ಕುಂಬ್ರ: ಮದುವೆ ಮಂಟಪದಲ್ಲಿ ಮಾದಕ ದ್ರವ್ಯದ ವಿರುದ್ಧ ಜನಾಂದೋಲನ

0

ಪುತ್ತೂರು:ಮದುವೆ ವೇದಿಕೆಯಲ್ಲಿ ಮಾದಕ ದ್ರವ್ಯದ ಕುರಿತು ಜನಾಂದೋಲನ ಕಾರ್ಯ ನಡೆದ ಪ್ರಸಂಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಮೇಲ್ವಿಚಾರಕ ಕಮಾಲುದ್ದೀನ್ ರವರ ವಿವಾಹ ಸಮಾರಂಭದಲ್ಲಿ ನಡೆಯಿತು.

ಕುಂಬ್ರದ ಪರ್ಪುoಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಖ್ಯಾತ ಧಾರ್ಮಿಕ ಪಂಡಿತರು, ರಾಜಕೀಯ, ಸಾಮಾಜಿಕ ಮತ್ತು ಮೊಹಲ್ಲಾಗಳ ಧುರೀಣರು, ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯುವ ಪೀಳಿಗೆ ನಶೆ, ದ್ರವ್ಯ ಮಾದಕಗಳಿಗೆ ಒಳಗಾಗುತ್ತಿದ್ದು ಅದರಿಂದಾಗುವ ದುಷ್ಪರಿಣಾಮದ ಕುರಿತಾಗಿ ಜಾಗೃತಿ ಮೂಡಿಸಿದರು. ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್, ಗಾಂಧಿ ನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮುಸ್ತಫ ಸುಳ್ಯ, ಮುಡಿಪು ಮಜ್ಲಿಸ್ ಸ್ಥಾಪಕ ಅಸ್ಸಯ್ಯದ್ ಅಶ್ರಫ್ ತಂಞಳ್ ಆದೂರ್, ಮೊದಲಾವರು ಜಾಗೃತಿ ಸಂದೇಶ ನೀಡಿದರು. 40 ಸಾವಿರ ಜನರು ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಿದರು.



LEAVE A REPLY

Please enter your comment!
Please enter your name here