ಬೊಳುವಾರಿನಲ್ಲಿ ಜಾಣ ಫುಡ್ಸ್ ಮಾಲಕತ್ವದಲ್ಲಿ ಬಿಗ್ ಮಿಶ್ರಾ ಪೇಡ ಮಳಿಗೆ ಶುಭಾರಂಭ

0

ಸಿಹಿ ಖಾದ್ಯ ಪ್ರಿಯರನ್ನು ಆಕರ್ಷಿಸಿದ ಉತ್ಕೃಷ್ಟ ಸ್ವಾದದ ಬಿಗ್ ಮಿಶ್ರಾ ಉತ್ಪನ್ನಗಳು

ಪುತ್ತೂರು: ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಸಿಹಿತಿಂಡಿಗಳು, ನಮ್‌ಕೀನ್ ಹಾಗೂ ಚಾಟ್ ಮಸಾಲಗಳನ್ನೊಳಗೊಂಡ ಬಿಗ್ ಮಿಶ್ರಾ ಪೇಡಾದ ಶಾಖೆ ಜಾಣ ಫುಡ್ಸ್ ಮಾಲಕತ್ವದಲ್ಲಿ ಬೊಳುವಾರಿನಲ್ಲಿ ಸೆ.29ರಂದು ಶುಭಾರಂಭಗೊಂಡಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ರಿಬ್ಬನ್ ಕಟ್ ಮಾಡಿ ಮಳಿಗೆಯನ್ನು ಶುಭಾರಂಭಗೊಳಿಸಿದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮುಳಿಯ ಜ್ಯವೆಲರ‍್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ ಮುಳಿಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಸನ ವಸನ ವಸತಿ ಮನುಷ್ಯನಿಗೆ ಅಗತ್ಯ-ಕೇಶವ ಪ್ರಸಾದ್ ಮುಳಿಯ:
ದೀಪ ಬೆಳಗಿಸಿ ಮಳಿಗೆ ಉದ್ಘಾಟಿಸಿದ ಕೇಶವ ಪ್ರಸಾದ ಮುಳಿಯರವರು ಮಾತನಾಡಿ ಶ್ರೀಮಹಾಲಿಂಗೇಶ್ವರನ ಕ್ಷೇತ್ರ ಪುತ್ತೂರಿನಲ್ಲಿ ಬಿಗ್ ಮಿಶ್ರಾ ಪೇಡದ ಮಳಿಗೆ ಆರಂಭವಾಗಿದೆ. ಎಲ್ಲರೂ ಅನ್ಯೋನ್ಯತೆಯಿಂದ ಇರುವ ಪುತ್ತೂರು ಕ್ಷೇತ್ರದಲ್ಲಿ ಜಾಣ ಪುಡ್ಸ್‌ನಿಂದ ಆರಂಭಗೊಂಡಿರುವುದು ಸಂತಸದ ವಿಷಯ. ಅಸನ ವಸನ ವಸತಿ ಮೂರು ವಿಷಯಗಳು ಮನುಷ್ಯನಿಗೆ ಅಗತ್ಯವಾದುದು. ಸ್ವೀಟ್ಸ್‌ಗಳ ಉದ್ಯಮಕ್ಕೆ ಅಳಿವಿಲ್ಲ. ಅಂದವಾಗಿ, ಚಂದವಾಗಿ, ಸ್ವಾದಿಷ್ಟವಾಗಿ ಯಾರು ಮಾಡುತ್ತಾರೊ ಅವರು ಉದ್ಯಮ ಕ್ಷೇತ್ರದಲ್ಲಿ ಮುಂದೆ ಬಂದೆ ಬರುತ್ತಾರೆ. ಈ ಸಂಸ್ಥೆ ಮುಂದಕ್ಕೆ ಅಭಿವೃದ್ಧಿ ಹೊಂದಲಿ. ಎಲ್ಲರ ಮನೆಮನೆಗಳಲ್ಲಿ ಮಾತಾಗಲಿ. ಎಲ್ಲರಿಗೂ ಸಿಹಿ ಉಣಿಸುವಂತಾಗಲಿ ಎಂದರು.

