ಪುತ್ತೂರು: ಸಿದ್ದರಾಮಯ್ಯ, ಪರಮೇಶ್ವರ್ ರವರು ಹಿಂದೂಗಳೇ. ಅವರಿಗೂ ಮುಂದಿನ ದಿನಗಳಲ್ಲಿ ಕಾಂಗ್ರೇಸ್ನ ಅಖಂಡ ಶ್ರೀನಿವಾಸಮೂರ್ತಿಯವರಿಗಾದಂತ ರೀತಿಯ ಮತಾಂಧ ದಾಳಿಗಳ ವೇದಿಕೆ ರೂಪಗೊಳ್ತಿದೆ. ಹಾಗಾಗಿ ಮತಾಂಧರ ಓಲೈಕೆ ರಾಜಕಾರಣ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಓಲೈಕೆ ಮಾಡುವ ನಿಮಗೂ ಮತಾಂಧರ ದಾಳಿಯ ಗಂಡಾಂತರ ತಪ್ಪಿದ್ದಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ಮಾಧ್ಯಮ ಪ್ರಕಟನೆ ಹೊರಡಿಸಿ ಮಾತನಾಡಿದ ಪುತ್ತಿಲ, ನಾನು ಶಿವಮೊಗ್ಗದ ರಾಗಿಗುಡ್ಡದಲ್ಲಿ ಪ್ರತಿ ಮನೆಗೂ ಹೋಗಿ ದಾಳಿಗೊಳಗಾದ ಹಿಂದೂಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಅಲ್ಲಿ ಮಕ್ಕಳು, ಮಹಿಳೆಯರು ವೇದನೆ ಕಣ್ಣೀರು ತರಿಸುತ್ತದೆ. ಶಿಕ್ಷಣ ನೀಡಿದ ಶಿಕ್ಷಕಿಯನ್ನು ಬಿಡದೇ ಮತಾಂಧರು ದಾಳಿ ಮಾಡಿದ್ದಾರೆ. ಆ ಪ್ರದೇಶದಲ್ಲಿ ಬದುಕು ನಡೆಸಲು ಹಿಂದೂಗಳು ಭಯಬೀತರಾಗಿದ್ದಾರೆ. ಇದೇ ರೀತಿ ಓಲೈಕೆ ನಡೆಸಿದರೆ ಈ ಘಟನೆ ಇನ್ನು ಶಿವಮೊಗ್ಗ ಬಿಟ್ಟು ಬೇರೆ ಕಡೆ ಕೂಡ ಹಬ್ಬುತ್ತದೆ.
ಟಿಪ್ಪು ಔರಂಗಜೇಬನ ಪ್ರತಿಕೃತಿ ಪ್ರದರ್ಶನ ನಡೆಸಿ, ತಲವಾರು ಜಲಪಿಸಿದ ರಾಗಿಗುಡ್ಡದಲ್ಲಿ ದಾಂದಲೆ ಮಾಡಿದ ಮತಾಂಧರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮುಸ್ಲಿಂ ಓಲೈಕೆಯ ಕಾಂಗ್ರೇಸ್ ಸರ್ಕಾರ ನನ್ನ ಮೇಲೆ ಕೇಸ್ ದಾಖಲಿಸಿದೆ. ಈ ಕೇಸ್ ಗೆ ಹೆದರಿ ಕೂತುಕೊಳ್ಳುವ ಜಾಯಮಾನ ನನ್ನದಲ್ಲ ಕರ್ನಾಟಕದ ಎಲ್ಲೇ ಮಂತಾಧರ ದಾಳಿ ಆದರೂ ನಾನು ಅಲ್ಲಿನ ಹಿಂದೂಗಳ ಜೊತೆಗಿದ್ದೇನೆ. ಭಯೋತ್ಪಾದಕರ ರೀತಿಯಲ್ಲಿ ಬದುಕಬೇಕೆಂದು ಮತಾಂಧರು ಯೋಚನೆ ನಡೆಸಿದರೇ ಹಿಂದೂಗಳು ತಲವಾರು ಹಿಡಿಯಬೇಕಾಗುವುದು ಅನಿವಾರ್ಯವಾಗ್ತದೆ. ನಿನ್ನೆ ನಾನು ಶಿವಮೊಗ್ಗದಲ್ಲಿ ಕೊಟ್ಟ ಹೇಳಿಕೆಯನ್ನು ಮತ್ತೆ ಸಮರ್ಥಿಸುತಿದ್ದೇನೆ ಎಂದು ಅರುಣ್ ಪುತ್ತಿಲ ಸ್ಪಷ್ಟಪಡಿಸಿದರು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