ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಂಪನ್ನ-ಕುಣಿತ ಭಜನೆಯೊಂದಿಗೆ ವೈಭವದ ಶೋಭಾಯಾತ್ರೆ

0

ಪುತ್ತೂರು: ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆದ 38ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.ಸೆ.19ರಂದು ಬೆಳಿಗ್ಗೆ 9ರಿಂದ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಣೇಶ ಪ್ರಸಾದ ಅನ್ನಸಂತರ್ಪಣೆ ನಡೆಯಿತು. ರಾತ್ರಿ 8ರಿಂದ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸೆ.20ರಂದು ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ, ಗಣಪತಿ ಹೋಮ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಮೂರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು.

ಶೋಭಾಯಾತ್ರೆ :
ಸೆ.20ರಂದು ಸಂಜೆ ಗಣಪತಿ ದೇವರಿಗೆ ಪೂಜೆ ನಡೆದು ಶೋಭಾಯಾತ್ರೆ ಆರಂಭಗೊಂಡಿತು. ಬೆಟ್ಟಂಪಾಡಿ ದೇವಾಲಯದಿಂದ ಹೊರಟ ಶೋಭಾಯಾತ್ರೆ ರೆಂಜ, ಇರ್ದೆ, ಉಪ್ಪಳಿಗೆ ಮೂಲಕ ಚೆಲ್ಯಡ್ಕದವರೆಗೆ ಸಾಗಿತು. ಚೆಲ್ಯಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟೆಯಲ್ಲಿ ಗಣಪತಿ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಗಣೇಶ ವಿಗ್ರಹವನ್ನು ಚೆಲ್ಯಡ್ಕದ ನದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಲಸ್ತಂಭನ ಗೊಳಿಸಲಾಯಿತು. ಬಳಿಕ ಸುಮಾರು 2 ಸಾವಿರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಶೋಭಾಯಾತ್ರೆಯಲ್ಲಿ ನಡೆದ ಮಕ್ಕಳ ಕುಣಿತ ಭಜನೆ, ಚೆಂಡೆ ಮೇಳ, ಬ್ಯಾಂಡ್‌ಸೆಟ್, ಟ್ಯಾಬ್ಲೋಗಳು ವಿಶೇಷ ಆಕರ್ಷಣೆಯಾಗಿತ್ತು. ನಿಡ್ಪಳ್ಳಿ ಶಾಂತದುರ್ಗಾ ಕುಣಿತ ಭಜನಾ ತಂಡ, ಇರ್ದೆ ಶ್ರೀವಿಷ್ಣು ಚಿಣ್ಣರ ಭಜನಾ ತಂಡ, ಕೊಲ್ಯ ಸರ್ವಶಕ್ತಿ ಮಕ್ಕಳ ಕುಣಿತ ಭಜನಾ ತಂಡ, ಪಟ್ಟೆ ಆಲಂತಡ್ಕ ವನಶಾಸ್ತಾರ ಮಕ್ಕಳ ಕುಣಿತ ಭಜನಾ ತಂಡ, ದರ್ಬೆ ಕುಂಞಿಮಲೆ ಸಿದ್ಧಿವಿನಾಯಕ ಭಜನಾ ಸೇವಾ ಟ್ರಸ್ಟ್, ಪಾಣಾಜೆ ದೇವಸ್ಯ ರಣಮಂಗಲ ಶ್ರೀಸುಬ್ರಹ್ಮಣ್ಯ ಕುಣಿತ ಭಜನಾ ತಂಡ, ಬೆಟ್ಟಂಪಾಡಿ ವಿನಾಯಕ ನಗರ ಶ್ರೀಸಿದ್ಧಿವಿನಾಯಕ ಕುಣಿತ ಭಜನಾ ತಂಡಗಳಿಂದ ನಡೆದ ಕುಣಿತ ಭಜನೆ, ರೆಂಜ, ಇರ್ದೆ ಚೆಂಡೆಮೇಳದವರಿಂದ ಚೆಂಡೆ ವಾದನ ಹಾಗೂ ಯುವಕರ ತಂಡದ ಟ್ಯಾಬ್ಲೊ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತ್ತು.ಸಾರ್ವಜನಿಕ ಶ್ರಿಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಚೆಲ್ಯಡ್ಕ ವಿಸರ್ಜನಾ ಸಮಿತಿ ಪದಾಧಿಕಾರಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಗಣೇಶೋತ್ಸವ ಉನ್ನತಿಯಾಗಿ ನಡೆಯುತ್ತಿದೆ.
ಬೆಟ್ಟಂಪಾಡಿ ಕ್ಷೇತ್ರದಲ್ಲಿ ಸಂಭ್ರದಿಂದ ಅತ್ಯದ್ಭುತವಾಗಿ ಗಣೇಶೋತ್ಸವ ಆಚರಿಸಿದ್ದೇವೆ. ಈ ವರ್ಷದ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಾಗಿ ಮೂಡಿಬಂದಿದೆ. ಚೆಲ್ಯಡ್ಕದ ನದಿಯವರಗೆ ನಾಲ್ಕು ಕಿ.ಮೀ.ವರೆಗೆ ಶೋಭಾಯಾತ್ರೆ ನಡೆದು ವಿಗ್ರಹ ಜಲಸ್ತಂಭನ ನಡೆದಿದೆ. ವರ್ಷದಿಂದ ವರ್ಷಕ್ಕೆ ಗಣೇಶೋತ್ಸವ ಉನ್ನತಿಯನ್ನು ಕಾಣುತ್ತಾ ಇದೆ.
ಮನಮೋಹನ್ ರೈ ಚೆಲ್ಯಡ್ಕ- ಗೌರವಾದ್ಯಕ್ಷರು, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ

