ಕೆಯ್ಯೂರು:ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು:  ಕೆಯ್ಯೂರು ಗ್ರಾಮದ  ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರದಲ್ಲಿ ಅ.14ರಿಂದ ಅ.24ವರೆಗೆ ನಡೆಯುವ ಶ್ರೀ ದೇವಿಯ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಾಲಯ ಪ್ರದಾನ ಆರ್ಚಕರಾದ ಶ್ರೀನಿವಾಸ ರಾವ್ ಮತ್ತು ಆನಂದ ಭಟ್ ದೇವರಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ  ಶಶಿಧರ ರಾವ್ ಬೊಳಿಕಲ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾಮಣ್ಣ ಗೌಡ ಮಾಡಾವು, ಬಾಬುಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರೀ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಕ್ಷೇತ್ರದ ಸಿಬ್ಬಂದಿಗಳು, ಸಂಘ ಸಂಸ್ಥೆಗಳು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here