ತಾ.ಅಮೆಚೂರು ಕಬಡ್ಡಿ ಅಸೋಸಿಯೇಶನ್ ನಿಂದ ಪ್ರೊ ಕಬಡ್ಡಿ- ಆಮಂತ್ರಣ ಪತ್ರಿಕೆ ಬಿಡುಗಡೆ

0

*ಎಲ್ಲರ ಸಹಕಾರದಲ್ಲಿ ಕಬಡ್ಡಿ ಯಶಸ್ವಿಗೊಳಿಸೋಣ-ಕೇಶವ ಎಂ
*ಪುತ್ತೂರಿನಲ್ಲಿ ಅಮೆಚೂರು ಕಬಡ್ಡಿಗೆ ಉತ್ತಮ ಪ್ರತಿಕ್ರಿಯೆ ಇದೆ-ಪ್ರಶಾಂತ್ ರೈ

ಪುತ್ತೂರು: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ಸೆ.30 ರಂದು ಕಿಲ್ಲೆ ಮೈದಾನದಲ್ಲಿ ನಡೆಯುವ ಅಂತರ್ರಾಷ್ಟ್ರೀಯ ಕಬಡ್ಡಿ ಆಟಗಾರ ದಿ.ಉದಯ ಚೌಟ ಸ್ಮರಣಾರ್ಥ ಮ್ಯಾಟ್ ಅಂಕಣದಲ್ಲಿ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಪ್ರೊ ಕಬಡ್ಡಿ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸೆ.20ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ಜರಗಿತು.

ಎಲ್ಲರ ಸಹಕಾರದಲ್ಲಿ ಕಬಡ್ಡಿ ಯಶಸ್ವಿಗೊಳಿಸೋಣ-ಕೇಶವ ಎಂ:
ಉದ್ಯಮಿ, ಕಿರಣ್ ಎಂಟರ್ ಪ್ರೈಸಸ್ ಮಾಲಕ ಕೇಶವ ಎಂ ಹಾಗೂ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈಯವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಉದ್ಯಮಿ ಕೇಶವ ಎಂ.ರವರು, ಗ್ರಾಮೀಣ ಕ್ರೀಡೆ ಎನಿಸಿದ ಕಬಡ್ಡಿಯು ಇಂದು ಉನ್ನತ ಮಟ್ಟದ ಸ್ಥಾನಮಾನ ಹೊಂದಿದೆ. ಪ್ರೊ ಕಬಡ್ಡಿ ಬಂದ ನಂತರ ಕಬಡ್ಡಿ ಕ್ರೀಡೆಯು ಎಲ್ಲರ ಮೆಚ್ಚುಗೆಯ ಕ್ರೀಡೆಯಾಗಿ ಮುಂದುವರೆದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಡೆಯುವ ಪ್ರೊ ಕಬಡ್ಡಿಯನ್ನು ಎಲ್ಲರ ಸಹಕಾರದಲ್ಲಿ ಯಶಸ್ವಿಗೊಳಿಸೋಣ ಎಂದರು.

ಪುತ್ತೂರಿನಲ್ಲಿ ಅಮೆಚೂರು ಕಬಡ್ಡಿಗೆ ಉತ್ತಮ ಪ್ರತಿಕ್ರಿಯೆ ಇದೆ-ಪ್ರಶಾಂತ್ ರೈ:
ಮತ್ತೋರ್ವ ಅತಿಥಿ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಜನರ ಆಶೀರ್ವಾದದಿಂದ ನಾನು ಓರ್ವ ಪ್ರೊ ಕಬಡ್ಡಿ ಆಟಗಾರನಾಗಿ ಮೂಡಿ ಬಂದಿದ್ದೇನೆ. ಇದರ ಹಿಂದೆ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಚಂದ್ರಹಾಸ ಶೆಟ್ಟಿಯವರ ಬೆಂಬಲ ಪ್ರಮುಖ ಕಾರಣವಾಗಿದೆ. ಪುತ್ತೂರಿನಲ್ಲಿ ನಡೆಯುವ ಅಮೆಚೂರು ಕಬಡ್ಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಇದ್ದು ಕಬಡ್ಡಿಯು ಯಶಸ್ವಿಯಾಗಿ ನಡೆಯಲಿ ಎಂದರು.
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಪಂದ್ಯಾಟ ಸಮಿತಿ ಗೌರವಾಧ್ಯಕ್ಷ ಶಿವರಾಂ ಆಳ್ವ, ಅಧ್ಯಕ್ಷ ಹಬೀಬ್ ಮಾಣಿ, ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಪ್ರಮುಖರಾದ ಪುರುಷೋತ್ತಮ್ ಕೋಲ್ಫೆ, ಗಂಗಾಧರ ಶೆಟ್ಟಿ ಕೈಕಾರ, ಸತ್ಯನಾರಾಯಣ ರೈ, ಬಾಲಕೃಷ್ಣ ಪೊರ್ದಾಲ್, ಸೀತಾರಾಮ ಗೌಡ, ಸುಧಾಕರ್ ರೈ, ರಫೀಕ್ ಎಂ.ಕೆ, ಶಶಿಕಿರಣ್ ರೈ ನೂಜಿ, ಪ್ರಕಾಶ್ ಡಿ’ಸೋಜ, ರೋಶನ್ ರೈ ಬನ್ನೂರು, ಸದಾಶಿವ ಶೆಟ್ಟಿ ಪಟ್ಟೆ, ಸುಧೀರ್ ರೈ, ಹೊನ್ನಪ್ಪ ಕಬಕ, ವಿಜಿತ್ ನಿಡ್ಪಳ್ಳಿ, ಮನೋಹರ್ ನಿಡ್ಪಳ್ಳಿ, ಸಿದ್ಧೀಕ್ ತಂಬುತ್ತಡ್ಕ, ದಾಮೋದರ್, ಝಿಯಾದ್ ರೆಂಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ವಂದಿಸಿದರು.

ಈ ಬಾರಿಯೂ ಕಬಡ್ಡಿಯನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸೋಣ…
ಕಳೆದ ಹಲವಾರು ವರ್ಷಗಳಿಂದ ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಕಬಡ್ಡಿಯನ್ನು ಹಮ್ಮಿಕೊಳ್ಳುತ್ತಿದ್ದು ಪುತ್ತೂರಿನ ಹಾಗೂ ಆಸುಪಾಸಿನ ಜನತೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದಕ್ಕೆ ಕಬಡ್ಡಿ ವೀಕ್ಷಣೆಗೆ ಆಗಮಿಸುವ ಜನಸಾಗರವೇ ಸಾಕ್ಷಿಯಾಗಿದೆ. ಈ ಬಾರಿಯೂ ನಡೆಯುವ ಕಬಡ್ಡಿಯನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸೋಣ.
-ಎನ್.ಚಂದ್ರಹಾಸ ಶೆಟ್ಟಿ,
ಗೌರವಾಧ್ಯಕ್ಷರು,
ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್

-ಬಲಿಷ್ಟ 12 ತಂಡಗಳ ಹಣಾಹಣಿ
-ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ವಿಶಾಲ ಗ್ಯಾಲರಿ ವ್ಯವಸ್ಥೆ
-ಪ್ರೊ ಕಬಡ್ಡಿ ಆಟಗಾರರು ಭಾಗಿ

-ಪ್ರದರ್ಶನ ಪಂದ್ಯಾಟ

LEAVE A REPLY

Please enter your comment!
Please enter your name here