ಪುತ್ತೂರು: ರಿಫಾಯಿಯ್ಯ ದಫ್ ಕಮಿಟಿ ಅಜ್ಜಿಕಟ್ಟೆ ಹಾಗೂ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಸಹಯೋಗದೊಂದಿಗೆ ಮರ್ಹೂಂ ಮುಸ್ತಫಾ ಹಾಜಿ ಕೆಂಪಿ, ಮರ್ಹೂಂ ಇಸ್ಮಾಯಿಲ್ ಕೋಡಿಜಾಲ್ ಮತ್ತು ಮರ್ಹೂಂ ಇಸ್ಮಾಯಿಲ್ ಹಾಜಿ ಬೆದ್ರಾಳ ಇವರುಗಳ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಸೆ.17ರಂದು ಅಜ್ಜಿಕಟ್ಟೆ ಮದ್ರಸ ವಠಾರದಲ್ಲಿ ನಡೆಯಿತು. 52 ಮಂದಿ ರಕ್ತದಾನ ಮಾಡಿದರು.
ಅಜ್ಜಿಕಟ್ಟೆ ಮಸೀದಿಯ ಖತೀಬ್ ಇಸಾಕ್ ದಾರಿಮಿ ದುವಾ ಮತ್ತು ಉದ್ಘಾಟನೆ ನೆರವೇರಿಸಿದರು. ರೋಟರಿ ಬ್ಲಡ್ ಬ್ಯಾಂಕ್ನ ಡಾ.ರಾಮಚಂದ್ರ ಭಟ್ ಮಾತನಾಡಿ ರಕ್ತದಾನದ ಮಹತ್ವ ಹಾಗೂ ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ರಕ್ತದಾನ ಹಾಗೂ ಮೂವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ ಅಜ್ಜಿಕಟ್ಟೆ ರಿಫಾಯಿಯ್ಯ ದಫ್ ಕಮಿಟಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಜ್ಜಿಕಟ್ಟೆ ಜಮಾಅತ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಂಡೂರು ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರೆಕೆ, ಅಜ್ಜಿಕಟ್ಟೆ ಮಸೀದಿಯ ಗೌರವಾಧ್ಯಕ್ಷ ಇಬ್ರಾಹಿ ಮುಲಾರ್, ಶಬ್ಬೀರ್ ಕೆಂಪಿ, ಅಬ್ದುಲ್ ರಹಿಮಾನ್ ಬೆದ್ರಾಳ, ರಶೀದ್ ಹಾಜಿ ನೈತಾಡಿ, ಉಸ್ಮಾನ್ ಅಜ್ಜಿಕಟ್ಟೆ, ಸುಪ್ರೀತ್ ಕಣ್ಣರಾಯ, ಮಹೇಶ್ಚಂದ್ರ ಸಾಲ್ಯಾನ್, ನೇಮಾಕ್ಷ ಸುವರ್ಣ, ಚರಣ್ರಾಜ್ ರೈ ಮಠ, ರಝಾಕ್ ಮುಲಾರ್, ಇಬ್ರಾಹಿಂ ಹಾಜಿ ಅಜ್ಜಿಕಟ್ಟೆ, ಮುಸ್ತಫಾ ಮುಲಾರ್, ಆದಂ ಕುಂಞಿ ಅಜ್ಜಿಕಟ್ಟೆ, ಖಾಲಿದ್ ಅಕ್ರಂ ಅಸ್ಲಮಿ, ಹಾಗೂ ಖಾಲಿದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಸನ್ಮಾನ:
ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆಗಾಗಿ ಸಂತೋಷ್ ವೇಗಸ್ ಹಾಗೂ ರವಿಚಂದ್ರರವನ್ನು ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಜನಪ್ರಿಯ ಅಂಬ್ಯುಲೆನ್ಸ್ ಚಾಲಕ ಇಬ್ರಾಹಿಂ ಮುಸ್ತಫ ಇಡಬೆಟ್ಟುರವನ್ನು ಸನ್ಮಾನಿಸಲಾಯಿತು.
ರಿಫಾಯಿಯ್ಯ ದಫ್ ಕಮಿಟಿ ಅಧ್ಯಕ್ಷ ಹಸೈನಾರ್ ಅಜ್ಜಿಕಟ್ಟೆ (ಸಂತೋಷ್) ಆಸೀಫ್ ಎ.ಆರ್, ಸುಲೈಮಾನ್ ಮುಲಾರ್, ಮಹಮ್ಮದ್ ಅಜ್ಜಿಕಟ್ಟೆ, ಅಬ್ದುಲ್ ಕುಂಞಿ ಕುರಿಯ, ಹುಸೈನಾರ್ ಅಜ್ಜಿಕಟ್ಟೆ, ಅಶ್ರಫ್ ಕುರಿಯ, ಫವಾಝ್ ಕುರಿಯ, ಇಬ್ರಾಹಿಂ ಅಜ್ಜಿಕಟ್ಟೆ, ಮುಸ್ತಫಾ ಅಜ್ಜಿಕಟ್ಟೆ, ಝೈದ್ ಬೊಳ್ಳಗುಡ್ಡೆ, ರವೂಪ್ ಅಜ್ಜಿಕಟ್ಟೆ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಅಲಿ ಪರ್ಲಡ್ಕ, ಇಫಾಝ್ ಬನ್ನೂರು, ರಝ್ವೀನ್ ಗುರುವಾಯನಕೆರೆ ಸಹಕರಿಸಿದರು.
ಅಜ್ಜಿಕಟ್ಟೆ ಜಮಾಅತ್ ಕಮಿಟಿ ಕಾರ್ಯದರ್ಶಿ ನಝೀರ್ ಅರ್ಷದಿ ಸ್ವಾಗತಿಸಿದರು. ರಿಫಾಯಿಯ್ಯ ದಫ್ ಕಮಿಟಿ ಪ್ರ.ಕಾರ್ಯದರ್ಶಿ ನಿಝಾರ್ ಅಜ್ಜಿಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಚಿತ ಆರೋಗ್ಯ ತಪಾಸಣೆ:ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು.