ಕಾಣಿಯೂರು ಪ್ರಗತಿ ಆ.ಮಾ ವಿದ್ಯಾರ್ಥಿಗಳಿಂದ ವಸ್ತುಗಳ ಮಾದರಿ ಪ್ರದರ್ಶನ

0

ಸೃಜನಶೀಲತೆ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸುವ ಕಾರ್ಯಕ್ರಮ ಶ್ಲಾಘನೀಯ – ಜಯಸೂರ್ಯ ರೈ ಮಾದೋಡಿ

ಕಾಣಿಯೂರು : ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮದ ಒಂದನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ವಸ್ತುಗಳ ಮಾದರಿ ಪ್ರದರ್ಶನವನ್ನು ನಡೆಸಿಕೊಟ್ಟರು. ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈಮಾದೋಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿ, ಮಕ್ಕಳಲ್ಲಿ ಎಳವೆಯಲ್ಲಿಯೇ ಸೃಜನಶೀಲತೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ , ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಹುಟ್ಟಿಸಿದರು. ಮಕ್ಕಳು ತಮ್ಮ ತೊದಲು ಮಾತುಗಳ ಮೂಲಕ ಬಾಲಿಶವಾಗಿಯೇ ಉತ್ತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಿರಿಯ ವಿದ್ಯಾರ್ಥಿಗಳಿಗಿಂತ ತಾವೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಪುಟಾಣಿಗಳ ಮಾದರಿ ವಸ್ತುಗಳು ಒಂದಕ್ಕೊಂದು ಭಿನ್ನವಾಗಿದ್ದು ಕುತೂಹಲವನ್ನು ಹೆಚ್ಚಿಸುವಂತಿತ್ತು. ಪೋಷಕರ ಸಹಕಾರವಂತು ಎಲ್ಲೆ ಮೀರಿತ್ತು. ಪರೀಕ್ಷಾ ಗುಂಗಿನಲ್ಲಿದ್ದ ಪುಟಾಣಿಗಳಿಗೆ ಈ ಕಾರ್ಯಕ್ರಮವು ಹಬ್ಬದಂತಾಗಿತ್ತು. ಪೋಷಕರು ಮತ್ತು ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಇದನ್ನು ವೀಕ್ಷಿಸಿ ಸಂಭ್ರಮಿಸಿದರು.


ಮನೆಯ ಮಾದರಿ , ಪ್ರಗತಿ ಸಂಸ್ಥೆಯ ಮಾದರಿ, ಝೂ ಮಾದರಿ, ಫುಡ್ ಸಿಸ್ಟಮ್ , ಅಕ್ವೇರಿಯಂ, ಗಡಿಯಾರ, ಸೋಲಾರ್ ಸಿಸ್ಟಮ್, ವನ್ಯಜೀವಿಗಳು, ಉದ್ಯಾನವನ, ಪೌಷ್ಟಿಕ ಮತ್ತು ಅಪೌಷ್ಟಿಕ ಆಹಾರ, ಆಹಾರ ಸರಪಳಿ, ಗುಡಿಸಲು, ಮರ ಮತ್ತು ಬಿಡಿ ಭಾಗಗಳ ಮಾದರಿಗಳು ವಿಶೇಷವಾಗಿತ್ತು. ತರಗತಿ ಶಿಕ್ಷಕರಾದ ಪ್ರಜ್ವಲಿ ಮತ್ತು ರೇವತಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಸವಿತಾ ಕೆ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here