ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚತಾ ಹಿ ಸೇವಾ/ ಸ್ವಚ್ಚತೆಯೇ ಸೇವೆ ಅಂಗವಾಗಿ ಬೃಹತ್ ಸ್ವಚ್ಚತಾ ಅಭಿಯಾನ ಅ.1 ರಂದು ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಜಯನಗರ, ಜನತಾ ಕಾಲನಿ ಹಾಗೂ ತಂಬುತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಚತೆ ಮಾಡಲಾಯಿತು.
ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಬ್ರಹ್ಮರಗುಂಡ, ಉಪಾಧ್ಯಕ್ಷೆ ಸೀತಾ.ಕೆ,ಸದಸ್ಯೆ ಗೀತಾ.ಡಿ, ಪಿಡಿಒ ಸಂಧ್ಯಾಲಕ್ಷ್ಮಿ, ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಆರೋಗ್ಯ ಇಲಾಖೆಯ ಸಿಎಚ್ ಒ ಲಕ್ಷ್ಮೀ,ಆರೋಗ್ಯ ಕಾರ್ಯಕರ್ತೆ ಕುಸುಮಾವತಿ,ಸಂಜೀವಿನಿ ಒಕ್ಕೂಟದ ಭವ್ಯ ಸಿ.ಎಚ್, ಶಾಲಿನಿ.ಕೆ ಜನತಾ ಕಾಲನಿ ನಿವಾಸಿಗಳು, ಶ್ರೀ ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಸದಸ್ಯರು, ಬೆಟ್ಟಂಪಾಡಿ ಪದವಿ ಕಾಲೇಜು ಬಿಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಂಡರು.