ಪುತ್ತೂರು ಗಣೇಶೋತ್ಸವದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಿಲ್ಲೆ ಮೈದಾನ,ಕೋರ್ಟ್ ರಸ್ತೆ ಇದರ 66 ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ ಮೂಡಪ್ಪ ಸೇವೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಮೂಲಿಕೆ ರಾಮಕೃಷ್ಣಯ್ಯ ವಿರಚಿತ “ಮೋಕ್ಷ ಸಂಗ್ರಾಮ ಎನ್ನುವ ಆಖ್ಯಾನದ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ, ಕು. ಸಿಂಚನಾ ಮೂಡುಕೋಡಿ, ಚೆಂಡೆ – ಮದ್ದಲೆಗಳಲ್ಲಿ ರಾಮದಾಸ್ ಶೆಟ್ಟಿ,ದೇವಸ್ಯ,ಮಾ.ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ, ಸುಧನ್ವನ ಪಾತ್ರದಲ್ಲಿ ಪದ್ಮಾ ಕೆ ಆರ್ ಆಚಾರ್ಯ, ಜಯಲಕ್ಷ್ಮಿ ವಿ ಭಟ್,ಅರ್ಜುನನಾಗಿ ಪ್ರೇಮಾ ಕಿಶೋರ್, ಶ್ರೀಕೃಷ್ಣನಾಗಿ ಶ್ರೀವಿದ್ಯಾ ಜೆ ರಾವ್, ಹಂಸಧ್ವಜನಾಗಿ ಪ್ರೇಮಾ ನೂರಿತ್ತಾಯ, ಪ್ರಭಾವತಿಯಾಗಿ ಹೀರಾ ಉದಯ್ ಪಾತ್ರ ನಿರ್ವಹಣೆ ಮಾಡಿದರು.


LEAVE A REPLY

Please enter your comment!
Please enter your name here