ವಿಜ್ಞಾನ ಪ್ರಯೋಗಗಳು, ರಾಕೆಟ್ ಉಡಾವಣೆ, ಸುಲಭ ಗಣಿತ, ಕ್ಯಾಲಿಗ್ರಫಿ ಬರವಣಿಗೆ, ಕಲೆ, ಕರಕುಶಲ ಇತ್ಯಾದಿ ಇಂದೇ ನೋಂದಾಯಿಸಿ
ಪುತ್ತೂರು: ಮಕ್ಕಳಿಗೆ ರಜೆ ಆರಂಭವಾಯಿತೆಂದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಕಂಟ್ರೋಲು ಮಾಡುವುದು ಹೇಗಪ್ಪಾ ಅನ್ನುವ ಚಿಂತೆ ಶುರು. ಪೋಷಕರ ತಲೆಬಿಸಿ ಕಡಿಮೆ ಮಾಡಲು ಮತ್ತೊಮ್ಮೆ ವಿನೂತನ ಶೈಲಿಯ ವಿಚಾರಗಳೊಂದಿಗೆ ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ಪ್ರಸ್ತುತ ಪಡಿಸುತ್ತಿದೆ ಹ್ಯಾಪಿ ಡೇಸ್ ವಿಂಟರ್ ಕಿಡ್ಸ್ ಕ್ಯಾಂಪ್-2023.
ಕಿಡ್ಸ್ ಕ್ಯಾಂಪ್ ಯಾತಕ್ಕಾಗಿ:
ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ, ಅದೇ ಸ್ನೇಹಿತರನ್ನು ಹೊಂದಿದ್ದ ಮಗುವಿಗೆ ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ. ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ ತಮ್ಮ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಶಿಬಿರಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ. ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ, ಎಲ್ಲರ ಜೊತೆ ಪಾಳ್ಗೊಳ್ಳುವಿಕೆಯಲ್ಲಿ, ಕರ್ತವ್ಯ ಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲಿ ಕ್ಯಾಂಪ್ಗಳ ಮಹತ್ವ ಹೆಚ್ಚಿನದು. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧ ಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ. ಶಿಬಿರಗಳು ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ಪರೀಕ್ಷೆಗಳ ಜಂಜಾಟಗಳಿಂದ ಬಳಲಿದ ಮಕ್ಕಳ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲೆ, ವಿಶಿಷ್ಟ ರೀತಿಯ ಶಿಕ್ಷಣ, ಯೋಗ, ವೈಜ್ಞಾನಿಕ ಪ್ರಯೋಗಗಳು, ಆಟೋಟ ಇತ್ಯಾದಿ ಚಟುವಟಿಕೆಗಳು ಮಕ್ಕಳಿಗೆ ಹೊಸ ನೆಲೆಗಟ್ಟನ್ನು ಒದಗಿಸುತ್ತದೆ.
ಕಿಡ್ಸ್ ಕ್ಯಾಂಪ್ ಯಾವ ವಯಸ್ಸಿನ ಮಕ್ಕಳಿಗಾಗಿ:
5 ರಿಂದ13 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು. ಕಿಡ್ಸ್ ಕ್ಯಾಂಪ್ 16-10-2023 ಸೋಮವಾರ ದಿಂದ 20-10-2023 ಶುಕ್ರವಾರದ ತನಕ ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಪುತ್ತೂರಿನ ಸ್ವಾಗತ್ ಬಿಲ್ಡಿಂಗಿನ ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ನಲ್ಲಿ ನಡೆಯುತ್ತದೆ.
ಐ.ಆರ್.ಸಿ.ಎಂ.ಡಿ ಹ್ಯಾಪಿ ಡೇಸ್ ಕಿಡ್ಸ್ ಕ್ಯಾಂಪ್ ವಿಶೇಷತೆ:
ತಾನು ನಡೆಸುವ ಪ್ರತಿ ಕ್ಯಾಂಪ್ ನಲ್ಲೂ ವಿಶಿಷ್ಟ ರೀತಿಯ ಚಟುವಟಿಕೆಗಳನ್ನು ಮಕ್ಕಳಿಗಾಗಿ ಅತ್ಯಂತ ಅಚ್ಚುಕಟ್ಟಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುವ ಶಿಕ್ಷಣ ಸಂಸ್ಥೆ ಇದಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿನೂತನ ರೀತಿಯಲ್ಲಿ ಮಕ್ಕಳ ಆಸಕ್ತಿಯನ್ನು ಕೇಂದ್ರಿಕರಿಸಿ ನಡೆಸುವ ಒಂದು ಉತ್ತಮ ಶಿಬಿರವೇ ಈ ಕ್ಯಾಂಪ್ ಆಗಿದೆ.
ಐ.ಆರ್.ಸಿ.ಎಂ.ಡಿ ಕಿಡ್ಸ್ ಕ್ಯಾಂಪ್ ನಲ್ಲಿ ಏನೇನಿದೆ:
ವಿಜ್ಞಾನ ಪ್ರಯೋಗಗಳು-ವಿಜ್ಞಾನ ಜಗತ್ತಿನ ಕಡೆ ಮಕ್ಕಳನ್ನು ಆಕರ್ಷಿಸುವುದು ಮತ್ತು ಮಕ್ಕಳನ್ನು ಪ್ರಶ್ನೆ ಮಾಡುವಂತೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ರಾಕೆಟ್ ಉಡಾವಣೆ: ರಾಕೆಟ್ ಭಾಗಗಳ ಬಗ್ಗೆ ವಿವರಣೆ, ರಾಕೆಟ್ ಮೇಲಕ್ಕೆ ಪ್ರಯಾಣಿಸುವ ಬಗ್ಗೆ ಮಾಹಿತಿ ಮತ್ತು ವಿಶಿಷ್ಟ ರೀತಿಯಲ್ಲಿ ರಾಕೆಟ್ ಉಡಾವಣೆ.
