34 ನೆಕ್ಕಿಲಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಉಪ್ಪಿನಂಗಡಿ: ‘ಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತ’ ಎಂಬ ಅಭಿಯಾನದಡಿಯಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಹಾಗೂ ಸ್ಥಳೀಯ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಅ.1ರಂದು ಸ್ವಚ್ಛತಾ ಕಾರ್ಯ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.


34 ನೆಕ್ಕಿಲಾಡಿಯ ಬೇರಿಕೆಯಿಂದ ಗ್ರಾ.ಪಂ. ಆವರಣದವರೆಗೆ ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯ ತೆರವು ಮಾಡುವ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಪ್ರಶಾಂತ್ ಎನ್., ಸ್ವಪ್ನ, ರಮೇಶ್ ಸುಭಾಶ್‌ನಗರ, ಹರೀಶ್ ಕುಲಾಲ್, ವೇದಾವತಿ, ಮಾಜಿ ಸದಸ್ಯೆ ಅನಿ ಮಿನೇಜಸ್, ವರ್ತಕ ಸಂಘದ ಅಬ್ದುಲ್ ರಹಿಮಾನ್ ಯುನಿಕ್, ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದ ಕಲಂದರ್ ಶಾಫಿ, ರಾಜಶ್ರೀ ಅಂಬೆಲ ತಂಡದ ವಿಶ್ವನಾಥ, ಗಂಗಾಧರ ನಾಯ್ಕ, ಹರ್ಷಿತ್, ಮೋಹನ್, ನಮ್ಮೂರು- ಮೈಂದಡ್ಕದ ಪ್ರವೀಣ್, ಜ್ಯೋತಿನಾಥ್, ಹೊನ್ನಪ್ಪ ನಾಯ್ಕ, ಗ್ರಾಮಸ್ಥರಾದ ಸದಾನಂದ ಕಾರ್‌ಕ್ಲಬ್, ಜಾನ್ ಕೆನ್ಯೂಟ್, ಹಿರಿಯ ಆರೋಗ್ಯ ಸಹಾಯಕಿ ರೇಖಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ, ಲೆಕ್ಕ ಸಹಾಯಕ ದೇವಪ್ಪ ನಾಯ್ಕ, ಸಿಬ್ಬಂದಿ ನಿತಿನ್, ವಸಂತಿ, ಸುಶೀಲಾ, ಯಶೋಧಾ, ಚಿತ್ರಾವತಿ, ಸೌಜನ್ಯ, ತ್ಯಾಜ್ಯ ಘಟಕದ ಸತೀಶ್, ರವಿ ಮತ್ತಿತರರಿದ್ದರು. ಈ ಕಾರ್ಯಕ್ರಮಕ್ಕೆ ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಆಗಮಿಸಿದ್ದು, ಕೆಲ ಕಾಲ ಕಾರ್ಯಕ್ರಮದಲ್ಲಿದ್ದು ಬೆಂಬಲ ನೀಡಿದರು.

LEAVE A REPLY

Please enter your comment!
Please enter your name here