ಪುತ್ತೂರು: ಬಪ್ಪಳಿಗೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಕಾರ್ಯಕರ್ತೆ ಹಾಗೂ ಸಹಾಯಕಿಯವರಿಗೆ ಬೊಳುವಾರು ಸೂರ್ಯಪ್ರಭಾ ಸಂಕೀರ್ಣದ ಮಾಲಕಿ ದೀಪನಾಯಕ್ರವರು ಸಿದ್ಧ ಉಡುಪುಗಳು, ಡ್ರೈಫ್ರೂಟ್ಸ್, ಸಿಹಿತಿಂಡಿ, ಸಾರಿಗಳನ್ನು ನೀಡಿದರು. ಬಳಿಕ ಉಪಾಹಾರದ ವ್ಯವಸ್ಥೆಯನ್ನು ಮಾಡಿದರು. ದೀಪಾ ನಾಯಕ್ರವರ ಪುತ್ರ ವರುಣ್, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್, ಸಹಾಯಕಿ ಪ್ರೇಮ ಹಾಗೂ ಮಕ್ಕಳು ಉಪಸ್ಥಿತರಿದ್ದರು.