಕೆ 1,43,79,841 ರೂ.,ತೆರಿಗೆ ಪಾವತಿಸಿದೆ. 10.15 ಕೋಟಿ ರೂ.ಠೇವಣಿ ಇದೆ. 3.41 ಕೋಟಿ ರೂ.ಹೊರಬಾಕಿ ಸಾಲ ಇದೆ. ಖಾಸಗಿ ವ್ಯಾಪಾರಿಗಳಿಂದ ಸ್ಪರ್ಧೆ ಹಾಗೂ ರಬ್ಬರ್ ಧಾರಣೆಯಲ್ಲಿ ವರ್ಷವಿಡೀ ತೀವ್ರ ಏರಿಳಿತ ಇದ್ದರೂ 28.78 ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರು ಸಂಘದ ಜೊತೆಗೆ ಹೆಚ್ಚಿನ ವ್ಯವಹಾರವನ್ನು ಮಾಡಿ ಸಂಘ ಬಲಿಷ್ಠಗೊಳ್ಳಲು ಸಹಕರಿಸಬೇಕೆಂದು ಹೇಳಿದರು. ಕಚ್ಚಾ ರಬ್ಬರ್ ವ್ಯವಹಾರದಲ್ಲಿ 1,05,42,782.39 ರೂ.ಲಾಭ ಬಂದಿದೆ. ರಬ್ಬರ್ ಕೃಷಿಸಲಕರಣೆ, ರಾಸಾಯನಿಕ ಮಾರಾಟದಲ್ಲಿ 27,29,870 ರೂ.ಲಾಭ ಬಂದಿದೆ. ಮುಂದಿನ ವರ್ಷದಿಂದ ಸಂಘಕ್ಕೆ ರಬ್ಬರ್ ಹಾಕಿದ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ಬೋನಸ್ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

ಷೇರು ಮೊತ್ತ ಹೆಚ್ಚಳಕ್ಕೆ ನಿರ್ಣಯ:
ಪ್ರಸ್ತುತ 200 ರೂ.,ಇರುವ ಷೇರು ಮೊತ್ತವನ್ನು ರೂ.500ಕ್ಕೆ ಹೆಚ್ಚಳ ಹಾಗೂ ಒಬ್ಬ ವ್ಯಕ್ತಿಗೆ ಗರಿಷ್ಠ 20 ಷೇರು ನೀಡಲು ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರಬ್ಬರ್ ಬೆಳೆಗಾರರಿಗೆ ವಿಮೆ ಯೋಜನೆ, ಪ್ರೋತ್ಸಾಹಧನ ನೀಡುವಂತೆ ಗಿರಿಧರ್ ಅವರು ಮನವಿ ಮಾಡಿದರು.

