ಕಡಬ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಉಚಿತ ರಕ್ತದೊತ್ತಡ, ರಕ್ತದ ಗುಂಪು ಪರೀಕ್ಷಾ ಶಿಬಿರ

0

ಕಡಬ: ಸುವಿನ್ ಮಾಲಕತ್ವದ ಕಡಬ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಉಚಿತ ರಕ್ತದೊತ್ತಡ, ರಕ್ತದ ಗುಂಪು ಪರೀಕ್ಷಾ ಶಿಬಿರ ಸೆ.17ರಂದು ನಡೆಯಿತು. ಶಿಬಿರವನ್ನು ರಿಟೇರ್ಡ್ ಎಸ್‌ಐ ಡಿ. ಬಾಬು ಗೌಡ ಹಾಗೂ ಸುವಿನ್ ಮತ್ತು ಅವರ ಪತ್ನಿ ಡಾ. ಹರ್ಷಿತ,ಖ್ಯಾತ ಹೃದ್ರೋಗ ತಜ್ಞ ಡಾ. ಬಿ ಸುದೇಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಖ್ಯಾತ ಹೃದ್ರೋಗ ತಜ್ಞ ಡಾ. ಬಿ ಸುದೇಶ್ ಶೆಟ್ಟಿ 50%ರಿಯಾಯಿತಿಯಲ್ಲಿ ಹೃದಯ ತಪಾಸಣೆ ನಡೆಸಿದರು.ಸೊಸೈಟಿ ಅಧ್ಯಕ್ಷ ರಮೇಶ್ ಕಲ್ಪುರೆ , ಕೃಷ್ಣ ಶೆಟ್ಟಿ ಕಡಬ,ಡಾ. ಬಾಲ ಸುಬ್ರಮಣ್ಯ, ಡಾ.ಸಿ ಕೆ ಶಾಸ್ತ್ರಿ, ಡಾ.ತ್ರಿಮೂರ್ತಿ ಡಾ. ಚೈತನ್ಯ, ಡಾ. ಪ್ರಜ್ವಲ್ ಆಗಮಿಸಿ ಶುಭ ಹಾರೈಸಿದರು. ಶಿಬಿರಕ್ಕೆ ಕೊಕ್ಕಡ ಲಕ್ಷ್ಮಿ ಮೆಡಿಕಲ್ ಮತ್ತು ಕಡಬ ಕ್ಲಿನಿಕಲ್ ಲ್ಯಾಬೊರೇಟರಿಯ ಸಿಬ್ಬಂದಿಗಳು ಸಹಕರಿಸಿದರು.ಸುಮಾರು 300ರಕ್ಕೂ ಹೆಚ್ಚು ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here