ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ನರ್ಸರಿ ಪುಟಾಣಿಗಳಿಂದ ಫ್ಲವರ್ಸ್ ಡೇ ಆಚರಣೆ, ಪ್ರದರ್ಶನ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ನರ್ಸರಿ ಪುಟಾಣಿಗಳಿಂದ ಅ.5ರಂದು ಫ್ಲವರ್ಸ್ ಡೇ ದಿನಾಚರಣೆ ಮತ್ತು ಸುಮಾರು ನೂರಕ್ಕಿಂತ ಹೆಚ್ಚು ವಿವಿಧ ಹೂಗಳ ಹೆಸರು ಸಮೇತ ಪ್ರದರ್ಶನವನ್ನು ಮಾಡಲಾಯಿತು. ಈ ಕಾರ್ಯಕ್ರಮವನ್ನು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ಉದ್ಘಾಟಿಸಿದರು.

ವಿವಿಧ ರೀತಿಯ ಕಾಡಿನ ಹೂಗಳನ್ನು ಪುಟಾಣಿಗಳು ಸಂಗ್ರಹಿಸಿ ತಂದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳ ವೇಷಭೂಷಣಗಳು ಕೂಡ ನೈಜ ಹೂವಿನಿಂದಲೇ ಅಲಂಕೃತವಾಗಿತ್ತು. ಅದಕ್ಕೆ ಬಣ್ಣದ ಲೈಟಿಂಗ್ಸ್ ಇನ್ನಷ್ಟು ಮೆರುಗನ್ನು ನೀಡಿತು. ಈ ಪ್ರದರ್ಶನವನ್ನು ಹೆತ್ತವರು ತಂಡೋಪತಂಡವಾಗಿ ಬಂದು ವೀಕ್ಷಿಸಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಹೆತ್ತವರ ಮತ್ತು ಪುಟಾಣಿಗಳ ಸೃಜನಶೀಲತೆ ಎದ್ದು ಕಾಣುವಂತಿತ್ತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸವಿತಾರವರ ಮಾರ್ಗದರ್ಶನದೊಂದಿಗೆ ಶಿಕ್ಷಕಿಯರಾದ ಶ್ರುತಿ, ಸುಚೇತ, ಮೇಘನಾ, ಆಶಾರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಭಾಂಗಣದ ಒಳಗೆ ಮತ್ತು ಹೊರಗೆ ಹೂವಿನಿಂದಲೇ ಅಲಂಕೃತವಾಗಿರುವುದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here