ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ದೇಶದ್ಯಾಂತ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದ್ದು, ಅ.7ರಂದು ಪುತ್ತೂರಿಗೆ ಬರುವ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದ ಸ್ವಾಗತ ಸಮಿತಿ ಸಂಚಾಲಕರಾಗಿ ಕೃಷ್ಣಪ್ರಸಾದ್ ಬೆಟ್ಟ ಮತ್ತು ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ವಿರೂಪಾಕ್ಷ ಭಟ್, ಉಪಾಧ್ಯಕ್ಷರುಗಳಾಗಿ ಭಾಸ್ಕರ ಬಲ್ಯಾಯ ಕಾವು, ಅಜಿತ್ ರೈ ಹೊಸಮನೆ, ಜಯಂತ ಶೆಟ್ಟಿ ಕಂಬಳತ್ತಡ್ಡ, ಶರವಾತಿ ರವಿನಾರಾಯಣ, ಜಯಂತಿ ನಾಯಕ್, ಸಹ ಕಾರ್ಯದರ್ಶಿಗಳಾಗಿ ದಿನೇಶ್ ಪಂಜಿಗ, ಸಚಿನ್ ಶೆಣೈ, ಸದಸ್ಯರುಗಳಾಗಿ ಡಾ. ದಯಾಕರ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸಂಪತ್ ಸುವರ್ಣ, ಜನಾರ್ದನ ಕೋಡಿ, ಮಹಾಬಲ ರೈ, ಅಶೋಕ್ ಬ್ರಹ್ಮನಗರ, ಆನಂದ ನೆಕ್ಕರೆ, ಮನೀಶ್ ಬನ್ನೂರು, ಮಮತ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಪುತ್ತೂರು ಪಂಚವಟಿ ಕಾರ್ಯಾಲಯದಲ್ಲಿ ಕಾರ್ಯಕ್ರಮದ ಬೈಠೆಕ್ನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪುತ್ತೂರಿನಲ್ಲಿ ಬೃಹತ್ ಶೋಭಾಯಾತ್ರೆ
ಹಿಂದು ಶೌರ್ಯ ಜಾಗರಣ ರಥಯಾತ್ರೆಯು ಸೆ.25ರಂದು ಚಿತ್ರದುರ್ಗದಿಂದ ಆರಂಭಗೊಂಡಿದ್ದು, ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಜಿಲ್ಲೆಗಳ ಮೂಲಕ ಹಾದು ಅ.7ಕ್ಕೆ ಪುತ್ತೂರಿಗೆ ಬರಲಿದೆ. ಪುತ್ತೂರಿನಲ್ಲಿ ಸಂಜೆ ಬೃಹತ್ ಶೊಭಯಾತ್ರೆ ಮತ್ತು ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದು ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅ.10ಕ್ಕೆ ಉಡುಪಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ರಥಯಾತ್ರೆ ಸಂಪನ್ನಗೊಳ್ಳಲಿದೆ.