ಕೆಯ್ಯೂರು ಗ್ರಾಪಂ ವಿಶೇಷ ಗ್ರಾಮಸಭೆ, ಸ್ವಚ್ಛತಾಗಾರರಿಗೆ ಗೌರವಾರ್ಪಣೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನಲ್ಲಿ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆ ತಯಾರಿಸಲು ವಿಶೇಷ ಗ್ರಾಮಸಭೆಯು ಅ.2 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆಯವರು ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು, ಪ್ರತಿಯೊಬ್ಬರು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು, ನಮ್ಮ ಗ್ರಾಮವನ್ನು ಕಸಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಎಲ್ಲರ ಸಹಕಾರ ಅಗತ್ಯ. ಗುಜರಾತ್‌ನಲ್ಲಿ ಹುಟ್ಟಿದ ಗಾಂಧೀಜಿಯವರು ಸ್ವಚ್ಛ ಭಾರತ್ ಕನಸು ಕಂಡಿದ್ದರು ಅದೇ ಗುಜರಾತ್‌ನಲ್ಲಿ ಹುಟ್ಟಿದ ಮೋದಿಜಿಯವರು ಗಾಂಧೀ ಕನಸನ್ನು ನನಸು ಮಾಡುತ್ತಿದ್ದಾರೆ ಇದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಗ್ರಾಪಂ ಸದಸ್ಯರುಗಳಾದ ಜಯಂತ ಪೂಜಾರಿ ಕೆಂಗುಡೇಲು, ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಶೇಷಪ್ಪ ದೇರ್ಲ, ಜಯಂತಿ ಎಸ್.ಭಂಡಾರಿ, ಮೀನಾಕ್ಷಿ ವಿ.ರೈ, ಅಮಿತಾ ಎಚ್.ರೈ, ಮಮತ ಎ.ಕೆ, ಗ್ರಾಮಸ್ಥರು, ಸಂಜೀವಿನಿ ತಂಡದ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ವಿಕಲಚೇತನರ ಕಾರ್ಯಕರ್ತರು ಭಾಗವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಜ್ಯೋತಿ, ಧರ್ಮಣ್ಣ ಸಹಕರಿಸಿದ್ದರು.


ಸ್ವಚ್ಛಗ್ರಾಹಿಗಳಿಗೆ ಗೌರವಾರ್ಪಣೆ
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಛತಾ ವಾಹಿನಿಯಲ್ಲಿ ಸೇವೆ ಮಾಡುವ ಸ್ಚಚ್ಛತಾ ಸಿಬ್ಬಂದಿಗಳನ್ನು( ಸ್ಚಚ್ಛಗ್ರಾಹಿ) ಗೌರವಿಸುವ ಕಾರ್ಯಕ್ರಮ ನಡೆಯಿತು. ಸ್ವಚ್ಛವಾಹಿನಿ ವಾಹನ ಚಾಲಕಿ ಜಯಂತಿ ಪರ್ತ್ಯಡ್ಕ, ಉಷಾ ದೇವಿನಗರ ಮತ್ತು ಕಾವ್ಯ ಮಾಡಾವುರವರುಗಳನ್ನು ಶಾಲು, ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

‘ ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾಮದಲ್ಲಿ ಸುಮಾರು 50 ಬಾವಿ ರಚನೆಯ ಗುರಿಯನ್ನು ಇಟ್ಟುಕೊಂಡಿದ್ದೇವೆ. ಸ್ವಚ್ಛತಾಗಾರರಿಗೆ ಗೌರವಾರ್ಪಣೆ ಮಾಡಿದ್ದೇವೆ. ಯಾರೂ ಕೂಡ ಅವರನ್ನು ಕೀಳಾಗಿ ಕಾಣಬಾರದು, ಅವರಿಗೂ ಸಮಾಜದಲ್ಲಿ ಗೌರವವಿದೆ. ಅವರಿಗೆ ಕಿರುಕುಳ ನೀಡುವುದು, ಕೀಳಾಗಿ ಕಾಣುವುದು ಕಂಡಬಂದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕ್ರಮವನ್ನು ಪಂಚಾಯತ್ ಮಾಡುತ್ತದೆ.’
-ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here