ನನ್ನ ಮಣ್ಣು ನನ್ನ ದೇಶ: ಕುಂಬ್ರ ಭಜನಾ ಮಂದಿರದಿಂದ ಮೃತ್ತಿಕೆ ಸಂಗ್ರಹ

0

ಪುತ್ತೂರು: ನನ್ನ ಮಣ್ಣು ನನ್ನ ದೇಶ ಅಂಗವಾಗಿ ಪ್ರಥಮ ಉತ್ಸವದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನೆನಪಿಗೋಸ್ಕರ ದೆಹಲಿಯ ಕರ್ತವ್ಯ ಪಥದಲ್ಲಿ ಅಮೃತ ಉದ್ಯಾನವನ ನಿರ್ಮಿಸಲು ದೇಶದದ್ಯಾಂತ ಬಂದಂತಹ ಮೃತ್ತಿಕೆಯಿಂದ ಅಮೃತ ಉದ್ಯಾನವನ ನಿರ್ಮಾಣ ಮಾಡಿ ಹುತಾತ್ಮ ಯೋಧರಿಗೆ ಪ್ರಧಾನಿಯವರಿಂದ ಗೌರವ ಸಮರ್ಪಣೆ ನಡೆಯಲಿದೆ. ಇದರ ಅಂಗವಾಗಿ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸ್ಥಳದಿಂದ ಮೃತ್ತಿಕೆ ಸಂಗ್ರಹ ಮಾಡಲಾಯಿತು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರ ಉಪಸ್ಥಿತಿಯಲ್ಲಿ ಮಂದಿರದ ಮಾಜಿ ಅಧ್ಯಕ್ಷ ಅರುಣ ರೈ ಬಿಜಲ ಮತ್ತು ಕೋಶಾಧಿಕಾರಿ ರಾಜ್ ಪ್ರಕಾಶ್ ರೈ ಕೊಡೆಂಚಾರುರವರು ಮಂದಿರದ ಸ್ಥಳದಿಂದ ಪವಿತ್ರ ಮೃತ್ತಿಕೆ ಯನ್ನು ಸಂಗ್ರಹಿಸಿದರು. ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಬಿಜತ್ರೆ, ಶಕ್ತಿ ಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ, ಕುಂಬ್ರ ಪ್ರಾ ಕೃ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಭುದ್ದರ ಪ್ರಕೋಷ್ಟ ಜಿಲ್ಲಾ ಸದಸ್ಯ ಸುಧಾಕರ ರೈ ಕುಂಬ್ರ, ಪಂಚಾಯತ್ ಸದಸ್ಯರಾದ ಮಹೇಶ್ ರೈ ಕೇರಿ, ಮತ್ತು ಪ್ರದೀಪ್ ಎಸ್, ಹಾಗೂ ನಳಿನಾಕ್ಷಿ, ಬೂತ್ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ, ಪ್ರವೀಣ್ ಪಲ್ಲತ್ತಾರು ಶಿವರಾಮ ಗೌಡ ಬೊಳ್ಳಾಡಿ, ರಾಕೇಶ್ ಪರ್ಪುಂಜ ಬೂತ್‌ನ ಕಾರ್ಯದರ್ಶಿ ರಾಜೇಶ್ ಪಿದಪಟ್ಲರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here