ಸವಣೂರು : ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು. ಏಕಾತ್ಮ ಮಾನವ ವಾದದ ಪ್ರವರ್ತಕರಾಗಿದ್ದ ಅವರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ಸವಣೂರು ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಹರಿಶಂಕರ್ ಕೆ.ಎಂ. ಹೇಳಿದರು.
ಅವರು ಸವಣೂರು ಪ.ಪೂ.ಕಾಲೇಜಿನಲ್ಲಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ , ನೆಹರು ಯುವ ಕೇಂದ್ರ ಮಂಗಳೂರು ,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಸ.ಪ.ಪೂ.ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ಇದರ ವತಿಯಿಂದ ಸೆ.25ರಂದು ನಡೆದ ಪಂಡಿತ್ದೀನದಯಾಳು ಉಪಾಧ್ಯಾಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನೋಟರಿ ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ ಮಾತನಾಡಿ, ದೀನದಯಾಳ್ಉಪಾಧ್ಯಾಯರು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಳಕಳಿ ಹೊಂದಿದ್ದರು. ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದ್ದ ಮೇರು ವ್ಯಕ್ತಿತ್ವದವರು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ದ.ಕ.ಜಿಲ್ಲಾ ಯುವಜನ ಒಕ್ಕೂಟದ ಸುರೇಶ್ ರೈ ಸೂಡಿಮುಳ್ಳು, ಸವಣೂರು ಸರಕಾರಿ ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್ಉಪಸ್ಥಿತರಿದ್ದರು.ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಸವಣೂರು ಸ್ವಾಗತಿಸಿ ,ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ವಂದಿಸಿದರು.