ಪುತ್ತೂರು : ಕರ್ನಾಟಕ ರಾಜ್ಯ ಸಹ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (ಕೆ ಸೆಟ್ 2025) ಜೀವ ವಿಜ್ಞಾನ ವಿಭಾಗದಲ್ಲಿ ನೆಹರುನಗರ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಉಪಪ್ರಾಂಶುಪಾಲೆ ಶ್ರೀ ದೇವಿ ಹೆಗ್ಡೆ ಅವರು ಅರ್ಹತೆ ಗಳಿಸಿಕೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್ ನಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿಯಲ್ಲಿ ದ್ವಿತೀಯ ರ್ಯಾಂಕ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿಯಲ್ಲಿ ಮೂರನೇ ರ್ಯಾಂಕ್ ಮತ್ತು ಸೆಂಟ್ರಲ್ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್ ಹಾಗೂ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಪೂರ್ಣ ಗೊಳಿಸಿರುತ್ತಾರೆ.
ಪರ್ಲಡ್ಕ ನಿವಾಸಿ, ಶ್ರೀನಿವಾಸ ಹೆಗ್ಡೆ ,ಶೋಭಾ ದಂಪತಿಗಳ ಪುತ್ರಿಯಾಗಿರುವ ಇವರು ಕೋರ್ಟು ರಸ್ತೆಯಲ್ಲಿ ಉದ್ಯಮಿ ಕೊಂಬೆಟ್ಟು ನಿವಾಸಿ ಗಣೇಶ್ ಪೈ ಇವರ ಪತ್ನಿ.
