ಕಡಬ ವಿಜೃಂಭನೆಯ ಗಣಪತಿ ವಿಸರ್ಜನೆ ಶೋಭಾಯಾತ್ರೆಗೆ ಮೆರುಗು ನೀಡಿದ ಸಿಂಚು ಡೆಕೋರೇಷನ್ ರವರ ಸ್ತಬ್ದ ಚಿತ್ರ

0

ಕಡಬ: ಇಲ್ಲಿನ 50ನೇ ವರ್ಷದ ಗಣೇಶೋತ್ಸವ ಆಚರಣೆಯು ಸೆ.19ರಿಂದ 23ರವರೆಗೆ ನಡೆದಿದ್ದು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಸಂಪನ್ನಗೊಂಡಿದೆ.
ಶೋಭಾಯಾತ್ರೆಗೆ ಮೆರುಗು ನೀಡಿದ ಸ್ತಭ್ದಚಿತ್ರ, ಡಿಜೆ

ಗಣಪತಿ ವಿಸರ್ಜನೆಯ ಶೋಭಾಯಾತ್ರೆಯು ಕಡಬದಿಂದ ಸಾಗಿ ಹೊಸಮಠದ ಗುಂಡ್ಯ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಸಿಂಚು ಡೆಕೋರೇಷನ್ ರವರಿಂದ ನಿರ್ಮಿಸಲಾದ ಕಟೀಲು ಶ್ರೀ ಭ್ರಾಮರಿಯ ಸ್ತಬ್ಧ ಚಿತ್ರ ವಿಶೇಷ ಆಕರ್ಷಯಾಗಿತ್ತು, ಶ್ರೀ ದೇವಿಯು ದುಂಬಿಯ ರೂಪದಲ್ಲಿ ಅರುಣಾಸುರನ್ನು ಮರ್ಧಿಸುವ ಮತ್ತು ಜಾಬಾಲಿ ಮಹರ್ಷಿ, ವೇಷಗಳು ಈ ಸ್ತಬ್ಧ ಚಿತ್ರಗಳಲ್ಲಿ ಒಳಗೊಂಡಿದ್ದು, ಕಟೀಲು ಶ್ರೀ ದೇವಿಯ ಚಿತ್ರಗಳು ಕೂಡ ಆಕರ್ಷಣೆ ಯಾಗಿತ್ತು. ಮತ್ತು ಗಣಪತಿಯನ್ನು ಹೊತ್ತ ವಾಹನಕ್ಕೆ ರಥದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಎಲ್ಲರ ಗಮನ ಸೆಳೆಯಿತು. ಅಲ್ಲದೆ ವಿಜಿತ್ ಸೌಂಡ್ಸ್ ಮತ್ತು ಲೈಟಿಂಗ್ಸ್ ನವರ ಡಿಜೆ ಹಾಡಿಗೆ ಯುವಕರು ರಸ್ತೆಯುದ್ದಕ್ಕೂ ಕುಣಿದರು. ಈ ಬಾರಿಯ ಗಣೇಶೋತ್ಸವಕ್ಕೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸಿಂಚು ಡೆಕೋರೇಷನ್ ಮಾಲಕ ಸುಖೇಶ್ ಅವರಿಂದ ನಿರ್ಮಾಣವಾದ ಆಕರ್ಷಕ ಆಲಂಕಾರಗಳು ವಿಶೇಷ ಮೆರುಗನ್ನು ನೀಡಿದೆ.

LEAVE A REPLY

Please enter your comment!
Please enter your name here