ಕಮಿಷನ್ ವಿಚಾರ, ಚರ್ಚೆ:
ಕೆಯ್ಯೂರು-ಕೆದಂಬಾಡಿ ರಬ್ಬರ್ ಬೆಳೆಗಾರರ ಸಂಘಕ್ಕೆ ಕಮಿಷನ್ ನೀಡುವುದಕ್ಕೆ ಆಡಿಟ್‌ನಲ್ಲಿ ಆಕ್ಷೇಪಣೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಮಿಷನ್ ನೀಡುವುದನ್ನು ಸ್ಥಗಿತಗೊಳಿಸಿದ್ದೇವೆ ಎಂದು ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ಕೆಯ್ಯೂರು-ಕೆದಂಬಾಡಿ ರಬ್ಬರ್ ಬೆಳೆಗಾರರ ಸಂಘದ ಮನವಿಗೆ ಪ್ರತಿಕ್ರಿಯಿಸಿದರು. ಇದನ್ನು ಮತ್ತೆ ಮುಂದುವರಿಸುವಂತೆ ಸಂಘದವರು ಮಹಾಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಆಡಳಿತ ಮಂಡಳಿ ಹಾಗೂ ಲೆಕ್ಕ ಪರಿಶೋಧಕರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ಅತೀ ಹೆಚ್ಚು ರಬ್ಬರ್ ಹಾಕಿದ ಸದಸ್ಯರಿಗೆ ಸನ್ಮಾನ:
2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಹಾಕಿದ ಸದಸ್ಯರನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು. ನೆಲ್ಯಾಡಿ ಕೇಂದ್ರ ಕಚೇರಿ-ಪ್ರವೀಣ್ ಕುಮಾರ್ ಜಿ.ಗಾಣದಮೂಲೆ, ವಾಯುಪ್ರಭ ಹೆಗ್ಡೆ ಶಾಂತಿಮಾರು, ಸಂತೋಷ್ ಕೆ.ಎಮ್., ಕಡಬ ಶಾಖೆ-ಅಜಿತ್ ಶೆಟ್ಟಿ, ಕೃಷ್ಣಪ್ರಸಾದ್ ಭಟ್ ಕೋಡಿಂಬಾಳ, ರೋಯ್ ಅಬ್ರಹಾಂ ಕುಂತೂರುಪದವು, ಪುತ್ತೂರು ಶಾಖೆ-ಗಿರೀಶ್‌ಕೃಷ್ಣ ಪಾಣಾಜೆ, ಜಗತ್ಪಾಲ ಆರಿಗ, ಸುರೇಶ್‌ಕುಮಾರ್ ಸೊರಕೆ, ಈಶ್ವರಮಂಗಲ-ನವೀನ್‌ಕುಮಾರ್ ಕೆ.ನೆಟ್ಟಣಿಗೆ, ಗೌತಮ್ ರೈ, ಅಜಿತ್‌ಕುಮಾರ್ ರೈ, ಕೆಯ್ಯೂರು ರಬ್ಬರ್ ಖರೀದಿ ಕೇಂದ್ರ-ಜಯರಾಮ ರೈ ಎ.ಕೆ., ಮೋಹನ್ ರೈ ಎನ್., ರಶ್ಮಿ ಎಮ್ ರೈ, ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರ-ಜನಾರ್ದನ ಎಸ್., ಪಾಪಚ್ಚನ್ ಒ., ನಾರಾಯಣ ಗೌಡ ಬಿ., ಉಪಖರೀದಿ ಕೇಂದ್ರ-ಸುಬ್ರಹ್ಮಣ್ಯ ಶಬರಾಯ, ಸಾಬು ಇ.ಎಮ್., ಮ್ಯಾಥ್ಯು ವಿ.ಎಮ್‌ರವರನ್ನು ಸನ್ಮಾನಿಸಲಾಯಿತು.

ಹಿರಿಯ ರಬ್ಬರ್ ಬೆಳೆಗಾರರಿಗೆ ಗೌರವಾರ್ಪಣೆ:
ಹಿರಿಯ ರಬ್ಬರ್ ಬೆಳೆಗಾರರಾದ ಬೌತೀಸ್ ಡಿ.ಸೋಜ ಕೊಕ್ಕಡ, ನಾರಾಯಣ ಭಟ್ ಕೆ.ಕಲ್ಪುರೆ, ಗೀತಾ ಸಿ.ವೈ.ಚಿಕ್ಕಮುಡ್ನೂರು, ಕೆ.ತ್ಯಾಂಪಣ್ಣ ರೈ ಅರಿಯಡ್ಕ,ಎ.ಲಕ್ಷ್ಮೀನಾರಾಯಣ ಶೆಟ್ಟಿ ಕೆದಂಬಾಡಿ, ಈಪನ್ ಪಿ.ಜೆ.ಇಚ್ಲಂಪಾಡಿ, ರವಿಪ್ರಸಾದ್ ಆಚಾರ್ಯ ಕೌಕ್ರಾಡಿ ಅವರನ್ನು ಗೌರವಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಮಾರಾಟ ಮಾಡಿದ ಖಾಸಗಿ ಮಾರಾಟಗಾರರಾದ ಕಡಬ ಕರಾವಳಿ ಟ್ರೇಡಿಂಗ್ಸ್‌ನ ಮಾಲಕ ತಾಜುದ್ದೀನ್ ಹಾಗೂ ಸುಳ್ಯ ಸುಫಾರಿ ಸೆಂಟರ್‌ನ ಮಾಲಕ ಅಬ್ಬಾಸ್‌ರವರನ್ನು ಗೌರವಿಸಲಾಯಿತು. 2022-23ನೇ ಸಾಲಿನಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಶಾಖೆಗಳನ್ನು ಮತ್ತು ರಬ್ಬರ್ ಖರೀದಿ ಕೇಂದ್ರಗಳನ್ನು ಗುರುತಿಸಿ ಗೌರವಿಸಲಾಯಿತು. ಠೇವಣಿ ಸಂಗ್ರಹಣೆ, ಸಾಲ ವಿತರಣೆಯಲ್ಲೂ ಸಾಧನೆ ಮಾಡಿದ ಶಾಖೆಗಳನ್ನು ಗೌರವಿಸಲಾಯಿತು.


