ಎಡಿಟ್ ಮಾಡಿದ ಪೊಟೋ ವೈರಲ್ – ನವೀನ್ ರೈ ಅವರಿಂದ ಸೆನ್ ಪೊಲೀಸ್‌ಗೆ ದೂರು

0

ಪುತ್ತೂರು: ತನ್ನ ಪೊಟೋವನ್ನು ಬೇರೆ ಯುವತಿಯ ಪೊಟೋದ ಜೊತೆಗಿರುವಂತೆ ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವುದಾಗಿ ಕೈಕಾರ ಪನಡ್ಕ ನಿವಾಸಿ ನವೀನ್ ರೈ ಎಂಬವರು ಸೆನ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಪುತ್ತಿಲ ಪರಿವಾರ-1 ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಎಡಿಟ್ ಮಾಡಿದ ಪೊಟೋ ವೈರಲ್ ಆಗಿದ್ದು, ಅದನ್ನು ದಿನೇಶ್ ಪುತ್ತೂರು ಎಂಬವರು ಮಾಡಿ ಮಾನಹಾನಿ ಮಾಡುತ್ತಿದ್ದಾರೆ ಎಂದು ನವೀನ್ ರೈ ಅರೋಪಿಸಿದ್ದಾರೆ.

LEAVE A REPLY

Please enter your comment!
Please enter your name here