ವಿಜ್ರಂಭಣೆಯಿಂದ ನಡೆಯುತ್ತಿದೆ.
ಈ ಗಣೇಶೋತ್ಸವ ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಪ್ರತೀ ವರ್ಷ ಬಹಳ ವಿಜ್ರಂಭಣೆಯಿಂದ ನಡೆಯುತ್ತಿದೆ. ಭಕ್ತಾದಿಗಳು, ಕಾರ್ಯಕರ್ತರ ಸಹಕಾರಕ್ಕೆ ಕೃತಜ್ಞತೆಗಳು
ಪ್ರಭಾಕರ ರೈ ಬಾಜುವಳ್ಳಿ-ಅದ್ಯಕ್ಷರು, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ

ಪ್ರತೀ ವರ್ಷ ಪ್ರಗತಿ ಸಾದಿಸುತ್ತಾ ನಡೆಯುತ್ತಿದೆ.
೩೮ನೇ ವರ್ಷದ ಗಣೇಶೋತ್ಸವ ಪ್ರತೀ ವರ್ಷ ಪ್ರಗತಿ ಸಾದಿಸುತ್ತಾ ನಡೆಯುತ್ತಿದೆ. ಇದೆಲ್ಲವೂ ಭಗವದ್ಭಕ್ತರಿಂದ ಅನುಗ್ರಹಿತವಾಗಿದೆ. ನಾನು 25 ವರ್ಷದಿಂದ ವೈದಿಕ ಕಾರ್ಯಕ್ರಮ ಮಾಡುತ್ತಿದ್ದೇನೆ ಈ ಗಣೇಶೋತ್ಸವ ಹಬ್ಬದ ರೀತಿಯಲ್ಲಿ ನಡೆಯುತ್ತಿದೆ. ಸಮಿತಿಯವರು, ಕಾರ್ಯಕರ್ತರು, ಭಕ್ತಾದಿಗಳು ತ್ರಿಕರಣ ಸುದ್ಧಿಯಾಗಿ ಕೆಲಸ ಮಾಡಿದ್ದಾರೆ. ಮಹಾಗಣಪತಿಯು ಭಕ್ತಾದಿಗಳ ಸಕಲ ಇಷ್ಟಾರ್ಥ ಈಡೇರಿಸಿದ್ದಾನೆ.
ರಾಜೇಶ್ ಭಟ್-ಅರ್ಚಕರು

LEAVE A REPLY

Please enter your comment!
Please enter your name here