ಸಿಹಿ ತಿಂದು ಬದುಕು ಸಿಹಿಯಾಗಲಿ-ಶಕುಂತಳಾ ಶೆಟ್ಟಿ:
ರಿಬ್ಬನ್ ಕಟ್ ಮಾಡಿ ಮಳಿಗೆ ಶುಭಾರಂಭಗೊಳಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಸುಶ್ರೂಷೆ ನೀಡುವ ವೈದ್ಯರಿಂದ ಬಿಗ್ ಮಿಶ್ರಾ ಪೇಡ ಶಾಖೆ ಆರಂಭವಾಗಿದೆ. ಬಿಗ್ ಮಿಶ್ರಾದಂತೆ ಧಾರ್ಮಿಕ, ರಾಜಕೀಯ, ಸಾಮಾಜಿಕವಾಗಿ ಮಿಶ್ರಿತವಾಗಿರುವ ನಾವೆಲ್ಲರೂ ಮಳಿಗೆ ಉದ್ಘಾಟಿಸಿದ್ದೇವೆ. ಆರೋಗ್ಯವಾದ ಶುದ್ಧವಾದ ಸ್ವಚ್ಚವಾದ ಸಿಹಿಯಾದ, ಸ್ವಾದಿಷ್ಟವಾದ ಸಿಹಿಗಳು ಎಲ್ಲರ ಮನೆಗಳಿಗೆ ಮುಟ್ಟಬೇಕು. ಸಿಹಿ ತಿಂದು ಸಮಾಜಕ್ಕೆ ಸಿಹಿಕೊಟ್ಟು ಎಲ್ಲರ ಬದುಕು ಸಿಹಿಯಾಗಲಿ ಎಂದರು. ಬಿಗ್ ಮಿಶ್ರಾ ಹೆಸರಿನಂತೆ ಎಲ್ಲರನ್ನು ಸೇರಿಸಿಕೊಂಡು ಬಿಗ್ ಆಗಿ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು.

ಗುಣಮಟ್ಟದ ಆಹಾರ ಖಾದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು-ಲಾರೆನ್ಸ್ ಮಸ್ಕರೇನಸ್:
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಮಿಶ್ರಾ ಪೇಡದ ಶಾಖೆಯನ್ನು ಪುತ್ತೂರಲ್ಲಿ ಜಾಣ ಫುಡ್ಸ್ ವತಿಯಿಂದ ಆರಂಭಿಸಿದ್ದಾರೆ. ತುಂಬಾ ಸಂತೋಷ. ಗುಣಮಟ್ಟದ ಆಹಾರ ಖಾದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು. ಜನತೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಎಲ್ಲರಿಗೂ ಸೇವೆ ಸಿಗಲಿ. ಸಿಹಿ ತಿಂಡಿ ಆಹಾರದ ಮಳಿಗೆಯ ವ್ಯವಹಾರವನ್ನು ದೇವರು ಹರಸಲಿ. ಅವರು ಕೈಗೊಂಡ ಮಳಿಗೆ ಯಶಸ್ವಿಯಾಗಲಿ ಎಂದು ಹೇಳಿ ಶುಭಹಾರೈಸಿದರು.

ನಮ್ಮ ನೆಲದಲ್ಲಿಯೇ ಬಿಗ್ ಮಿಶ್ರಾ ಪೇಡ ಆರಂಭಗೊಂಡಿದೆ-ಸಿರಾಜುದ್ದೀನ್ ಫೈಝಿ:
ಬಪ್ಪಳಿಗೆ ಜುಮಾ ಮಸೀದಿ ಧರ್ಮಗುರು ಅಲ್ ಹಜ್ ಸಿರಾಜುದ್ದೀನ್ ಫೈಝಿ ಮಾತನಾಡಿ ಪುತ್ತೂರು ಹಲವು ವಿಶೇಷತೆಗಳಿಗೆ, ಘಟನೆಗಳಿಗೆ ಸಾಕ್ಷಿಯಾದ ಊರು ಇಂತಹ ಪುತ್ತೂರಲ್ಲಿ ವೈದ್ಯರ ನೇತೃತ್ವದಲ್ಲಿ ಸಿಹಿ ತಿಂಡಿಗಳ ಬ್ರಾಂಡೆಡ್ ಮಳಿಗೆ ಆರಂಭವಾಗಿದೆ. ಧಾರವಾಡದಲ್ಲಿ ಹೆಸರುವಾಸಿಯಾದ ಮಿಶ್ರಾ ಪೇಡ ಧಾರವಾಡದಲ್ಲಿ ಮಾತ್ರ ಸಿಗುವ ಕಾಲವೊಂದಿತ್ತು. ಅಂತಹ ಸಂದರ್ಭದಲ್ಲಿ ನಮ್ಮ ನೆಲದಲ್ಲಿಯೇ ಬಿಗ್ ಮಿಶ್ರಾ ಪೇಡ ಆರಂಭಿಸಿದ್ದಾರೆ. ಪುತ್ತೂರಿಗೆ ಇದನ್ನು ವಿಸ್ತರಿಸುವಲ್ಲಿ ವೈದ್ಯರೊಬ್ಬರು ಶ್ರಮವಹಿಸಿದ್ದಾರೆ. ಗ್ರಾಹಕರನ್ನು ಆಕರ್ಷಿಸಿ ಈ ಮಳಿಗೆ ಯಶಸ್ವಿಯಾಗಲಿ ಎಂದು ಹಾರೈಸಿದರು.

ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಮಳಿಗೆಗಳ ಅಗತ್ಯವಿದೆ-ಜೀವಂಧರ್ ಜೈನ್:
ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ಪುತ್ತೂರು ನಗರದಲ್ಲಿ ಮಿಶ್ರಾ ಪೇಡ ಸಂಸ್ಥೆಯನ್ನು ತೆರೆದಿದ್ದಾರೆ. ಬೆಳೆಯುತ್ತಿರುವ ಪುತ್ತೂರು ನಗರ ಹಾಗೂ ಮುಂದಕ್ಕೆ ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನಲ್ಲಿ ಇಂತಹ ಮಳಿಗೆಗಳ ಅಗತ್ಯವಿದೆ. ಇದು ಸಾರ್ವಜನಿಕರಿಗೂ ಅವಕಾಶವಾಗುತ್ತದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು.

ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿ-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಸ್ವದೇಶಿ ತಿನಿಸುಗಳ ಉತ್ಪನ್ನ ಕೂಡ ಸೇರಿಕೊಂಡಿದೆ ಇದರಿಂದ ಸ್ವದೇಶಿ ಉತ್ಪನ್ನಗಳಿಗೆ ಗೌರವ ಸಿಗುತ್ತಿದೆ. ಉತ್ತರ ಕರ್ನಾಟಕದ ಪೇಡವನ್ನು ಕರಾವಳಿ ಭಾಗದಲ್ಲಿ ಪರಿಚಸಯಿಸುವ ಕೆಲಸ ಪುತ್ತೂರಲ್ಲಿ ಆಗಿದೆ. ಇದಕ್ಕೆ ಮಾಲಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಎಲ್ಲರೂ ಸಿಹಿಯನ್ನು ಪಡೆಯಲಿ. ಶ್ರೀಮಹಾಲಿಂಗೇಶ್ವರನು ಸಂಸ್ಥೆಯನ್ನು ಅಭಿವೃದ್ಧಿ ಮಾಡಲಿ ಎಂದು ಹಾರೈಸಿದರು.

ಉತ್ತಮ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯಾಗಲಿ-ಅರುಣ್ ಕುಮಾರ್ ಪುತ್ತಿಲ:
ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸಿಹಿ ತಿಂಡಿಗಳ ಮಳಿಗೆ ಈಗಾಗಲೇ ಶುಭಾರಂಭಗೊಂಡಿದೆ. ಪುತ್ತೂರಿನ ಜನತೆಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಸಂಸ್ಥೆಯಾಗಿ ಮೂಡಿಬರಲಿ. ಇನ್ನಷ್ಟು ಸಿಹಿ ಉತ್ಪನ್ನಗಳ ಕೇಂದ್ರವನ್ನು ಆರಂಭಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.

ಜನರನ್ನು ಗೆದ್ದು ತಾವು ಗೆಲ್ಲಲಿ-ಆನಂದ್ ಎಸ್.ಕೆ.:
ಮಾಸ್ಟರಿ ಪ್ಲಾನರಿ ಮಾಲಕ ಆನಂದ್ ಎಸ್ ಕೆ. ಮಾತನಾಡಿ ಪುತ್ತೂರಿಗೆ ದೊಡ್ಡದಾದ ಒಂದು ಸಂಸ್ಥೆಯನ್ನು ಕೊಟ್ಟಿದ್ದಾರೆ. ಈ ಮಳಿಗೆ ಜನರನ್ನು ಗೆಲ್ಲಲಿ ಈ ಮೂಲಕ ತಾವು ಕೂಡ ಗೆಲ್ಲಲಿ ಎಂದು ಹಾರೈಸಿದರು.

