ಪುತ್ತೂರು: ದಕ್ಷಿಣ ಏಷ್ಯಾದ ಮೊತ್ತ ಮೊದಲ ಸ್ವಯಂ ಪ್ರಾಯೋಜಿತ ರೋಟಾರ್ಯಾಕ್ಟ್ ಈ ಕ್ಲಬ್ ಮಂಗಳೂರು ಯುನೈಟೆಡ್ ವತಿಯಿಂದ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಅಂಗವಾಗಿ ಪುತ್ತೂರಿನಿಂದ ಕುಶಾಲನಗರ ತನಕ ’ರೈಡ್ ಫಾರ್ ರೋಡ್ ಸೇಫ್ಟೀ’ ವಿನೂತನ ಬೈಕ್ ರ್ಯಾಲಿಗೆ ಸೆ.16ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಸ್ವತಃ ಬೈಕ್ ಚಲಾಯಿಸಿ ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಪಬ್ಲಿಕ್ ಇಮೇಜ್ ಚೈರ್ಮ್ಯಾನ್ ವಿಶ್ವಾಸ್ ಶೆಣೈ ರಸ್ತೆ ಸುರಕ್ಷತಾ ಜಾಗೃತಿ ಪತ್ತ ಬಿಡುಗಡೆಗೊಳಿಸಿದರು. ಅಸಿಸ್ಟೆಂಟ್ ಗವರ್ನರ್ ನರಸಿಂಹ ಶೆಣೈ, ರೋಟರಿ ಯುವ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಗ್ಲೋಬಲ್ ಗ್ರಾಂಟ್ ಚೈರ್ಮ್ಯಾನ್ ಆಸ್ಕರ್ ಆನಂದ್, ರೋಟಾರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ ಉಪಸ್ಥಿತರಿದ್ದರು. ರೋಟಾರ್ಯಾಕ್ಟ್ ಮಂಗಳೂರು ಯುನೈಟೆಡ್ ಅಧ್ಯಕ್ಷ ಯತಿನ್ ಕುಮಾರ್ ರೈ ಸ್ವಾಗತಿಸಿ, ಕ್ಲಬ್ ರಾಯಬಾರಿ ಡಾ. ಹರ್ಷ ಕುಮಾರ್ ರೈ ಮಾಡಾವು ವಂದಿಸಿದರು. ರೋಟಾರ್ಯಾಕ್ಟ್ ಕ್ಲಬ್ನ 30ಕ್ಕೂ ಅಧಿಕ ಮಂದಿ ಸದಸ್ಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ದೇಶದಲ್ಲಿ ರಸ್ತೆ ಅಪಘಾತದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದರಿಂದ ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್ ಕೇಶವ್ ಅವರ ನಾಯಕತ್ವದಲ್ಲಿ ರೋಟರಿಯ ಮೂಲಕ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ರಸ್ತೆ ಅಪಘಾತವನ್ನು ತಡೆಗಟ್ಟುವ ನಿಟ್ಟನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಾಗುತ್ತಿದೆ.
ಡಾ. ಹರ್ಷಕುಮಾರ್ ರೈ ಮಾಡಾವು,
ಜಿಲ್ಲಾ ಚೈರ್ಮ್ಯಾನ್
ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