ಸಂಘದ ಉಪಾಧ್ಯಕ್ಷ ರೋಯ್ ಅಬ್ರಹಾಂ, ಸಿ.ಜಾರ್ಜ್‌ಕುಟ್ಟಿ ಉಪದೇಶಿ, ಎನ್.ವಿ.ವ್ಯಾಸ, ರಮೇಶ ಕಲ್ಪುರೆ, ಸುಭಾಷ್ ನಾಯಕ್ ಎಸ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ಕೆ., ವರದಿ ಮಂಡಿಸಿದರು. ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸ್ವಾಗತಿಸಿ, ಉಪಾಧ್ಯಕ್ಷ ರಾಯ್ ಅಬ್ರಹಾಂ ವಂದಿಸಿದರು. ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರದ ರುಕ್ಮಯ ಗೌಡ ನಿರೂಪಿಸಿದರು. ಸಿಬ್ಬಂದಿಗಳು ಪ್ರಾರ್ಥಿಸಿದರು. ಶೇಷಪತಿ ಜಿ.ರೈ ಗುತ್ತುಪಾಲು, ಮಹೇಂದ್ರ ವರ್ಮ, ವರ್ಗೀಸ್ ಮಾದೇರಿ, ಎ.ಲಕ್ಷ್ಮೀನಾರಾಯಣ ಶೆಟ್ಟಿ ಮತ್ತಿತರರು ಸಲಹೆ ಸೂಚನೆ ನೀಡಿದರು.

ಗ್ರಾ.ಪಂ.ನಿಂದ 10ಸೆಂಟ್ಸ್ ಜಾಗಕ್ಕೆ ಮನವಿ:
ಸಂಘದ ಪ್ರಧಾನ ಕಚೇರಿಯ ಪಕ್ಕದಲ್ಲಿಯೇ ದಾಸ್ತಾನು ಕೊಠಡಿ ನಿರ್ಮಾಣ ಸಂಬಂಧ 10 ಸೆಂಟ್ಸ್ ಜಾಗ ನೀಡಲು ಈ ಹಿಂದೆ ನೆಲ್ಯಾಡಿ ಗ್ರಾ.ಪಂ. ನಿರ್ಣಯ ಕೈಗೊಂಡಿತ್ತು. ಆದರೆ ಗ್ರಾ.ಪಂ.ನ ಈಗಿನ ಆಡಳಿತ ಮಂಡಳಿ ಎನ್‌ಒಸಿ ನೀಡಲು ನಿರಾಕರಿಸುತ್ತಿದೆ. ಆದರೂ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಮತ್ತೊಮ್ಮೆ ಪಂಚಾಯತ್‌ಗೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿಸುತ್ತಾ ತಿಳಿಸಿದರು.

ವೀಲ್ ಚಯರ್ ವಿತರಣೆ:
ನಾಲ್ವರು ವಿಕಲಚೇತನರಿಗೆ ಈ ಸಂದರ್ಭದಲ್ಲಿ ವೀಲ್ ಚಯರ್ ವಿತರಣೆ ಮಾಡಲಾಯಿತು. ಪ್ಲೋರಿನಾ, ಬೀಪಾತುಮ್ಮ, ರಶೀಧ ಹಾಗೂ ಜೋಯಲ್‌ರವರಿಗೆ ವೀಲ್ ಚಯರ್ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here