ಸೆ.30: ಕಂಬಳ ಕೋಣ ಯಜಮಾನರುಗಳ ಸಭೆ

0

ಪುತ್ತೂರು; ಪುತ್ತೂರು ಶಾಸಕಅಶೋಕ್ ರೈಯವರ ನೇತೃತ್ವದಲ್ಲಿ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಕೋಣಗಳ ಯಜಮಾನರುಗಳ ಸಭೆಯು ಸೆ. 30ರಂದು ಮಂಗಳೂರಿನ ವುಡ್ ಲ್ಯಾಂಡ್ ಹೊಟೇಲ್‌ನಲ್ಲಿ ನಡೆಯಲಿದೆ.
ಶನಿವಾರ ಸಂಜೆ 3 ಕ್ಕೆ ಸಭೆ ಆರಂಭಗೊಳ್ಳಲಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಕಂಬಳ ಕೋಣಗಳ ಮಾಲಕರುಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬಂಧಿಸಿದಂತೆ ಕೋಣದ ಯಜಮಾನರುಗಳಿಂದ ಸಲಹೆ ಸೂಚನೆಗಳನ್ನು ಪಡೆಯುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು ಕೋಣದ ಯಜಮಾನರುಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಶಾಸಕರಾದ ಅಶೋಕ್ ರೈ ಯವರು ಮನವಿ ಮಾಡಿದ್ದಾರೆ. ಕೋಣದ ಮಾಲಕರು ತಮ್ಮ ಹೆಸರನ್ನು ನೋಂದಾಯಿಸಲು ರಾಜೀವ್ ಶೆಟ್ಟಿ 8861949607 ಮತ್ತು ನಿರಂಜನ್ ರೈ ಮಠಂತಬೆಟ್ಟು ಮೊಬೈಲ್; 9972772505 ಕರೆ ಮಾಡುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here