ರಾಮಕುಂಜ ಪದವಿ ಕಾಲೇಜಿನಲ್ಲಿ ಸಂದರ್ಶನ ಕೌಶಲ್ಯ ತರಬೇತಿ

0

ರಾಮಕುಂಜ: ಪದವೀಧರರು ಉದ್ಯೋಗಾಕಾಂಕ್ಷಿಗಳಾಗಿ ತಮ್ಮ ಗುಣಮಟ್ಟದ ಅಭಿವೃದ್ಧಿಯನ್ನು ಶ್ರಮವಹಿಸಿ ಮಾಡಬೇಕು. ಅರಿವು, ಆತ್ಮವಿಶ್ವಾಸ, ಸೇವಾ ಮನೋಭಾವನೆ, ಶಿಷ್ಟಾಚಾರಗಳ ಪಾಲನೆ ಇತ್ಯಾದಿ ಅಂಶಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಪುತ್ತೂರಿನ ಅಮೃತಾ ಶ್ಯಾನುಭಾಗ್ ಹೇಳಿದರು.


ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ “ಸಂದರ್ಶನ ಕೌಶಲ್ಯ ಹಾಗೂ ರೆಸ್ಯೂಮೆ ರೈಟಿಂಗ್” ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಚೇತನ್ ಮೊಗ್ರಾಲ್ ಅಣಕು ಸಂದರ್ಶನ ನಡೆಸಿಕೊಟ್ಟು ಸಹಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಗಣರಾಜ ಕುಂಬ್ಳೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ, ಉಪಾಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿ ಶುಭಾಶಂಸನೆ ಮಾಡಿದರು. ಕಾಲೇಜಿನ ಐ,ಕ್ಯೂ.ಎ.ಸಿ. ಸಂಯೋಜಕ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಉದ್ಯೋಗ ಮಾರ್ಗದರ್ಶನ ಘಟಕದ ಸಂಯೋಜಕ ಶಿವಪ್ರಸಾದ್ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶ್ಲಾಘ್ಯ ಆಳ್ವ ಕೃತಜ್ಞತೆ ಸಲ್ಲಿಸಿದರು. ಅಮೃತಾ, ರಕ್ಷಾ ಪ್ರಾರ್ಥನೆಗೀತೆ ಹಾಡಿದರು.

LEAVE A REPLY

Please enter your comment!
Please enter your name here