ನೂರುಲ್ ಹುದಾ ಯುಎಇ ‘ಮೀಲಾದ್ ಕಾನ್ಫರೆನ್ಸ್’ – ಪ್ರವಾದಿಯವರು ವಿಶ್ವಕ್ಕೆ ಮಾನವೀಯ ಸಂದೇಶವನ್ನು ಸಾರಿದ್ದಾರೆ-ಹನೀಫ್ ನಿಝಾಮಿ

0

ಪ್ರವಾದಿ ಜನ್ಮದಿನದ ಸಂಭ್ರಮದಲ್ಲಿ ಒಟ್ಟು ಸೇರಿದ್ದೇವೆ-ಅಶ್ರಫ್ ಶಾ

ಪುತ್ತೂರು: ಪ್ರವಾದಿ ಪ್ರೇಮವು ಸತ್ಯವಿಶ್ವಾಸಿಗಳ ಅವಿಭಾಜ್ಯ ಅಂಗವಾಗಿದ್ದು, ಪ್ರವಾದಿ ಪ್ರೇಮವಿಲ್ಲದೆ ನೈಜ ಮುಸಲ್ಮಾನನಾಗಲು ಸಾಧ್ಯವಿಲ್ಲ, ವಿಶ್ವಕ್ಕೆ ಮಾನವೀಯ ಸಂದೇಶವನ್ನು ಪಸರಿಸಿದ ವಿಶ್ವ ವಿಮೋಚಕ ಪ್ರವಾದಿ (ಸ.ಅ)ರವರು ಜಗತ್ತಿನ ಶಾಂತಿ, ಸೌಹಾರ್ದತೆಯ ವಕ್ತಾರರಾಗಿ ಬಣ್ಣಿಸಲ್ಪಟ್ಟರು. ಆಧುನಿಕ ಜಗತ್ತು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೂ ಪರಿಹಾರ ಸತ್ಯವಿಶ್ವಾಸ ಮತ್ತು ವಿಶ್ವಪ್ರವಾದಿ (ಸ.ಅ)ರ ಪುಣ್ಯ ಚರ್ಯೆಗಳಿಗೆ ಮರಳುವುದಾಗಿದೆ. ವರ್ತಮಾನ ಕಾಲಘಟ್ಟದಲ್ಲಿ ಪ್ರವಾದಿ (ಸ.ಅ)ರ ವೀಕ್ಷಣೆ ಮತ್ತು ನಿರ್ದೇಶನಗಳ ಪ್ರಸಕ್ತಿ ಹೆಚ್ಚುತಿದೆಯೆಂದು ವಾಗ್ಮಿ ಹನೀಫ್ ನಿಝಾಮಿ ಮೊಗ್ರಾಲ್ ಹೇಳಿದರು.

ದುಬೈಯಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯುಎಇ ಸಮಿತಿ ಆಯೋಜಿಸಿದ ನಬಿಯ್ಯಿಲ್ ಹುದಾ ಮೀಲಾದ್ ಕಾನ್ಫೆರೆನ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್(ಸ.ಅ)ರನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವುದರಿಂದ ಇಹಪರ ಬದುಕಿನ ಉನ್ನತಿಗೆ ದಾರಿಯೊದಗುವುದು, ಇಸ್ಲಾಮೀ ಇತಿಹಾಸದಲ್ಲಿ ಗುರುತಿಸಲ್ಪಡುವ ಮಹಾತ್ಮರೆಲ್ಲರೂ ಪ್ರವಾದಿವರ್ಯ(ಸ.ಅ)ರನ್ನು ಪ್ರೀತಿಸಿಯೇ ಸತ್ಪುರುಷರೆನಿಸಿಕೊಂಡರು. ಅವರನ್ನು ಜೀವನ ಪರ್ಯಂತ ಪ್ರೀತಿಸಿದಾಗ ಮಾತ್ರ ಎಲ್ಲ ಒಳಿತಿನ ಕದಗಳು ತೆರೆದು ಕೊಳ್ಳುತ್ತವೆ, ಯುವ ಸಮೂಹವು ಪ್ರವಾದಿ ಜೀವನ ಚರ್ಯೆಯನ್ನು ಮೈಗೂಡಿಸಿಕೊಂಡು ಇಸ್ಲಾಮಿ ತತ್ವಾದರ್ಶಗಳನ್ನು ಅಳವಡಿಸಿಕೊಂಡು ತನ್ನ ಜೀವನೋಪಾಯಕ್ಕಾಗಿ ಕಡಲಾಚೆಗೆ ಧಾವಿಸಿಬಂದು ಅಹ್ಲು ಸುನ್ನತ್ತಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಘ ಸಂಸ್ಥೆಗಳನ್ನ ಪ್ರೋತ್ಸಾಹಿಸಿಕೊಂಡು ಆ ಮೂಲಕ ಪರಲೋಕದ ಯಶಸನ್ನು ಪಡೆಯಬೇಕು ಎಂದು ಅವರು ಹೇಳಿದರು.
ಪ್ರಥಮ ಬಾರಿಗೆ ಯುಎಇಗೆ ಆಗಮಿಸಿದ ಹನೀಫ್ ನಿಝಾಮಿರವರನ್ನು ಇದೇ ಸಂಧರ್ಭದಲ್ಲಿ ನೂರುಲ್ ಹುದಾ ಮುಖಂಡರು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನೂರುಲ್ ಹುದಾ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ಅಸ್ಕರಲಿ ತಂಙಳ್ ಕೊಲ್ಪೆ ಪ್ರಾರ್ಥಿಸಿ ನೂರುಲ್ ಹುದಾ ಕಾರ್ಯಚಟುವಟಿಕೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಬಿಯ್ಯಿಲ್ ಹುದಾ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮನ್ ಬಷೀರ್ ಹುದವಿ ರವರು ಅತಿಥಿಗಳನ್ನು ಸ್ವಾಗತಿಸಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ಕಾರ್ಯಕ್ಷೇತ್ರ, ಅಲ್ಲಿನ ವಿದ್ಯಾಭ್ಯಾಸದ ಗುಣಮಟ್ಟ ಹಾಗೂ ಶಿಸ್ತುಬದ್ದ ಕ್ಯಾಂಪಸ್ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ನೂರುಲ್ ಹುದಾ ಅಕಾಡೆಮಿಯಲ್ಲಿ ವಿವಿಧ ಕಾಮಗಾರಿಗಳು , ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ತರಂಗವನ್ನು ಸೃಷ್ಟಿಸಲಿದ್ದು ತಾವೆಲ್ಲರೂ ಅಕಾಡೆಮಿ ಯುಎಇ ಸಮಿತಿಯೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು.

