ಪಾಣಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ

0

ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಸಂಜೀವಿನ ಒಕ್ಕೂಟ, ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಸ್ವಚ್ಛತಾ ಹಿ ಸೇವಾ/ ಸ್ವಚ್ಛತೆಯೇ ಸೇವೆ ಅಂಗವಾಗಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು. ಗ್ರಾ.ಪಂ. ವ್ಯಾಪ್ತಿಯ ಆರ್ಲಪದವು ಪೇಟೆಯಲ್ಲಿ ಸ್ವಚ್ಚತೆ ನಡೆಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನತ್ತುಲ್ ಮೆಹ್ರಾ, ಉಪಾದ್ಯಕ್ಷೆ ಜಯಶ್ರೀ, ಪಿಡಿಒ ಚಂದ್ರಮತಿ, ಕಾರ್ಯದರ್ಶಿ ಆಶಾ, ಸದಸ್ಯರಾದ ಸುಭಾಷ್ ಸಿ.ಎಚ್., ವಿಮಲ, ಭಾರತಿ ಭಟ್, ನಾರಾಯಣ ನಾಯಕ್, ಸುಲೋಚನಾ, ಮೋಹನ ನಾಯ್ಕ, ಬಿಜೆಪಿಯ ಸದಾಶಿವ ರೈ ಸೂರಂಬೈಲು, ಗ್ರಾ.ಪಂ. ಸಿಬ್ಬಂದಿಗಳಾದ ವಿಶ್ವನಾಥ, ಸೌಮ್ಯ, ರೂಪ, ಅರುಣ್ ಹಾಗೂ ಸಂಜೀಇನಿ ಒಕ್ಕೂಟದ ಸದಸ್ಯರು, ರಿಕ್ಷಾ ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here