ವಲಯ ಮಟ್ಟದ ಕ್ರೀಡಾಕೂಟ- ನರಿಮೊಗರು ಸರಸ್ವತಿ ಶಾಲೆಗೆ ಹಲವು ಪ್ರಶಸ್ತಿ

0

ನರಿಮೊಗರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನರಿಮೊಗರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ನರಿಮೊಗರು ಸರಸ್ವತಿ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

8ನೇ ತರಗತಿಯ ವರ್ಷಿಣಿ 600ಮೀ.ಓಟದಲ್ಲಿ ಪ್ರಥಮ ಸ್ಥಾನ ಮತ್ತು 400ಮೀ.ಓಟದಲ್ಲಿ ದ್ವಿತೀಯ ಸ್ಥಾನ, 7ನೇ ತರಗತಿಯ ಧನುಷಾ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, 7ನೇ ತರಗತಿಯ ಮಹಮ್ಮದ್ ಸುಹೈಲ್ 200ಮೀ. ಓಟದಲ್ಲಿ ದ್ವಿತೀಯ ಸ್ಥಾನ, 9ನೇ ತರಗತಿಯ ವಿವೇಕ್ 800ಮೀ. ಓಟದಲ್ಲಿ ತೃತೀಯ ಸ್ಥಾನ, 10ನೇ ತರಗತಿಯ ಜಾಶೀಫ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, 8ನೇ ತರಗತಿಯ ಜೋಹನ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here