ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.ಕೇರಳದ ಕಣ್ಣೂರು ಜಿಲ್ಲೆಯ ಪಾಡೋಯೋಟು ಚಲ್ಲ್ ನಿವಾಸಿ ಸುಯಿಶ್ ಟಿ ಸಿ (34) ಎಂಬವರು ತನ್ನ ಕಾರಿನಲ್ಲಿ, ಅವರ ಚಿಕ್ಕಮ್ಮನೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ತೆರಳಿದ್ದವರು, ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ,ದೇವಸ್ಥಾನಕ್ಕೆ ಹೋಗಿದ್ದರು.
ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಸ್ವಲ್ಪ ಸಮಯದ ಬಳಿಕ ಕಾರಿನ ಬಳಿ ಬಂದು ನೋಡಲಾಗಿ , ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಕಾರಿನಲ್ಲಿದ್ದ ಎರಡು ಬ್ಯಾಗ್ ಗಳನ್ನು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.
ಬ್ಯಾಗ್ ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಆಧಾರ್ ಕಾರ್ಡ್ ,ಎಟಿಎಂ, ಇತ್ಯಾದಿ ದಾಖಲಾತಿಗಳಿಗಿತ್ತು. ಕಳುವಾದ ಸೊತ್ತಿನ ಅಂದಾಜು ಮೌಲ್ಯ 42,000/- ಆಗಬಹುದು ಎಂದು ಅಂದಾಜಿಸಲಾಗಿದೆ.ಈ ಕುರಿತು ಸುಯಿಶ್ ಅವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 71/2023 ಕಲಂ:379 IPC ಯಂತೆ ಪ್ರಕರಣ ದಾಖಲಾಗಿದೆ.