ಪುತ್ತೂರು: ಪುತ್ತೂರು ತಾಲೂಕಿನ ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ /ಗ್ರಾಮೀಣ /ನಗರ ಪುನರ್ ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನೂತನ ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀರವರು ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ mrw/vrw/urwಗಳ ಹಾಜರಾತಿ ದಿನಚರಿ, ಯು.ಡಿ.ಐಡಿ. ಪ್ರಗತಿವಾರು ವರದಿ, ಆಧಾರ್ ಕಾರ್ಡ್ ಇಲ್ಲದೇ ಮಲಗಿದ್ದಲ್ಲೇ ಇರುವ ವಿಕಲ ಚೇತನರ ವ್ಯಕ್ತಿಗಳ ಮಾಹಿತಿ ಪರಿಶೀಲನೆ ಮಾಡಿದರು. ಬಳಿಕ ಇಲಾಖೆಯ ಮಾಹಿತಿ ನೀಡಿದರು. ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಸಂಯೋಜಕ ನವೀನ್ ಕುಮಾರ್, ಸೆಪ್ಟೆಂಬರ್ ತಿಂಗಳ ಪ್ರಗತಿ ಪರಿಶೀಲನ ಸಭೆಯ ವರದಿ ವಾಚಿಸಿದರು.
ನೂತನ ನೋಡಲ್ ಅಧಿಕಾರಿಗೆ ಅಭಿನಂದನೆ:
ನೂತನ ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀರವರನ್ನು ಹೂ ಗುಚ್ಚ ನೀಡಿ ಪುತ್ತೂರು ತಾಲೂಕೀನ ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರ ಪರವಾಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿನಂದನೆ ಮಾಡಲಾಯಿತು.ಗ್ರಾಮೀಣ /ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು. 34ನೇ ನೆಕ್ಕಿಲಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸೇಸಪ್ಪ ಶಾಂತಿನಗರ ಸ್ವಾಗತಿಸಿ ನರಿಮೊಗುರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ಮೀರಮ್ಮ ವಂದಿಸಿದರು.