ಪ್ರವಾದಿ ಜನ್ಮದಿನದ ಸಂಭ್ರಮದಲ್ಲಿ ಒಟ್ಟು ಸೇರಿದ್ದೇವೆ-ಅಶ್ರಫ್ ಶಾ
ಕಾರ್ಯಕ್ರಮ ಉದ್ಘಾಟಿಸಿದ ಅಶ್ರಫ್ ಷಾ ಮಾಂತೂರು ಮಾತನಾಡಿ ಪ್ರವಾಸಿಗಳಾದ ನಮಗೆ ಹಲವಾರು ರೀತಿಯ ಮೋಜು ಮಸ್ತಿಗಳನ್ನು ಆಯ್ದುಕೊಳ್ಳುವಂತಹ ಅವಕಾಶಗಳಿದ್ದರೂ ಕೂಡ ನಾವು ಪುಣ್ಯ ಪ್ರವಾದಿ (ಸ ಅ) ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಒಟ್ಟು ಸೇರಿದ್ದೇವೆ. ಇಂದು ಯುವ ಸಮೂಹವು ದೀನೀ ಚಟುವಟಿಕೆಗಳಲ್ಲಿ ಅಲ್ಪ ದೂರವಿದ್ದು ಅದರಲ್ಲೂ ಅನಿವಾಸಿಗಳಲ್ಲಿ ಬಹುತೇಕ ಮನೋರಂಜನೆಗಳೆಡೆಗೆ ಆಕರ್ಷಿತರಾಗುವ ಈ ಸಂಧರ್ಭದಲ್ಲಿ ನೂರುಲ್ ಹುದಾ ಆಯೋಜಿಸಿದ ಪ್ರವಾದಿ ಕೀರ್ತನೆಗಳನ್ನೊಳಗೊಂಡ ಈ ಪುಣ್ಯ ಕಾರ್ಯಕ್ರಮದಲ್ಲಿ ಸೇರಿರುವುದು ಬಹು ಸಂತೋಷದ ವಿಷಯವಾಗಿದ್ದು, ಪರಸ್ಪರ ಸ್ನೇಹ ಸಹೋದರತೆ ಯಿಂದ ಬಾಳಿ ಬದುಕಲು ಕರೆ ನೀಡಿದರು.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅಬ್ದುಲ್ಲಾ ಮದುಮೂಲೆರವರು ಮಾತನಾಡಿ ವಿದ್ಯೆ ಮತ್ತು ಪ್ರವಾದಿ ಪ್ರೇಮ ನನಗೆ ತುಂಬಾ ಇಷ್ಟವಾದ ವಿಷಯಗಳಾಗಿದ್ದು ಪ್ರವಾದಿ ಪ್ರೇಮದ ಬಗ್ಗೆ ಒತ್ತಿ ಹೇಳಿದರು. ನೂರುಲ್ ಹುದಾ ವಿದ್ಯಾಭ್ಯಾಸಕ್ಕಾಗಿ ನೀಡುತಿರುವ ಪ್ರಾಮುಖ್ಯತೆಯನ್ನು ಮತ್ತು ಶ್ರಮವನ್ನು ಅಭಿನಂದಿಸಿ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಉಪಸ್ಥಿತರಿದ್ದ ನೂರುಲ್ ಹುದಾ ಅಬುದಾಬಿ ರಾಜ್ಯ ಸಮಿತಿ ಅಧ್ಯಕ್ಷರಾದ ಝೈನ್ ಸಖಾಫಿ ಉಳ್ಳಾಲ ರವರು ಮಾತನಾಡಿ ಪ್ರವಾದಿವರ್ಯರು ಕೇವಲ ಇಸ್ಲಾಮಿಗೆ ಮಾತ್ರ ದೇವದೂತರಾಗಿರದೆ ಜಗತ್ತಿನ ಸಕಲ ಜೀವ ರಾಶಿಗಳಿಗೂ ದೇವದೂತರಾಗಿದ್ದಾರೆ. ಅವರ ಜೀವನ ಶೈಲಿಯ ಪ್ರತಿಯೊಂದು ಕೂಡ ಇಂದು ಇತಿಹಾಸದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಪ್ರವಾದಿ ಸ ಅ ರವರ ತತ್ವ ಸಿದ್ಧಾಂತಗಳು ಇಂದು ವೈಜ್ಞಾನಿಕವಾಗಿ ಗೋಚರಿಸುತ್ತಿದೆ, ಅಂತಹ ಪ್ರವಾದಿಯ ಅನುಯಾಯಿಗಳಾದ ನಾವು ಪರಸ್ಪರ ಸಹೋದರತೆಯಿಂದ ಬಾಳಿ ಬದುಕಬೇಕೆಂದು ಹೇಳಿದರು.

ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ಮಾತನಾಡಿ ಇಸ್ಲಾಮ್ ಧರ್ಮವು ವಿದ್ಯಾಬ್ಯಾಸಕ್ಕೆ ನೀಡಿದ ಮಹತ್ವ ನೂರುಲ್ ಹುದಾ ಅಕಾಡೆಮಿಯ ಶೈಕ್ಷಣಿಕ ರೀತಿ ನೀತಿಗಳ ಕುರಿತು ಪ್ರಶಂಸಿಸಿ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಹಾಗೂ ನೂರುಲ್ ಹುದಾ ರಾಷ್ಟ್ರೀಯ ಸಮಿತಿ ರಕ್ಷಾಧಿಕಾರಿ ಯೂಸುಫ್ ಹಾಜಿ ಈಶ್ವರಮಂಗಿಲ, ಉದ್ಯಮಿ ಮೊಹಮ್ಮದ್ ಅಯ್ಫಾನ್, ಉದ್ಯಮಿ ಅಶ್ರಫ್ ನಾಟೆಕಲ್, ಉದ್ಯಮಿ ಅನ್ಸಾರ್ ಬೆಳ್ಳಾರೆ, ಮಹಮ್ಮದ್ ಮಾಡಾವು, ಶಂಸುದ್ದೀನ್ ಸೂರಲ್ಪಾಡಿ, ಅಶ್ರಫ್ ಯಾಕೂತ್, ಅಬ್ದುಲ್ ಖಾದರ್ ಬೈತಡ್ಕ , ಜಬ್ಬಾರ್ ಬೈತಡ್ಕ, ಇಬ್ರಾಹಿಂ ಅಬೂಬಕ್ಕರ್ ಆತೂರ್, ಅನ್ವರ್ ಮಾಣಿಲ, ಅಶ್ರಫ್ ಪಿ ಕೆ, ಅಶ್ರಫ್ ಗಾಳಿಮುಖ, ಅಬ್ದುಲ್ ರಝಾಕ್ ಹಾಜಿ ಮಣಿಲ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರಾರಂಭದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ರವರ ನೇತೃತ್ವದಲ್ಲಿ ಮೌಲೂದ್ ಮಜ್ಲಿಸ್ ನಡೆಯಿತು. ಕಾರ್ಯಕ್ರಮದಲ್ಲಿ ಮಾಸ್ಟರ್ ಉಮರ್ ಶಾನ್ ತ್ವಾಹಿರ್ ಖಿರಾಅತ್ ಪಠಿಸಿದರು. ಪುಟಾಣಿಗಳ ಸಾಂಸ್ಕೃತಿಕ ಕಾರ್ಯಗಳನ್ನು ಆಯೋಜಿಸಿದ್ದು ಭಾಗವಹಿಸಿದ ಪುಟಾಣಿಗಳಿಗೆ ಪ್ರೋತ್ಸಾಹಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಗೆ ಹಲವು ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಬಂದಿರುವ ಹೈದರ್ ಅಲಿ ಈಶ್ವರಮಂಗಲ ಹಾಗೂ ಅನ್ಸಾರ್ ಬೆಳ್ಳಾರೆಯವರಿಗೆ ನೂರುಲ್ ಹುದಾ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಗೌರವಿಸಲಾಯಿತು.
ಕರ್ನಾಟಕ ಯುಎಇ, ಎಸ್ಕೆಎಸ್ಸೆಸ್ಸೆಫ್ ಇತರ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಮಾಜದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು
ವಿಖಾಯ ಚೇರ್ಮನ್ ನವಾಜ್ ಬಿ ಸಿ ರೋಡ್ ನೇತೃತ್ವದ ಯುವಕರ ತಂಡ ಕಾರ್ಯಕ್ರಮದ ಆರಂಭದಿಂಧ ಅಂತ್ಯದವರೆಗೂ ಸ್ವಯಂ ಸೇವಕರಾಗಿ ನಿಂತು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದರು.
ಅಬ್ದುಲ್ಲಾ ನಈಮಿ ನೇತೃತ್ವದಲ್ಲಿ ನೇರಪ್ರಸಾರ ನಡೆಯಿತು.
ಅಝರ್ ಹಂಡೇಲ್ ಹಾಗೂ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಮೀಲಾದ್ ಕಾನ್ಫರೆನ್ಸ್ ಕಾರ್ಯದರ್ಶಿ ಸಿದ್ದೀಕ್ ಕೊಡಿನೀರ್ ವಂದಿಸಿದರು.

LEAVE A REPLY

Please enter your comment!
Please enter your name here