ಸುಲಭ ಗಣಿತ:ಗಣಿತವೆಂದರೆ ಸಾಕು ಬಹುತೇಕ ವಿದ್ಯಾರ್ಥಿಗಳಲ್ಲಿ ನಡುಕ. ಆದರೆ ಗಣಿತ ಕಬ್ಬಿಣದ ಕಡಲೆಯಲ್ಲ. ಅದನ್ನು ಒಲಿಸಿಕೊಳ್ಳುವ ಸುಲಭ ಮಾರ್ಗವೇ ವೇದ ಗಣಿತ. ಮಕ್ಕಳಿಗಾಗಿ ಮೋಜಿನ ಮೂಲಕ ಗಣಿತ ಕಲಿಕೆ.
ಅಗ್ನಿಹೋತ್ರ ಮತ್ತು ಯೋಗ: ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ. ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.
ಪಬ್ಲಿಕ್ ಸ್ಪೀಕಿಂಗ್: ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಳ್ಳುವ ಬಗ್ಗೆ ವಿವರಣೆ, ತರಗತಿಯಲ್ಲಿ ಪ್ರಸ್ತುತಪಡಿಸುವಿಕೆ, ಆತ್ಮವಿಶ್ವಾಸ ಹೆಚ್ಚಿಸುವಿಕೆ,ಆಲಿಸುವಿಕೆ, ಭಯ ನಿವಾರಣೆ.
ಕಲೆ ಮತ್ತು ಕರಕುಶಲ: ಮಕ್ಕಳ ಚಿಂತನೆ, ಭಾವನೆ, ನಂಬಿಕೆ ಅಥವಾ ಕಲ್ಪನೆಗಳನ್ನು ಸಂವೇದನಾ ಶಕ್ತಿ ಮೂಲಕ ಉತ್ತೇಜಿಸುವುದು, ಮನೋಲ್ಲಾಸವನ್ನು ಉಂಟುಮಾಡುವ ಏಕೈಕ ಭಾವನೆಯೇ ಕಲೆ ಮತ್ತು ಕರಕುಶಲ ಸೃಷ್ಟಿ.
ಕ್ಯಾಲಿಗ್ರಫಿ ಬರವಣಿಗೆ: ಅಕ್ಷರ ವಿನ್ಯಾಸ, ಕೈ ಬರಹದ ಸುಂದರ ಶೈಲಿ.
ಕ್ವಿಜ್:ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಕೀಡೆ ಹಾಗೂ ಇತ್ಯಾದಿ ವಿಷಯಗಳಲ್ಲಿ ಕುತೂಹಲ ಹುಟ್ಟಿಸುವ ಒಂದು ಆಶಯ.
ಟೀಮ್ ಗೇಮ್: ಮಕ್ಕಳಲ್ಲಿ ಆತ್ಮವಿಶ್ವಾಸ, ಇಚ್ಛಾಶಕ್ತಿ, ಗೌರವ, ಸಾಮಾಜಿಕ ಕೌಶಲ್ಯ, ಬಲವಾದ ಸಂಬಂಧ, ಪರಿಶ್ರಮ ಇತ್ಯಾದಿ ಅಭಿವೃದ್ಧಿ ಪಡಿಸುವಿಕೆ ಮತ್ತು ಇತರೆ ಚಟುವಟಿಕೆಗಳು.
ಶಾಲೆಯಲ್ಲಿ ಯಾಂತ್ರಿಕವಾಗಿ ಕಲಿಯುವ ಮಕ್ಕಳನ್ನು ಸೃಜನಾತ್ಮಕವಾಗಿ ಯೋಚಿಸಿ ಕಾರ್ಯತತ್ಪರಾಗುವಂತೆ ಮಾಡಿಸಿ, ಕಲೆ, ವಿಜ್ಞಾನ, ಭಾಷಾ ಕಲಿಕೆ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ವಿಶೇಷ ಆಕರ್ಷಕ ಚಟುವಟಿಕೆಗಳನ್ನು ಈ ಕ್ಯಾಂಪ್ ನಲ್ಲಿ ಅಳವಡಿಸಿಕೊಂಡಿದ್ದು ದಿನಾಂಕ 16 ನೇ ಅಕ್ಟೋಬರ್2023 ರಿಂದ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಪುತ್ತೂರಿನ ಅರುಣಾ ಥಿಯೇಟರ್ ಬಳಿ ಕಾರ್ಯಾಚರಿಸುತ್ತಿರುವ IRCMD ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 5 ದಿನದ ಕ್ಯಾಂಪ್ ನಡೆಯಲಿದೆ.
ನೋಂದಾವಣೆಗಾಗಿ:
5 ವರ್ಷದಿಂದ 13 ವರ್ಷದ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶವನ್ನು ಪಡೆಯಲಿಚ್ಛಿಸುವವರು 9945988118 ಅಥವಾ 9632320477 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರು ತಿಳಿಸಿರುತ್ತಾರೆ.