ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರಿನಲ್ಲಿ ಉಚಿತ ಕೊಲೆಸ್ಟ್ರಾಲ್, HBA1C, ಶುಗರ್, ಹಿಮೋಗ್ಲೋಬಿನ್, ಥೈರಾಯಿಡ್ ಶಿಬಿರ

0

ಪುತ್ತೂರು: ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿನ ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರಿನಲ್ಲಿ ‘ಯೂಸ್ ಹಾರ್ಟ್ ನೋ ಹಾರ್ಟ್’ ಕುರಿತು ಮಾಹಿತಿ ಹಾಗೂ ಉಚಿತ ಕೊಲೆಸ್ಟ್ರಾಲ್,HBA1C, ಶುಗರ್, ಹಿಮೋಗ್ಲೋಬಿನ್, ಥೈರಾಯಿಡ್ ಶಿಬಿರವು ಸೆ.30 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿಯವರು ಉದ್ಘಾಟಿಸಿ ಮಾತನಾಡಿ, ಡಾ.ನಝೀರ್‌ರವರು ರೋಟರಿ ಪುತ್ತೂರು ಇದರ ಸಕ್ರಿಯ ಸದಸ್ಯರಾಗಿರುತ್ತಾರೆ. ಜನರ ಆರೋಗ್ಯ ಕಾಳಜಿಯ ಬಗ್ಗೆ ಅವರು ಪ್ರತಿ ತಿಂಗಳು ಕ್ಲಿನಿಕ್‌ನಲ್ಲಿ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ. ಫಲಾನುಭವಿಗಳು ಇದರ ಉಪಯೋಗವನ್ನು ಹೆಚ್ಚೆಚ್ಚು ಪಡೆದುಕೊಳ್ಳಬೇಕು ಎಂದರು.


ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರ್‌ನ ಮಧುಮೇಹ ತಜ್ಞ ಹಾಗೂ ವೈದ್ಯಕೀಯ ತಜ್ಞರಾದ ಡಾ.ನಝೀರ್ ಅಹಮದ್‌ರವರು ಮಾತನಾಡಿ, ನಮ್ಮ ಹೃದಯದಲ್ಲಿ ಆಗುವ ಹೃದಯಾಘಾತ ಹಾಗೂ ಹೃದಯ ಸ್ತಂಭನದ ಬಗ್ಗೆ ಜನರು ತಿಳಿದುಕೊಳ್ಳಬೇಕು. ಹೃದಯಾಘಾತವಾಗುವ ಸಂದರ್ಭದಲ್ಲಿ ಬದಲಾಯಿಸಬಹುದಾದ ತೊಂದರೆ ಮತ್ತು ಬದಲಾಯಿಸಲು ಸಾಧ್ಯವಾಗದಿರುವಂತಹ ತೊಂದರೆಗಳನ್ನು ನಾವು ಅರಿತಿರಬೇಕು. ಮಾನಸಿಕ ಒತ್ತಡ, ಜೀವನಶೈಲಿ, ಆಹಾರಕ್ರಮ ಹಾಗೂ ವ್ಯಾಯಾಮ ಇವುಗಳು ವ್ಯತ್ಯಯಗೊಂಡಾಗ ಹೃದಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತದೆ. ತಂಬಾಕು, ಮದ್ಯಸೇವನೆ ಮುಂತಾದ ದುಶ್ಚಟಗಳಿಂದ ದೂರವಿರಿ. ಸದಾ ಒಳ್ಳೆಯದನ್ನೇ ಚಿಂತನೆ ಮಾಡುವುದು, ಪರರಿಗೆ ನೆರವಾಗುವುದು ಮಾಡಿದಾಗ ನಮ್ಮಲ್ಲಿನ ಮಾನಸಿಕ ಒತ್ತಡವು ಕಡಿಮೆಯಾಗಿ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುವುದು ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯ ದತ್ತಾತ್ರೇಯ ರಾವ್ ಉಪಸ್ಥಿತರಿದ್ದರು. ಮೈಕ್ರೋಲ್ಯಾಬ್, ಮೆರ್ಕ್, ಎಮ್ಕ್ಯೂರ್, ಅಗಿಲಸ್ ಲ್ಯಾಬ್, ಥೈರೋಕೇರ್ ಲ್ಯಾಬ್, ಧನ್ವಂತರಿ ಲ್ಯಾಬ್, ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರ್ ಸಿಬ್ಬಂದಿ ಸಹಕರಿಸಿದರು.


ವೈದ್ಯರ ಆರೋಗ್ಯಕರ ಟಿಪ್ಸ್…
*ಆಹಾರದಲ್ಲಿ ಪಿಷ್ಟದಂಶ(ಕಾರ್ಬೋಹೈಡ್ರೇಡ್)ವನ್ನು ಕಡಿಮೆ ಮಾಡುವುದು *ಹಸಿ ಮತ್ತು ಬೇಯಿಸಿದ ತರಕಾರಿಗಳನ್ನು ಸೇವಿಸುವುದು *ಕಾಳುಗಳು ಮತ್ತು ನಟ್ಸ್ ಉಪಯೋಗಿಸುವುದು *ಆರೋಗ್ಯಕರವಾದ ತೆಂಗಿನ ಎಣ್ಣೆ, ಬೆಣ್ಣೆ, ತುಪ್ಪ ಉಪಯೋಗಿಸಿ *ಸಂಸ್ಕರಿಸಿದ ಆಹಾರವನ್ನು ಕಡಿಮೆ ಸೇವಿಸುವುದು *ಮೈದಾ, ಡಾಲ್ಡಾ ಮತ್ತು ರಿಫೈನ್ಡ್ ಎಣ್ಣೆಗಳನ್ನು ಕಡಿಮೆ ಮಾಡುವುದು *ನಿಯಮಿತವಾಗಿ ದಿನದ 24 ಗಂಟೆಗಳಲ್ಲಿ 16 ಗಂಟೆ ಕಾಲ ಉಪವಾಸ ಮಾಡುವುದು, ಬರೀ ನೀರು ಕುಡಿಯುವುದು *ಆರೋಗ್ಯಕರವಾದ ಪ್ರೊಟೀನ್, ಕೊಬ್ಬಿನಾಂಶವಿರುವ ಕಾಳುಗಳು, ಮೊಟ್ಟೆ, ಮೀನು, ಕೋಳಿ ಮಾಂಸ ಪ್ರತಿ ಆಹಾರದಲ್ಲಿ ಸೇವಿಸಬಹುದು.

ಭಾಗವಹಿಸಿದ ಫಲಾನುಭವಿಗಳು..
ಕೊಲೆಸ್ಟರಾಲ್-54 ಮಂದಿ
HBA1C-50 ಮಂದಿ
ಶುಗರ್-70 ಮಂದಿ
ಹಿಮೋಗ್ಲೋಬಿನ್-70 ಮಂದಿ
ಥೈರಾಯಿಡ್-50 ಮಂದಿ

LEAVE A REPLY

Please enter your comment!
Please enter your name here