ಪುತ್ತೂರು: 2021ರಲ್ಲಿ ವಲಯ ಅರಣ್ಯಾಧಿಕಾರಿ ವಿಭಾಗದಲ್ಲಿ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಸಾಧನೆಗಳನ್ನು ಪರಿಗಣಿಸಿ, ಅರಣ್ಯ ಇಲಾಖೆಯು ನೀಡುವ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ರವರು ಸೆ. 29 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಬೆಂಗಳೂರಿನ ವಿಧಾನಸೌಧದ ಬಾಂಕೈಟ್ ಹಾಲ್ನಲ್ಲಿ ಸ್ವೀಕರಿಸಿದರು.
ಕುಂದಾಪುರ ಪಡುವರಿ ಗ್ರಾಮದ ಕೋಟೆಬಾಗಿಲು ದಿ. ವಿ. ಶ್ರೀನಿವಾಸ (ಅರಣ್ಯ ಇಲಾಖೆ) ಮತ್ತು ದಿ. ಪಿ. ಶಾರದರವರ ಪ್ರಥಮ ಪುತ್ರರಾಗಿ ಜನಿಸಿ, ಜಡ್ಕಲ್ ಮತ್ತು ಪಡುವರಿ ಕೋಟೆಬಾಗಿಲು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಬೈಂದೂರಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ್ದು, ಪಿ.ಯು.ಸಿ. ವಿಜ್ಞಾನ ಮತ್ತು ಪದವಿಯನ್ನು ಅಂಜುಮಾನ್ ಕಾಲೇಜು ಭಟ್ಕಳದಲ್ಲಿ ಮುಗಿಸಿದ್ದು 1989 ರಲ್ಲಿ ತಂದೆಯ ಅಕಾಲಿಕ ಮರಣದ ನಂತರ 1993 ರಲ್ಲಿ ಅರಣ್ಯ ಇಲಾಖೆಗೆ ಅರಣ್ಯ ರಕ್ಷಕರ ಕರ್ತವ್ಯಕ್ಕೆ ಸೇರಿ ತಟ್ಟಿಹಳ್ಳ ತರಬೇತಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿ 1994 ಸೇವೆ ಸಲ್ಲಿಸಿ, ಹೆಬ್ರಿ ವಲಯದ ಅಲ್ಪಾಡಿಯಲ್ಲಿ ಅರಣ್ಯ ರಕ್ಷಕರಾಗಿ 1994 ನವೆಂಬರ್ ನಿಂದ 1995 ರ ಅಕ್ಟೋಬರ್ ವರೆಗೆ ತಟ್ಟಿಹಳ್ಳ ವನಪಾಲಕರ ತರಬೇತಿ ಶಾಲೆಯಲ್ಲಿ ವನಪಾಲಕರ ತರಬೇತಿಯನ್ನು ಮುಗಿಸಿದ್ದು ಸದ್ರಿ ತರಬೇತಿಯಲ್ಲಿ ಪ್ರಥಮ ರ್ಯಾಂಕ್ನೊAದಿಗೆ ಗೌರವ ಪದವಿಯನ್ನು ಪಡೆದಿರುತ್ತಾರೆ. ನಂತರ 1995 ನವೆಂಬರ್ ನಿಂದ ವಿರಾಜ್ಪೇಟೆ ವಿಭಾಗದ ಕೇರಳ ಗಡಿ ವಲಯದ ಮುಂಡೋಟ್ ನಲ್ಲಿ 1998 ರ ವರೆಗೆ ಸೇವೆ ಸಲ್ಲಿಸಿ 1998 ರಿಂದ ಹೆಬ್ರಿ ವಲಯದ ಪೆರ್ಡೂರು ನಲ್ಲಿ ವನಪಾಲಕರಾಗಿ 2005 ರಿಂದ 2008 ವಲಯದ ಶಂಕರನಾರಾಯಣ ವನಪಾಲಕರಾಗಿ ಸೇವೆ ಸಲ್ಲಿಸಿ, ಅಲ್ಲಿಂದ ಮುಂಬಡ್ತಿ ಪಡೆದು ವಲಯ ಅರಣ್ಯಾಧಿಕಾರಿಯಾಗಿ ಮೂಡುಬಿದ್ರೆ ಅರಣ್ಯ ವಲಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ 2012 ಜುಲಾಯಿಯಿಂದ 2015ರ ಸೆಪ್ಟೆಂಬರ್ವರೆಗೆ ಮತ್ತೂರು ಅರಣ್ಯ ವಲಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿರುತ್ತಾರೆ.
2009 ರಿಂದ ಮಂಗಳೂರು ವೃತ್ತದ ವಲಯ ಅರಣ್ಯ ಅಧಿಕಾರಿಯವರ ಸಂಘದ ಕಾರ್ಯದರ್ಶಿ, 2012 ರಿಂದ 2015ರ ಅಕ್ಟೋಬರ್ವರೆಗೆ ಪುತ್ತೂರು ಅಧಿಕಾರಿಗಳ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. 49 ಬಾರಿ ರಕ್ತದಾನ ಮಾಡಿ ರಾಜ್ಯಾದ್ಯಂತ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಉಪ ವಲಯ ಅರಣ್ಯಾಧಿಕಾರಿರವರ ಸಂಘದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಿ 3000 ಕ್ಕೂ ಅಧಿಕ ಯುನಿಟ್ ರಕ್ತವನ್ನು ರಕ್ತನಿಧಿ ಕೇಂದ್ರಗಳಿಗೆ ಸಂಗ್ರಹಿಸಿ ನೀಡಿರುತ್ತಾರೆ. ಕಣ್ಣುಗಳನ್ನು ಉಡುಪಿ ರೆಡ್ ಕ್ರಾಸ್ ಸಂಸ್ಥೆಯವರ ಮೂಲಕ ದಾನ ಮಾಡಿರುತ್ತಾರೆ. 2003 ರಂದು ಅರ್ಚನಾ ರವರೊಂದಿಗೆ ವಿವಾಹವಾಗಿ, 1 ಗಂಡು, 1 ಹೆಣ್ಣು ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದಾರೆ. ಹೆಬ್ರಿ ವಲಯ, ಶಂಕರ ನಾರಾಯಣ ವಲಯ, ಮೂಡಬಿದ್ರೆ ವಲಯ ಮತ್ತು ಪುತ್ತೂರು ವಲಯ, ಮಂಗಳೂರು ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಸುಮಾರು 60ಕ್ಕೂ ಹೆಚ್ಚು ಶ್ರೀಗಂಧ ಮತ್ತು ಇತರ ಅರಣ್ಯ ಸೊತ್ತು ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಿದ್ದು, 50ಕ್ಕೂ ಹೆಚ್ಚು ವಾಹನವನ್ನು ಸರಕಾರದ ಪರ ಅಮಾನತ್ತು ಪಡಿಸಿರುತ್ತಾರೆ.
ಈ ಪೈಕಿ ಉಡುಪಿ, ಮಂಗಳೂರು, ಪುತ್ತೂರು ನ್ಯಾಯಾಲಯಗಳಲ್ಲಿ 6 ತಕ್ಷೀರುಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿರುತ್ತದೆ. ಅಲ್ಲದೆ ನೆಡುತೋಪು ಬೆಳೆಸುವಿಕೆ, ಸಸ್ಯಪಾಲನಾಯಗಳಲ್ಲಿ ಸಸಿಗಳನ್ನು ಬೆಳೆಸುವುದು, ಅರಣ್ಯ ಬೆಂಕಿಯನ್ನು ತಡೆಗಟ್ಟುವುದು, ಅರಣ್ಯಗಳಲ್ಲಿ ನೀರು ಇಂಗಿಸುವಿಕೆ ಮುಂತಾದ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿರುತ್ತಾರೆ. ಈ ಮೇಲಿನ ಎಲ್ಲಾ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಗಣರಾಜ್ಯೋತ್ಸವದ ಪ್ರಯುಕ್ತ ನೀಡುವ 2016ರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹಾಗೂ 2016ನೇ ಸಾಲಿನ ಸಾಲುಮರ ತಿಮ್ಮಕ್ಕ ಅಂತರಾಷ್ಟ್ರೀಯ ಫೌಂಡೇಶನ್ ವತಿಯಿಂದ ಗೌರವ ಪುರಸ್ಕಾರವನ್ನು ಪಡೆದಿರುತ್ತಾರೆ. ಸದ್ರಿಯವರು 2021 ರಂದು ಮಂಗಳೂರು ವಲಯದಿಂದ ವರ್ಗಾವಣಿಗೊಂಡು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿ ಪದೋನ್ನತಿಗೊಂಡು, ಕರಾವಳಿ ನಿಯಂತ್ರಣ ವಲಯ, ಮಂಗಳೂರು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ವರ್ಗಾವಣೆಗೊಂಡು 2022 ರಿಂದ ಉಡುಪಿ-ಮಂಗಳೂರು ಅರಣ್ಯ ಸಂಚಾರಿ ದಳ (ಜಾಗೃತ) ಇಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.