ಸವಣೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲ್ಲೂಕು ಪಂಚಾಯತ್ ಕಡಬ, ಸವಣೂರು ಗ್ರಾಮ ಪಂಚಾಯತ್,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ತಾಲ್ಲೂಕು ಯುವಜನ ಒಕ್ಕೂಟ ಕಡಬ, ಸವಣೂರು ಯುವಕ ಮಂಡಲ ಇದರ ಸಹಯೋಗದೊಂದಿಗೆ ಕಡಬ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.24ರಂದು ಸವಣೂರು ಸ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ. ರಕ್ಷಣಾ ಪಡೆ ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಒಂದು ತಾಲೂಕಿನಲ್ಲಿ ಭಾಗವಹಿಸಿದ ನಂತರ ಬೇರೆ ತಾಲೂಕಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಬೆಳಗ್ಗೆ 8.30 ರ ಒಳಗೆ ತಂಡಗಳ ಇರುವಿಕೆ ಸ್ಪಷ್ಟಪಡಿಸಬೇಕು. 9.30 ಕ್ಕೆ ಸರಿಯಾಗಿ fixctures ಹಾಕಲಾಗುವುದು.
ಪುಟ್ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆ.22 ರ ಸಂಜೆಯೊಳಗೆ 8746845280 ಈ ನಂಬರ್‌ಗೆ ತಿಳಿಸುವಂತೆ ದಸರಾ ಕ್ರೀಡಾಕೂಟದ ನೋಡಲ್‌ಅಧಿಕಾರಿ ಮಾಮಚ್ಚನ್‌ಎಂ ತಿಳಿಸಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಗಳು:
100 ಮೀ, 200 ಮೀ, 400 ಮೀ, 800 ಮೀ, 1500 ಮೀ,5000 ಮೀ 10000 ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಪ್ರೋ, ಡಿಸ್ಕಸ್ ಪ್ರೋ, 110 ಮೀ ಹರ್ಡಲ್ಸ್ 4100 ಮೀ ರಿಲೇ, 4400 ಮೀ ರಿಲೇ, ವಾಲಿಬಾಲ್, ತ್ರೋಬಾಲ್, ಪುಟ್ಬಾಲ್, ಖೋ ಖೋ, ಕಬಡ್ಡಿ, ಯೋಗ.
ಮಹಿಳೆಯರ ವಿಭಾಗದ ಸ್ಪರ್ಧೆಗಳು:
100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ತ್ರೋ, ಡಿಸ್ಕಸ್ ಪ್ರೋ, 100 ಮೀ ಹರ್ಡಲ್ಸ್ 4100 ಮೀ ರಿಲೇ, 4400 ಮೀ ರಿಲೇ, ವಾಲಿಬಾಲ್, ತ್ರೋಬಾಲ್, ಪುಟ್ಬಾಲ್, ಖೋ ಖೋ, ಕಬಡ್ಡಿ, ಯೋಗ.
ಪುರುಷರ ವಿಭಾಗದ 5000 ಮೀ, 10,000 ಮೀ ಮಹಿಳೆಯರ ವಿಭಾಗದ 3000 ಮೀ, ಜಾವೆಲಿನ್, ಶಾಟ್ ಪುಟ್, ಉದ್ದಜಿಗಿತ, ಎತ್ತರಜಿಗಿತ, ಡಿಸ್ಕಸ್, ತ್ರಿಬಲ್ ಜಂಪ್ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ನಡೆಸಲಾಗುವುದು.
ಸಾರ್ವಜನಿಕರಿಗೆ ಮುಕ್ತ ಅವಕಾಶ:
ದಸರಾ ಕ್ರೀಡಾಕೂಟವನ್ನು ಹಬ್ಬದ ರೀತಿಯಲ್ಲಿ ಆಯೋಜಿಸಿದ್ದು ಪುತ್ತೂರು ತಾಲೂಕಿನ ಎಲ್ಲರೂ ಇದರಲ್ಲಿ ಭಾಗವಹಿಸಬಹುದು, ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಸಾರ್ವಜನಿಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದವರೆಗೆ ಹೋಗುವ ಅವಕಾಶ ಇರುತ್ತದೆ. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್‌ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್‌ಎನ್. ಕಡಬ ತಾಲೂಕು ದಸರಾ ಕ್ರೀಡಾಕೂಟದ ಸಂಯೋಜಕ ಸುರೇಶ್ ರೈ ಸೂಡಿಮುಳ್ಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.