ಬಿಗ್ ಮಿಶ್ರಾ ಹೆಸರಲ್ಲಿ ಆರಂಭಿಸಲು ಅವಕಾಶ ಸಿಕ್ಕಿದೆ
ಎಲ್ಲಾ ಕಡೆ ಹೆಸರುವಾಸಿಯಾದ ಧಾರವಾಡದ ಬಿಗ್ ಮಿಶ್ರಾ ಪೇಡ ಪುತ್ತೂರಿನ ಜನತೆಗೂ ಸಿಗಲಿ ಎನ್ನುವ ದೃಷ್ಟಿಯಿಂದ ಇಲ್ಲಿ ಆರಂಭಿಸಿದ್ದೇವೆ. ಅತ್ಯಂತ ಉತ್ಕೃಷ್ಟ ಗುಣಮಟ್ಟದ ಆಹಾರ ಪದಾರ್ಥಗಳು ಬಿಗ್ ಮಿಶ್ರಾ ಹೆಸರಲ್ಲಿ ಆರಂಭಿಸಲು ನಮಗೆ ಅವಕಾಶ ಸಿಕ್ಕಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ.
ಡಾ. ಪ್ರಶಾಂತ್
ಮಾಲಕರು

ಗುಣಮಟ್ಟ ಮತ್ತು ಸೇವೆಗೆ ಹೆಸರುವಾಸಿಯಾದ ಸಂಸ್ಥೆಯಾಗಿದೆ.
1933ರಿಂದ ಬಿಗ್ ಮಿಶ್ರಾ ಆರಂಭವಾಗಿದೆ. ನಾನು ಹತ್ತು ವರ್ಷದಿಂದ ಈ ಉದ್ಯಮದೊಂದಿಗೆ ಇದ್ದೇನೆ. ಸಂಸ್ಥೆಯು ಗುಣಮಟ್ಟ ಮತ್ತು ಸೇವೆಗೆ ಹೆಸರುವಾಸಿಯಾದ ಸಂಸ್ಥೆಯಾಗಿದೆ. ಮಾಲಕರಾದ ಡಾ.ಪ್ರಶಾಂತ್‌ರವರು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಾಗಿದ್ದಾರೆ. ನಮಗೆ ತುಂಬಾ ಹೆಮ್ಮೆಯೆನಿಸುತ್ತಿದೆ. ಅವರಿಗೆ ಶಾಖೆಯ ಜವಾಬ್ದಾರಿ ಕೊಟ್ಟದ್ದು ಕಂಪೆನಿಗೂ ಹೆಮ್ಮೆಯ ವಿಷಯವಾಗಿದೆ. ಗ್ರಾಹಕರ ಸಹಕಾರ, ಆಶೀರ್ವಾದ ಬೇಕು.
ಶ್ರೀಧರ್ ಬಿ.ಪಾಟೀಲ್
ಆಲ್ ಇಂಡಿಯಾ ಬಿಸಿನೆಸ್ ಹೆಡ್ ಬಿಗ್ ಮಿಶ್ರಾ ಪೇಡ

ಪ್ರಥಮ ಗ್ರಾಹಕರಾದ ಕೇಶವ ಪ್ರಸಾದ ಮುಳಿಯ
ಬಿಗ್ ಮಿಶ್ರಾ ಪೇಡ ಶುಭಾರಂಭದ ಪ್ರಯುಕ್ತ ಮುಳಿಯ ಕೇಶವ ಪ್ರಸಾದರವರು ಸಂಸ್ಥೆಯಿಂದ ಮೊದಲಾಗಿ ಸಿಹಿ ಉತ್ಪನ್ನಗಳನ್ನು ಖರೀದಿಸಿ ಪ್ರಥಮ ಗ್ರಾಹಕರಾದರು. ಸಂಸ್ಥೆಯ ಮಾಲಕ, ದರ್ಬೆ ವೈದ್ಯರ್ಸ್ ಆಯುರ್ವೇದ ಆಸ್ಪತ್ರೆಯ ಡಾ.ಪ್ರಶಾಂತ್‌ರವರು ಸಿಹಿ ಉತ್ಪನ್ನಗಳನ್ನು ನೀಡಿದರು.

LEAVE A REPLY

Please enter your comment!
Please enter your name here